AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೃಶ್ಯಂ 3’ ವಿವಾದ: ಅಜಯ್ ದೇವಗನ್ ಮೇಲೆ ಕೇಸು, ನಿರ್ದೇಶಕ ಹೇಳಿದ್ದೇನು?

Drishyam 3 movie: ‘ದೃಶ್ಯಂ 3’ ಸಿನಿಮಾದ ಪ್ರೀ ಪ್ರೊಡಕ್ಷನ್ ಈಗಾಗಲೇ ಆರಂಭವಾಗಿದೆ. ಈ ಸಿನಿಮಾ ಮಲಯಾಳಂ ಹಾಗೂ ಹಿಂದಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳಲಿದೆ ಎಂಬ ಸುದ್ದಿ ಹರಿದಾಡಿತ್ತು. ಇತ್ತೀಚೆಗೆ ಬಂದ ಸುದ್ದಿಯಂತೆ ಮೂಲ ‘ದೃಶ್ಯಂ’ ಸಿನಿಮಾ ನಿರ್ದೇಶಕ ಜೀತು ಜೋಸೆಫ್ ಹಾಗೂ ಹಿಂದಿ ಚಿತ್ರತಂಡದ ನಡುವೆ ಭಿನ್ನಾಭಿಪ್ರಾಯ ಮೂಡಿದೆಯಂತೆ.

‘ದೃಶ್ಯಂ 3’ ವಿವಾದ: ಅಜಯ್ ದೇವಗನ್ ಮೇಲೆ ಕೇಸು, ನಿರ್ದೇಶಕ ಹೇಳಿದ್ದೇನು?
Drishyam 3
ಮಂಜುನಾಥ ಸಿ.
|

Updated on: Jul 25, 2025 | 4:20 PM

Share

‘ದೃಶ್ಯಂ’ ಸಿನಿಮಾ ಭಾರತದ ಅತ್ಯುತ್ತಮ ಕ್ರೈಂ ಥ್ರಿಲ್ಲರ್ ಸಿನಿಮಾ. ಅತಿ ಹೆಚ್ಚು ಬಾರಿ ರೀಮೇಕ್ ಆದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ‘ದೃಶ್ಯಂ’ ಸಿನಿಮಾದ್ದು. ಮಲಯಾಳಂನಲ್ಲಿ ಮೊದಲು ನಿರ್ಮಾಣವಾದ ‘ದೃಶ್ಯಂ’ ಸಿನಿಮಾ ಅನ್ನು ನಿರ್ದೇಶಿಸಿದ್ದು ಜೀತು ಜೋಸೆಫ್. ಆ ನಂತರ ಅವರು ‘ದೃಶ್ಯಂ2’ ಸಿನಿಮಾ ಸಹ ನಿರ್ಮಿಸಿದರು. ಆ ಸಿನಿಮಾ ಅನ್ನು ಹಿಂದಿಯಲ್ಲಿ ಅಜಯ್ ದೇವಗನ್ ರೀಮೇಕ್ ಮಾಡಿದರು. ಈಗ ಮಲಯಾಳಂ ರೀತಿಯಲ್ಲೇ ಹಿಂದಿಯಲ್ಲಿಯೂ ‘ದೃಶ್ಯಂ’ ಸಿನಿಮಾ ಸರಣಿ ಚಾಲ್ತಿಯಲ್ಲಿದೆ. ಇದೀಗ ‘ದೃಶ್ಯಂ 3’ ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದ್ದು, ಈಗ ಮಲಯಾಳಂ ಮತ್ತು ಹಿಂದಿ ಸಿನಿಮಾ ತಂಡಗಳ ನಡುವೆ ವಿವಾದ ಉಂಟಾಗಿದೆ ಎನ್ನಲಾಗುತ್ತಿದೆ.

ಮೊದಲಿಗೆ ‘ದೃಶ್ಯಂ 3’ ಸಿನಿಮಾ ಅನ್ನು ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ನಿರ್ಮಾಣ ಮಾಡಲಾಗುತ್ತದೆ ಎನ್ನಲಾಗಿತ್ತು. ಎರಡೂ ಸಿನಿಮಾಗಳನ್ನು ಜೀತು ಜೋಸೆಫ್ ಅವರೇ ನಿರ್ಮಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಇತ್ತೀಚೆಗೆ ಹೊರಬಿದ್ದ ಸುದ್ದಿಯಂತೆ. ನಿರ್ದೇಶಕ ಜೀತು ಜೋಸೆಫ್ ಹಾಗೂ ಹಿಂದಿಯ ಚಿತ್ರತಂಡದ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದ್ದು ಜೀತು ಜೋಸೆಫ್, ಅವರು ಹಿಂದಿಯ ‘ದೃಶ್ಯಂ’ ಸಿನಿಮಾ ತಂಡದ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ:ಬಾಲಿವುಡ್​ಗೆ ಹೆಚ್ಚಾಯ್ತು ಶ್ರೀಲೀಲಾ ಸಂಭಾವನೆ, ಈಗ ಸಿನಿಮಾಕ್ಕೆ ಎಷ್ಟು?

ಆದರೆ ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಜೀತು ಜೋಸೆಫ್, ‘ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದಿದ್ದಾರೆ. ‘ದೃಶ್ಯಂ 3’ ಸಿನಿಮಾ ಮಲಯಾಳಂನಲ್ಲಿ ನಿರ್ಮಾಣವಾಗಲಿದೆ. ಆದರೆ ಆ ಸಿನಿಮಾ ಕೇವಲ ಮಲಯಾಳಂನಲ್ಲಿ ಮಾತ್ರವೇ ನಿರ್ಮಾಣ ಆಗಲಿದ್ದು, ಹಿಂದಿಯಲ್ಲಿ ಬಿಡುಗಡೆ ಆಗುವುದಿಲ್ಲ. ಆ ಸಿನಿಮಾದ ಚಿತ್ರಕತೆಯ ಹಕ್ಕುಗಳನ್ನು ಖರೀದಿಸಿ, ಅದನ್ನು ಅವರಿಗೆ ತಕ್ಕಂತೆ ಬದಲಾವಣೆ ಮಾಡಿ ಹಿಂದಿಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಅದರಲ್ಲಿ ನಾಯಕರಾಗಿ ಅಜಯ್ ದೇವಗನ್ ನಟಿಸಲಿದ್ದಾರೆ ಎಂದಿದ್ದಾರೆ.

ಜೀತು ಜೋಸೆಫ್ ಕೈಯಲ್ಲಿ ಪ್ರಸ್ತುತ ನಾಲ್ಕು ಸಿನಿಮಾಗಳಿವೆ. ‘ಮಿರಾಜ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಮೋಹನ್​ಲಾಲ್ ನಟನೆಯ ‘ರಾಮ್’ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದರು ಆದರೆ ಆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ‘ವಲತು ವಶತೆ ಕಾಲನ್’ ಹೆಸರಿನ ಹಾಸ್ಯ ಮಿಶ್ರಿತ ಥ್ರಿಲ್ಲರ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದರ ಜೊತೆಗೆ ‘ದೃಶ್ಯಂ 3’ ಪ್ರೀ ಪ್ರೊಡಕ್ಷನ್ ಸಹ ಪ್ರಾರಂಭಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ