AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhanush: ತಲೆ ಬೋಳಿಸಿಕೊಂಡ ಖ್ಯಾತ ನಟ ಧನುಷ್​; ಅಭಿಮಾನಿಗಳಲ್ಲಿ ಮೂಡಿತು ಗುಮಾನಿ

Dhanush Viral Photo: ಇಷ್ಟು ದಿನ ಬಿಯರ್ಡ್​ ಲುಕ್​ನಲ್ಲಿ ಓಡಾಡುತ್ತಿದ್ದ ಧನುಷ್​ ಅವರು ಏಕಾಏಕಿ ಆ ಗೆಟಪ್​ಗೆ ಮುಕ್ತಿ ನೀಡಿದ್ದಾರೆ. ಸಂಪೂರ್ಣ ಬೋಳು ತಲೆ ಮಾಡಿಕೊಂಡು ಬಂದಿದ್ದಾರೆ.

Dhanush: ತಲೆ ಬೋಳಿಸಿಕೊಂಡ ಖ್ಯಾತ ನಟ ಧನುಷ್​; ಅಭಿಮಾನಿಗಳಲ್ಲಿ ಮೂಡಿತು ಗುಮಾನಿ
ಧನುಷ್​
ಮದನ್​ ಕುಮಾರ್​
|

Updated on: Jul 03, 2023 | 5:01 PM

Share

ನಟ ಧನುಷ್​ (Dhanush) ಅವರು ಕಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಪ್ರತಿ ಸಿನಿಮಾದಲ್ಲಿ ಅವರು ವಿಶೇಷವಾದ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಈಗ ಅವರು ‘ಕ್ಯಾಪ್ಟನ್​ ಮಿಲ್ಲರ್​’ (Captain Miller) ಸಿನಿಮಾದ ಬಿಡುಗಡೆಗಾಗಿ ಕಾದಿದ್ದಾರೆ. ಈ ನಡುವೆ ಅವರ ಹೊಸ ಲುಕ್​ ವೈರಲ್​ ಆಗಿದೆ. ಧನುಷ್​ ಅವರು ತಲೆ ಬೋಳಿಸಿಕೊಂಡಿದ್ದಾರೆ. ರುದ್ರಾಕ್ಷಿ ಮಾಲೆ ಧರಿಸಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ತಿರುಪತಿ ತಿಮ್ಮಪ್ಪನ (Tirupati Temple) ದರ್ಶನ ಪಡೆದಿರುವ ಅವರು ಮುಡಿ ಕೊಟ್ಟಿದ್ದಾರೆ. ಅವರ ಫೋಟೋಗಳು ವೈರಲ್​ ಆಗಿವೆ. ಅದರ ಬೆನ್ನಲ್ಲೇ ಒಂದಷ್ಟು ಪ್ರಶ್ನೆಗಳು ಮೂಡಿವೆ. ಇದು ಧನುಷ್​ ಅವರ ಮುಂಬರುವ ಸಿನಿಮಾಗೆ ನಡೆಯುತ್ತಿರುವ ತಯಾರಿ ಎಂದು ಕೆಲವರು ಊಹಿಸಿದ್ದಾರೆ. ಹೊಸ ಸಿನಿಮಾದಲ್ಲಿ ಧನುಷ್​ ಗೆಟಪ್​ ಹೀಗೆಯೇ ಇರಲಿದೆ ಎಂದು ಒಂದಷ್ಟು ಮಂದಿ ಊಹಿಸುತ್ತಿದ್ದಾರೆ.

‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದಲ್ಲಿ ಧನುಷ್​ ಅವರಿಗೆ ರಗಡ್​ ಗೆಟಪ್​ ಇದೆ. ಉದ್ದ ಕೂದಲು ಮತ್ತು ಗಡ್ಡ ಬಿಟ್ಟುಕೊಂಡು ಅವರು ನಟಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಫಸ್ಟ್​ ಲುಕ್​ ವೈರಲ್​ ಆಗಿತ್ತು. ಅಲ್ಲದೇ ಈ ಹಿಂದೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಬಿಯರ್ಡ್​ ಲುಕ್​ ಗಮನ ಸೆಳೆದಿತ್ತು. ಈಗ ಏಕಾಏಕಿ ಅವರು ಆ ಗೆಟಪ್​ಗೆ ಮುಕ್ತಿ ನೀಡಿದ್ದಾರೆ. ಸಂಪೂರ್ಣ ಬೋಳು ತಲೆ ಮಾಡಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಪೋಷಕರಿಗೆ 150 ಕೋಟಿ ರೂಪಾಯಿ ಮನೆ ಉಡುಗೊರೆ ನೀಡಿದ ಧನುಷ್​; ಹೇಗಿದೆ ನೋಡಿ ನಿವಾಸ

ಧನುಷ್​ ಅವರು 50ನೇ ಚಿತ್ರದ ತಯಾರಿಯಲ್ಲಿದ್ದಾರೆ. ಇದನ್ನು ತಾತ್ಕಾಲಿಕವಾಗಿ ‘ಡಿ50’ ಎಂದು ಕರೆಯಲಾಗುತ್ತಿದೆ. ಈ ಸಿನಿಮಾ ಸಲುವಾಗಿಯೇ ಅವರು ತಲೆ ಬೋಳಿಸಿಕೊಂಡಿದ್ದಾರೆ ಎಂಬುದು ಕೆಲವರ ಊಹೆ. ಆದರೆ ಈ ಬಗ್ಗೆ ಧನುಷ್​ ಕಡೆಯಿಂದ ಸ್ಪಷ್ಟನೆ ಸಿಕ್ಕಿಲ್ಲ. ಧನುಷ್​ ಅವರು ತಿರುಪತಿಗೆ ಭೇಟಿ ನೀಡಿದ ವೇಳೆ ಅವರ ಮಕ್ಕಳಾದ ಯಾತ್ರ, ಲಿಂಗ ಹಾಗೂ ಪೋಷಕರಾದ ಕಸ್ತೂರಿ ರಾಜ ಮತ್ತು ವಿಜಯಲಕ್ಷ್ಮೀ ಕೂಡ ಜೊತೆಗಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಒಟ್ಟಿಗೆ ಕುಳಿತು ಐಪಿಎಲ್ ಮ್ಯಾಚ್ ನೋಡಿದ ಶಿವಣ್ಣ-ಧನುಷ್​; ಇಲ್ಲಿವೆ ಫೋಟೋಸ್

ಧನುಷ್​ ಅವರ ‘ಡಿ50’ ಸಿನಿಮಾಗೆ ಸನ್​ ಪಿಕ್ಚರ್ಸ್​ ಬಂಡವಾಳ ಹೂಡಲಿದೆ. ಮುಖ್ಯಭೂಮಿಕೆಯಲ್ಲಿ ನಟಿಸುವುದರ ಜೊತೆಗೆ ಧನುಷ್​ ಅವರೇ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಸದ್ಯಕ್ಕೆ ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಆ ಸಿನಿಮಾದಲ್ಲಿ ಧನುಷ್​ ಜೊತೆ ಶಿವರಾಜ್​ಕುಮಾರ್​ ನಟಿಸಿದ್ದಾರೆ. ಹಾಗಾಗಿ ಕನ್ನಡಿಗರು ಕೂಡ ‘ಕ್ಯಾಪ್ಟನ್​ ಮಿಲ್ಲರ್​’ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ