ವಿಶ್ವಕಪ್ ಕ್ರಿಕೆಟ್ನಲ್ಲಿ (World Cup 2023) ಟೀಮ್ ಇಂಡಿಯಾ ಸೋಲಿಲ್ಲದೇ ಮುನ್ನುಗ್ಗಿದೆ. ಎಲ್ಲ ಪಂದ್ಯಗಳನ್ನೂ ಗೆದ್ದು ಫೈನಲ್ ತಲುಪಿದೆ. ಈ ಬಾರಿ ಭಾರತಕ್ಕೆ ವರ್ಲ್ಡ್ ಕಪ್ ಸಿಗಲೇ ಬೇಕು ಎಂದು ಎಲ್ಲರೂ ಆಸೆಪಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಟೀಮ್ ಇಂಡಿಯಾದ ಬೆನ್ನು ತಟ್ಟುತ್ತಿದ್ದಾರೆ. ಸೆಮಿ ಫೈನಲ್ ಪಂದ್ಯವನ್ನು ನೋಡಲು ವಿಕ್ಕಿ ಕೌಶಲ್, ರಜನಿಕಾಂತ್ (Rajinikanth), ರಣಬೀರ್ ಕಪೂರ್, ಶಾಹಿದ್ ಕಪೂರ್ ಸೇರಿದಂತೆ ಅನೇಕರು ಬಂದಿದ್ದರು. ಅವರಿಲ್ಲರಿಗೂ ರೋಹಿತ್ ಶರ್ಮಾ ಪಡೆ ನಿರಾಸೆ ಮಾಡಿಲ್ಲ. ಈಗ ಎಲ್ಲರ ಕಣ್ಣು ಫೈನಲ್ (World Cup 2023 Final) ಪಂದ್ಯದ ಮೇಲಿದೆ. ಫೈನಲ್ನಲ್ಲಿ ಏನಾಗಲಿದೆ ಎಂದು ರಜನಿಕಾಂತ್ ಭವಿಷ್ಯ ನುಡಿದಿದ್ದಾರೆ.
ನ್ಯೂಜಿಲೆಂಡ್ ವರ್ಸಸ್ ಭಾರತದ ಪಂದ್ಯ ನೋಡಲು ರಜನಿಕಾಂತ್ ಅವರು ಮುಂಬೈಗೆ ತೆರಳಿದ್ದರು. ಅವರ ಜೊತೆ ಪತ್ನಿ ಲತಾ ಕೂಡ ಇದ್ದರು. ಸೆಮಿ ಫೈನಲ್ನಲ್ಲಿ ಭಾರತದ ಗೆಲುವನ್ನು ಅವರು ಸಂಭ್ರಮಿಸಿದ್ದಾರೆ. ಪಂದ್ಯ ಮುಗಿಸಿ ಚೆನ್ನೈಗೆ ಮರಳಿದ ಬಳಿಕ ಮಾಧ್ಯಮಗಳ ಜೊತೆ ರಜನಿಕಾಂತ್ ಮಾತನಾಡಿದ್ದಾರೆ. ‘ಮೊದಲಿಗೆ ನನಗೆ ನರ್ವಸ್ ಆಗಿತ್ತು. ಒಂದೂವರೆ ಗಂಟೆಗಳ ಕಾಲ ನರ್ವಸ್ ಆಗಿದ್ದೆ. ನಂತರ ನ್ಯೂಜಿಲೆಂಡ್ ವಿಕೆಟ್ ಪತನವಾಗಲು ಆರಂಭಿಸಿದಾಗ ಎಲ್ಲವೂ ಸರಿ ಆಯಿತು. ನನಗೆ ಶೇಕಡ ನೂರರಷ್ಟು ಭರವಸೆ ಇದೆ. ಈ ಸಲ ಕಪ್ ನಮ್ದೇ’ ಎಂದಿದ್ದಾರೆ ರಜನಿಕಾಂತ್.
ಇದನ್ನೂ ಓದಿ: ರಜನಿಕಾಂತ್ ನಟನೆಯ ‘ಲಾಲ್ ಸಲಾಂ’ ಚಿತ್ರದ ಬಿಡುಗಡೆ ದಿನಾಂಕದಲ್ಲಿ ಇಲ್ಲ ಬದಲಾವಣೆ
ಭಾರತದ ಟೀಮ್ ನಿಜಕ್ಕೂ ಪ್ರಬಲವಾಗಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಎಲ್ಲ ವಿಭಾಗದಲ್ಲೂ ಸರಿಸಾಟಿಯಿಲ್ಲದ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಇದರಿಂದ ಕ್ರಿಕೆಟ್ ಪ್ರೇಮಿಗಳಿಗೆ ಟೀಮ್ ಇಂಡಿಯಾ ಮೇಲೆ ನೂರಕ್ಕೆ ನೂರರಷ್ಟು ಭರವಸೆ ಮೂಡಿದೆ. ಆಸ್ಟ್ರೇಲಿಯಾ ಕೂಡ ಪ್ರಬಲ ತಂಡವೇ ಆಗಿದ್ದರೂ ಇಂಡಿಯಾಗೆ ಜಯ ಖಚಿತ ಎಂದು ನಿರೀಕ್ಷೆ ಇಡಲಾಗಿದೆ. ನವೆಂಬರ್ 19ರಂದು ನಡೆಯಲಿರುವ ಪಂದ್ಯ ನೋಡಲು ಅನೇಕ ಸೆಲೆಬ್ರಿಟಿಗಳು ಕೂಡ ಅಹಮದಾಬಾದ್ಗೆ ಆಗಮಿಸಲಿದ್ದಾರೆ.
ಇದನ್ನೂ ಓದಿ: ‘ನನ್ನ ಗುರು ಜೊತೆ ಮತ್ತೆ ಕೆಲಸ ಮಾಡುತ್ತಿದ್ದೇನೆ’: ಅಮಿತಾಭ್ ಬಗ್ಗೆ ರಜನಿಕಾಂತ್ ಗೌರವದ ಮಾತು
ಸಿನಿಮಾ ವಿಚಾರಕ್ಕೆ ಬರುವುದಾದರೆ ರಜನಿಕಾಂತ್ ಅವರು ಈ ವರ್ಷ ‘ಜೈಲರ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ. ಹೊಸ ಹೊಸ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಅವರು ನಟಿಸಿರುವ ‘ಲಾಲ್ ಸಲಾಂ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ರಜನಿ ಅಭಿನಯದ 170ನೇ ಸಿನಿಮಾದ ಕೆಲಸಗಳು ಕೂಡ ಭರದಿಂದ ಸಾಗುತ್ತಿವೆ. ಇದರ ನಡುವೆಯೂ ಸಮಯ ಮಾಡಿಕೊಂಡು ಅವರು ಕ್ರಿಕೆಟ್ ನೋಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.