‘ವಾರ್ 2’ ಟ್ರೈಲರ್ ಬಿಡುಗಡೆ: ಯೋಧರ ನಡುವೆ ಭೀಕರ ಕದನ
War 2 movie: ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ನಟನೆಯ ‘ವಾರ್ 2’ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ. ಇಂದು (ಜುಲೈ 25) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಕೆಲ ವಾರಗಳ ಹಿಂದೆ ಸಿನಿಮಾದ ಟೀಸರ್ ಬಿಡುಗಡೆ ಆದಾಗ ಜೂ ಎನ್ಟಿಆರ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಟ್ರೈಲರ್ನಲ್ಲಿ ಇಬ್ಬರೂ ಸ್ಟಾರ್ ನಟರ ಅಭಿಮಾನಿಗಳ ಮನತಣಿಸಿದಂತಿದ್ದಾರೆ ನಿರ್ದೇಶಕ ಅಯಾನ್ ಮುಖರ್ಜಿ.

ಹೃತಿಕ್ ರೋಷನ್ (Hritik Roshan), ಜೂ ಎನ್ಟಿಆರ್ ನಟನೆಯ ‘ವಾರ್ 2’ ಸಿನಿಮಾ ಮುಂದಿನ ತಿಂಗಳು ಬಿಡುಗಡೆ ಆಗಲಿದ್ದು, ಇಂದು (ಜುಲೈ 25) ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಈ ಹಿಂದೆ ಟೀಸರ್ ಬಿಡುಗಡೆ ಆದಾಗ ಜೂ ಎನ್ಟಿಆರ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಈಗ ಟ್ರೈಲರ್ ಮೂಲಕ ಜೂ ಎನ್ಟಿಆರ್ ಹಾಗೂ ಹೃತಿಕ್ ರೋಷನ್ ಇಬ್ಬರೂ ನಟರ ಅಭಿಮಾನಿಗಳನ್ನು ಖುಷಿ ಪಡಿಸಿದ್ದಾರೆ. ಜೊತೆಗೆ ಒಂದು ಪವರ್ಫುಲ್, ಆಕ್ಷನ್ ಭರಿತ ಟ್ರೈಲರ್ ನೀಡಿದ್ದಾರೆ.
ಹೃತಿಕ್ ರೋಷನ್ ಹಾಗೂ ಜೂ ಎನ್ಟಿಆರ್ ಇಬ್ಬರ ಪಾತ್ರದ ಬಗ್ಗೆ ವಿವರ ನೀಡಿರುವ ನಿರ್ದೇಶಕರು, ಇಬ್ಬರೂ ಸಹ ತಮಗೆ ವಹಿಸಲಾಗಿರುವ ಮಿಷನ್ ಅನ್ನು ಮುಗಿಸಲು ಯಾವ ಹಂತಕ್ಕೆ ಬೇಕಾದರೂ ಹೋಗಬಲ್ಲ, ಯಾರನ್ನಾದರೂ ಕೊಲ್ಲಬಲ್ಲ, ತಮಗೆ ತಾವೇ ಆಯುಧವೇ ಆಗಿರುವ, ದೇಶಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಯೋಧರಾಗಿದ್ದು, ಒಂದೊಮ್ಮೆ ಇಂಥಹಾ ಇಬ್ಬರು ಪರಸ್ಪರ ಎದುರಾಳಿಗಳಾದರೆ ಅದೆಂಥಹಾ ಭೀಕರ ಯುದ್ಧ ಆಗಬಹುದು ಎಂಬ ಪ್ರಶ್ನೆಯನ್ನು ಟ್ರೈಲರ್ ಹುಟ್ಟುಹಾಕಿದೆ. ಆ ಮೂಲಕ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸುವಲ್ಲಿ ಟ್ರೈಲರ್ ಯಶಸ್ವಿಯಾಗಿದೆ.
ಟ್ರೈಲರ್ನಲ್ಲಿ ಹೃತಿಕ್ ರೋಷನ್ ಮತ್ತು ಜೂ ಎನ್ಟಿಆರ್ ಇಬ್ಬರ ಎಂಟ್ರಿ, ಕೆಲವು ಆಕ್ಷನ್ ದೃಶ್ಯಗಳನ್ನು ತೋರಿಸಲಾಗಿದ್ದು, ಆಕ್ಷನ್ ದೃಶ್ಯಗಳಂತೂ ಬಹಳ ಗಮನ ಸೆಳೆಯುತ್ತಿದೆ. ಆಕ್ಷನ್ ದೃಶ್ಯಗಳಿಗಾಗಿ ಭಾರಿ ದೊಡ್ಡ ಮೊತ್ತದ ಹಣ ಖರ್ಚು ಮಾಡಿರುವುದು ಮತ್ತು ನಟರು, ಸಹನಟರ, ತಂತ್ರಜ್ಞರು ಭಾರಿ ಶ್ರಮ ಹಾಕಿರುವುದು ಟ್ರೈಲರ್ನಲ್ಲಿಯೇ ಗೋಚರಿಸುತ್ತಿದೆ. ಹಾಲಿವುಡ್ ಸಿನಿಮಾಗಳ ಲೆವೆಲ್ನ ಆಕ್ಷನ್ ದೃಶ್ಯಗಳು ಈ ಸಿನಿಮಾನಲ್ಲಿವೆ. ವಿಮಾನದ ಮೇಲೆ ಹೊಡೆದಾಟ, ರೈಲಿನ ಮೇಲೆ ನಡೆಯುವ ಚೇಸ್ ದೃಶ್ಯ, ಸಮುದ್ರದ ಮಧ್ಯೆ ಬೋಟ್ ಚೇಸ್ ಹಲವು ಅದ್ಭುತ ಚೇಸ್ ದೃಶ್ಯಗಳು, ಆಕ್ಷನ್ ದೃಶ್ಯಗಳು ‘ವಾರ್ 2’ ಸಿನಿಮಾನಲ್ಲಿವೆ.
ಇದನ್ನೂ ಓದಿ:ಹೃತಿಕ್ ರೋಷನ್-ಜೂ ಎನ್ಟಿಆರ್ ಜೊತೆ ಬರುತ್ತಿದ್ದಾರೆ ರಶ್ಮಿಕಾ ಮಂದಣ್ಣ
ಟ್ರೈಲರ್ನಲ್ಲಿ ಹೃತಿಕ್ ರೋಷನ್ ಹಾಗೂ ಜೂ ಎನ್ಟಿಆರ್ ಜೊತೆಗೆ ನಾಯಕಿ ಕಿಯಾರಾ ಅಡ್ವಾಣಿ ಮತ್ತು ಆಶುತೋಶ್ ರಾಣಾ ಸಹ ಕಾಣಿಸಿಕೊಂಡಿದ್ದಾರೆ. ಕಿಯಾರಾ ಸಿನಿಮಾಕ್ಕೆ ಗ್ಲಾಮರ್ ಟಚ್ ನೀಡಿದಂತಿದ್ದಾರೆ. ಆಶುತೋಶ್ ರಾಣಾ ಇಬ್ಬರು ಯೋಧರ ನಡುವಿನ ಕೊಂಡಿಯಾಗಿ ಕೆಲಸ ಮಾಡಿದಂತಿದೆ. ಟ್ರೈಲರ್ನಲ್ಲಿ ಟೈಗರ್ ಶ್ರಾಫ್ ಕಾಣಿಸಿಕೊಂಡಿದ್ದಾರೆ. ಆದರೆ ಫೋಟೊ ಆಗಿ ಮಾತ್ರ.
‘ವಾರ್ 2’ ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಯಶ್ ರಾಜ್ ಫಿಲಮ್ಸ್ನ ಆದಿತ್ಯ ಚೋಪ್ರಾ. ಸಿನಿಮಾಕ್ಕೆ ಪ್ರೀತಂ ಸಂಗೀತ ನೀಡಿದ್ದಾರೆ. ಸಿನಿಮಾ ಆಗಸ್ಟ್ 15 ರಂದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಇದು ಜೂ ಎನ್ಟಿಆರ್ ನಟಿಸಿರುವ ಮೊದಲ ಹಿಂದಿ ಸಿನಿಮಾ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




