ಪೋಷಕರಿಗೆ 150 ಕೋಟಿ ರೂಪಾಯಿ ಮನೆ ಉಡುಗೊರೆ ನೀಡಿದ ಧನುಷ್​; ಹೇಗಿದೆ ನೋಡಿ ನಿವಾಸ

ಚೆನ್ನೈನ ಪೋಯಿಸ್ ಗಾರ್ಡನ್​​ನಲ್ಲಿ ಈ ಮನೆ ಇದೆ. ಗೃಹಪ್ರವೇಶದ ಸಂದರ್ಭದಲ್ಲಿ ಧನುಷ್ ಅವರು ನೀಲಿ ಬಣ್ಣದ ಕುರ್ತಾ ಹಾಗೂ ಬಿಳಿ ಬಣ್ಣದ ಪೈಜಾಮ ಧರಿಸಿದ್ದರು.

ಪೋಷಕರಿಗೆ 150 ಕೋಟಿ ರೂಪಾಯಿ ಮನೆ ಉಡುಗೊರೆ ನೀಡಿದ ಧನುಷ್​; ಹೇಗಿದೆ ನೋಡಿ ನಿವಾಸ
ಧನುಷ್
Follow us
ರಾಜೇಶ್ ದುಗ್ಗುಮನೆ
|

Updated on: Feb 20, 2023 | 3:14 PM

ನಟ ಧನುಷ್ (Dhanush) ಅವರು ಕಾಲಿವುಡ್​ನಲ್ಲಿ ಫೇಮಸ್ ಆಗಿದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಈಗ ಅವರು ತಮ್ಮ ಪೋಷಕರಿಗೆ 150 ಕೋಟಿ ರೂಪಾಯಿ ವೆಚ್ಛದಲ್ಲಿ ನಿರ್ಮಾಣವಾದ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದು ಧನುಷ್ ಅವರ ಕನಸಿನ ಮನೆಯಾಗಿದೆ. ಇತ್ತೀಚೆಗೆ ಈ ಮನೆಯ ಗೃಹಪ್ರವೇಶ ಕಾರ್ಯಗಳು ನಡೆದಿವೆ. ಈ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಟನಿಗೆ ಅವರು ಶುಭಾಶಯ ತಿಳಿಸುತ್ತಿದ್ದಾರೆ.

ಚೆನ್ನೈನ ಪೋಯಿಸ್ ಗಾರ್ಡನ್​​ನಲ್ಲಿ ಈ ಮನೆ ಇದೆ. ಗೃಹಪ್ರವೇಶದ ಸಂದರ್ಭದಲ್ಲಿ ಧನುಷ್ ಅವರು ನೀಲಿ ಬಣ್ಣದ ಕುರ್ತಾ ಹಾಗೂ ಬಿಳಿ ಬಣ್ಣದ ಪೈಜಾಮ ಧರಿಸಿದ್ದರು. ಅವರ ತಂದೆ ನೀಲಿ ಬಣ್ಣದ ಶರ್ಟ್ ಹಾಗೂ ಕ್ರೀಂ ಬಣ್ಣದ ಲುಂಗಿ ಉಟ್ಟಿದ್ದರು. ಧನುಷ್ ತಾಯಿ ಅವರು ನೀಲಿ ಹಾಗೂ ಪಿಂಕ್ ಕಾಂಬಿನೇಷನ್​ನ ಸೀರೆ ಉಟ್ಟಿದ್ದರು. ವೈರಲ್ ಆದ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಮನೆಯ ಗೃಹಪ್ರವೇಶದ ಸಂದರ್ಭದಲ್ಲಿ ಧನುಷ್ ಅವರು ಟೆರೇಸ್​ನಲ್ಲಿ ನಿಂತಿರುವ ಫೋಟೋಗಳು ವೈರಲ್ ಆಗಿವೆ. ಬಂದ ಅತಿಥಿಗಳಿಗೆ ಹಣ್ಣು ನೀಡುತ್ತಿರುವ ಫೋಟೋಗಳು ಕೂಡ ಫ್ಯಾನ್ ಪೇಜ್​ಗಳಲ್ಲಿ ಹರಿದಾಡಿವೆ. ನಿರ್ದೇಶಕ ಸುಬ್ರಮಣಿಯಮ್ ಶಿವ ಅವರು ಮನೆಯ ಫೋಟೋನ ಪೋಸ್ಟ್ ಮಾಡಿ, ‘ಈ ಮನೆ ದೇವಾಲಯದಂತೆ ಭಾವಾಗುತ್ತಿದೆ. ತಂದೆ-ತಾಯಿ ಬದುಕಿರುವಾಗಲೇ ಸ್ವರ್ಗದಲ್ಲಿ ಉಳಿಸುವವರನ್ನು ನೋಡಿದರೆ ಅಂಥವರು ದೇವರಂತೆ ಕಾಣುತ್ತಾರೆ. ಅವರ ಮಕ್ಕಳಿಗೆ ಹಾಗೂ ಇತರರಿಗೆ ಮಾದರಿ ಆಗಿ ಕಾಣುತ್ತಾರೆ. ಹೆಚ್ಚು ಕಾಲ ಬಾಳಿ’ ಎಂದು ಸುಬ್ರಮಣಿಯಮ್ ಶಿವ ಪೋಸ್ಟ್ ಮಾಡಿದ್ದಾರೆ.

ಈ ಮನೆ ನಾಲ್ಕು ಅಂತಸ್ತನ್ನು ಹೊಂದಿದೆ. 2021ರಲ್ಲಿ ಈ ಮನೆಯ ಬಗ್ಗೆ ಮಾಹಿತಿ ಹೊರಬಿದ್ದಿತ್ತು. ಈ ಮನೆ ನಿರ್ಮಾಣದ ಸಂದರ್ಭದಲ್ಲಿ ನಡೆದ ಪೂಜೆಯಲ್ಲಿ ಧನುಷ್ ಮಾಜಿ ಪತ್ನಿ ಐಶ್ವರ್ಯಾ, ರಜನಿಕಾಂತ್ ಕೂಡ ಇದ್ದರು. ಈಗ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಮನೆ ಗೃಹಪ್ರವೇಶಕ್ಕೆ ಅವರಿಲ್ಲ ಎನ್ನುವುದು ಬೇಸರದ ಸಂಗತಿ. ಈ ಬಗ್ಗೆಯೂ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. 2022ರಲ್ಲಿ ಧನುಷ್ ಹಾಗೂ ಐಶ್ವರ್ಯಾ ವಿಚ್ಛೇದನ ಪಡೆದುಕೊಳ್ಳುತ್ತಿರುವ ಬಗ್ಗೆ ಘೋಷಣೆ ಮಾಡಿದರು.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಚಿತ್ರ ಒಪ್ಪಿಕೊಂಡ ಶಿವರಾಜ್​ಕುಮಾರ್? ಧನುಷ್ ಜತೆ ಕೈ ಜೋಡಿಸ್ತಾರೆ ಹ್ಯಾಟ್ರಿಕ್ ಹೀರೋ

ವಿಚ್ಛೇದನದ ಬಗ್ಗೆ ಧನುಷ್ ಹೇಳಿದ್ದೇನು?

18 ವರ್ಷಗಳಿಂದ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಪರಸ್ಪರ ಜತೆಗಿದ್ದೆವು. ಈ ಹಾದಿಯಲ್ಲಿ ಈರ್ವರೂ ಬೆಳೆದವು, ಅರ್ಥ ಮಾಡಿಕೊಂಡೆವು ಹಾಗೂ ಹೊಂದಿಕೆಯನ್ನು ಕಲಿತೆವು. ಈಗ ಈರ್ವರೂ ಭಿನ್ನ ದಾರಿಗಳಲ್ಲಿ ನಿಂತಿದ್ದೇವೆ. ಆದ್ದರಿಂದ ನಾನು ಮತ್ತು ಐಶ್ವರ್ಯಾ ಪರಸ್ಪರ ಒಪ್ಪಿಗೆಯಿಂದ ಬೇರೆಯಾಗುತ್ತಿದ್ದೇವೆ. ವೈಯಕ್ತಿಕವಾಗಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳು ಸಮಯ ತೆಗೆದುಕೊಳ್ಳುವೆವು’’ ಎಂದು ಬರೆದಿದ್ದಾರೆ. ಅಲ್ಲದೇ ಈರ್ವರ ಖಾಸಗಿತನವನ್ನು ಗೌರವಿಸುವಂತೆ ಧನುಷ್ ಮನವಿ ಮಾಡಿದ್ದು, ‘‘ಓಂ ನಮಃ ಶಿವಾಯ’’ ಎಂದು ಬರೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶ್ರೀಲಕ್ಷ್ಮಿ ಎಚ್​.