
ಮಲಯಾಳಂನ ‘ದೃಶ್ಯಂ’ ಹಾಗೂ ‘ದೃಶ್ಯಂ 2’ ಸಿನಿಮಾಗಳು ಕನ್ನಡದಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ಮೂಲ ಚಿತ್ರದಲ್ಲಿ ಮೋಹನ್ಲಾಲ್ ಹೀರೋ ಆದರೆ, ರಿಮೇಕ್ನಲ್ಲಿ ರವಿಚಂದ್ರನ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಮಲಯಾಳಂ ನಿರ್ದೇಶಕ ಜೀತು ಜೊಸೆಫ್ ಅವರು ‘ದೃಶ್ಯಂ 3’ (Drishyam 3) ಅನೌನ್ಸ್ ಮಾಡಿದ್ದಾರೆ. ಆದರೆ, ಇದು ಸಸ್ಪೆನ್ಸ್ ಥ್ರಿಲ್ಲರ್ ಆಗಿರೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಿನಿಮಾ ನೋಡಿದ ಬಳಿಕ ಅದು ಯಾಕೆ ಎಂಬ ವಿಚಾರ ಗೊತ್ತಾಗಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
‘ದೃಶ್ಯಂ’ ಹಾಗೂ ‘ದೃಶ್ಯಂ 2’ ಚಿತ್ರಗಳು ಪ್ರತಿ ಹಂತದಲ್ಲೂ ಟ್ವಿಸ್ಟ್ಗಳನ್ನು ಹೊಂದಿತ್ತು. ಎರಡನೇ ಪಾರ್ಟ್ ಕೊನೆಯಲ್ಲಿ ಮೂರನೇ ಪಾರ್ಟ್ಗೆ ಕನೆಕ್ಷನ್ ನೀಡಲಾಗಿತ್ತು. ಈ ಸಿನಿಮಾದಲ್ಲೂ ಥ್ರಿಲ್ಲರ್ ಇರಲಿದೆ ಎಂದು ಅನೇಕರು ಊಹಿಸಿದ್ದರು. ಆದರೆ, ‘ಇದು ಥ್ರಿಲ್ಲರ್ ಅಲ್ಲ ಎಂದು ನಾನು ಭಾವಿಸುತ್ತೇನೆ. ಸಿನಿಮಾ ನೋಡಿದ ನಂತರ ಏಕೆ ಎಂದು ನಿಮಗೆ ತಿಳಿಯುತ್ತದೆ’ ಎಂದಿದ್ದಾರೆ ಅವರು.
‘ದೃಶ್ಯಂ 2 ನೋಡಿದ ನಂತರ, ಮೋಹನ್ಲಾಲ್ ಮೂರನೇ ಭಾಗ ಬರುತ್ತದೆಯೇ ಎಂದು ಕೇಳಿದರು. ನನಗೆ ಗೊತ್ತಿಲ್ಲ ಎಂದು ಹೇಳಿದೆ. ಸಿನಿಮಾ ಸಂಭವಿಸಿದರೆ ಕ್ಲೈಮ್ಯಾಕ್ಸ್ ಈ ರೀತಿ ಇರಬೇಕು ಎಂದು ನಾನು ಅವರಿಗೆ ಹೇಳಿದೆ. ನನಗೆ ಸ್ಟೋರಿ ಮಾಡುವಂತೆ ಅವರು ಕೇಳಿದರು. ಇದಕ್ಕೆ ನನಗೆ ಸ್ವಲ್ಪ ಸಮಯ ಹಿಡಿಯಿತು’ ಎಂದಿದ್ದಾರೆ ಜೋಸೆಫ್.
‘ನಾನು ಇದನ್ನು ಹಣಕ್ಕಾಗಿ ಮಾಡುತ್ತಿಲ್ಲ ಎಂಬುದನ್ನು ನಿರ್ಮಾಪಕರಿಗೂ ಹೇಳಿದ್ದೇನೆ. ಇದು ಥ್ರಿಲ್ಲರ್ ಸಿನಿಮಾ ಅಲ್ಲ. ಜಾರ್ಜ್ಕುಟ್ಟಿ ಮತ್ತು ಕುಟುಂಬದವರಿಗೆ ಏನಾಯಿತು ಎಂಬುದಷ್ಟೇ ಚಿತ್ರದಲ್ಲಿ ಇರಲಿದೆ. ಇದನ್ನು ನಾನು ನಿರ್ಮಾಪಕರಿಗೆ ಮನದಟ್ಟು ಮಾಡಿಕೊಟ್ಟಿದ್ದೇನೆ. ಇದರಲ್ಲಿ ರಿಸ್ಕ್ ಇದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ದೃಶ್ಯಂ 3’ ವಿವಾದ: ಅಜಯ್ ದೇವಗನ್ ಮೇಲೆ ಕೇಸು, ನಿರ್ದೇಶಕ ಹೇಳಿದ್ದೇನು?
‘ನಾನು ಥ್ರಿಲ್ಲರ್‌ಗಳಿಂದ ಬೇಸತ್ತಿದ್ದೇನೆ. ನಾನು ಹೊಸದನ್ನು ಪ್ರಯತ್ನಿಸಲು ಬಯಸುತ್ತೇನೆ. ಅದು ವಿಫಲವಾದರೂ ಸಹ’ ಎಂದು ಅವರು ಹೇಳಿದ್ದಾರೆ. ಅಕ್ಟೋಬರ್ನಲ್ಲಿ ‘ದೃಶ್ಯಂ 3’ ಸಿನಿಮಾ ಶೂಟ್ ಶುರುವಾಗಲಿದೆ ಎನ್ನಲಾಗಿದೆ. ಈ ಸಿನಿಮಾನ ಹಿಂದಿ ಹಾಗೂ ಕನ್ನಡದಲ್ಲಿಯೂ ಒಟ್ಟಿಗೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅಂದರೆ, ಈ ಮೂರು ಭಾಷೆಯಲ್ಲಿ ಸಿನಿಮಾನ ಒಟ್ಟಿಗೆ ರಿಲೀಸ್ ಮಾಡುವ ಪ್ಲ್ಯಾನ್ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.