ರಜನಿಕಾಂತ್ ಗೆಳೆಯ ರಾಜ್‌ ಬಹದ್ದೂರ್ ಕಡೆಯಿಂದ ‘ಗಾರುಡಿಗ’ ಚಿತ್ರಕ್ಕೆ ಸಿಕ್ತು ಶುಭ ಹಾರೈಕೆ

‘ಗಾರುಡಿಗ’ ಸಿನಿಮಾದಲ್ಲಿ ಹಳ್ಳಿಯ ಯುವಕನಾಗಿ ಮಾಗಡಿ ಮೂಲದ ರುದ್ವಿನ್ ಅವರು ನಟಿಸಿದ್ದಾರೆ. ನಾಯಕಿಯಾಗಿ ಎರಡು ಶೇಡ್‌ಗಳು ಇರುವ ಪಾತ್ರದಲ್ಲಿ ಮಾನಸಾ ನಟಿಸಿದ್ದಾರೆ. ಅರ್ಚನಾ, ಅರ್ಜುನ್, ಸೋನು, ಮೋಹನ್, ಗಿರೀಶ್, ಸಂಜು ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡು ಬಿಡುಗಡೆ ಆಗಿದೆ.

ರಜನಿಕಾಂತ್ ಗೆಳೆಯ ರಾಜ್‌ ಬಹದ್ದೂರ್ ಕಡೆಯಿಂದ ‘ಗಾರುಡಿಗ’ ಚಿತ್ರಕ್ಕೆ ಸಿಕ್ತು ಶುಭ ಹಾರೈಕೆ
‘ಗಾರುಡಿಗ’ ಕನ್ನಡ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Nov 13, 2023 | 9:05 PM

ಚಿತ್ರರಂಗಕ್ಕೆ ಬರುವ ಹೊಸಬರ ಸಂಖ್ಯೆಗೆ ಕೊರತೆಯಿಲ್ಲ. ಈಗ ‘ಗಾರುಡಿಗ’ (Gaarudiga) ಶೀರ್ಷಿಕೆಯ ಚಿತ್ರದಲ್ಲಿ ಕೂಡ ಅನೇಕ ಹೊಸಬರು ಎಂಟ್ರಿ ನೀಡುತ್ತಿದ್ದಾರೆ. ಈ ಸಿನಿಮಾದ ಪ್ರಮೋಷನ್​ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಅದರ ಮೊದಲ ಹಂತವಾಗಿ ಸಾಂಗ್​ ರಿಲೀಸ್​ ಕಾರ್ಯಕ್ರಮ ಮಾಡಲಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ಗ್ರ್ಯಾಂಡ್​ ಆಗಿ ಈ ಕಾರ್ಯ್ರಕಮ ನಡೆಯಿತು. ‘ಸೂಪರ್ ಸ್ಟಾರ್’ ರಜನಿಕಾಂತ್ ಅವರ ಆಪ್ತ ಗೆಳೆಯರಾದ ರಾಜ್‌ ಬಹದ್ದೂರ್ (Raj Bahadur) ಅವರು ಈ ಸಮಾರಂಭಕ್ಕೆ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದು ವಿಶೇಷ. ‘ಗಾರುಡಿಗ’ ಸಿನಿಮಾ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ವಕೀಲರಾಗಿರುವ ಡಾ. ಎಂ. ವೆಂಕಟಸ್ವಾಮಿ ಅವರು ‘ಎಂ.ವಿ. ಫಿಲ್ಮ್ಸ್​’ ಸಂಸ್ಥೆಯ ಮೂಲಕ ‘ಗಾರುಡಿಗ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಿಧ ಆರ್. ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಏನು ಈ ಸಿನಿಮಾದ ಕಥೆ ಎಂಬ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ‘ರೈತನಾಗಿದ್ದವನು ನಗರಕ್ಕೆ ಬಂದು ತನ್ನ ಬುದ್ಧಿಶಕ್ತಿಯ ಬಲದಿಂದ ಒಂದು ಚಕ್ರವ್ಯೂಹವನ್ನು ಯಾವ ರೀತಿ ಭೇದಿಸುತ್ತಾನೆ ಎಂಬುದು ಈ ಚಿತ್ರದಲ್ಲಿದೆ’ ಎಂದು ತಂಡವರು ಹೇಳಿಕೊಂಡಿದ್ದಾರೆ.

‘ಗಾರುಡಿಗ’ ಸಿನಿಮಾದ ಹಾಡು:

‘ಶ್ರೀಮಂತ ಕುಟುಂಬದ ಹುಡುಗರು ಘೋರ ಅಪಘಾತಗಳನ್ನು ಮಾಡಿ, ಅದನ್ನು ಮುಚ್ಚಿಟ್ಟು ಆರಾಮಾಗಿ ಇರುತ್ತಾರೆ. ಆದರೆ ಅವರ ಬದುಕಿನಲ್ಲಿ ಬದಲಾವಣೆ ಆಗುತ್ತದೆ. ಹೀರೋ ತನ್ನ ಚಾಣಾಕ್ಷತನದಿಂದ ಕೆಲಸ ಸಾಧಿಸುತ್ತಾನೆ. ಆ ಶ್ರೀಮಂತರನ್ನು ಅಪರಾಧದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಅವರಿಂದಲೇ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡುತ್ತಾನೆ. ಆ ಮೂಲಕ ಗೆಲುವು ಕಾಣುತ್ತಾನೆ. ಆ ಬಳಿಕ ದುಷ್ಟರಿಗೆ ಶಿಕ್ಷೆ ಆಗುತ್ತಾ ಎಂಬುದು ಕುತೂಹಲ. ಮನಸಾಕ್ಷಿಗಿಂತಲೂ ದೊಡ್ಡದು ಯಾವುದೂ ಇಲ್ಲ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ’ ಎಂದು ‘ಗಾರುಡಿಗ’ ತಂಡದವರು ಹೇಳಿದ್ದಾರೆ.

ಇದನ್ನೂ ಓದಿ: ಯೋಗರಾಜ್​ ಭಟ್​ ಧ್ವನಿಯಲ್ಲಿ ಮೂಡಿಬಂತು ‘ಬೆಂಬಿಡದ ನಾವಿಕ’ ಟೀಸರ್​; ಏನಿದರ ಕಥೆ?

ಈ ಸಿನಿಮಾದಲ್ಲಿ ಹಳ್ಳಿಯ ಯುವಕನಾಗಿ ಮಾಗಡಿ ಮೂಲದ ರುದ್ವಿನ್ ಅವರು ನಟಿಸಿದ್ದಾರೆ. ನಾಯಕಿಯಾಗಿ ಎರಡು ಶೇಡ್‌ಗಳು ಇರುವ ಪಾತ್ರದಲ್ಲಿ ಮಾನಸಾ ನಟಿಸಿದ್ದಾರೆ. ಅರ್ಚನಾ, ಅರ್ಜುನ್, ಸೋನು, ಮೋಹನ್, ಗಿರೀಶ್, ಸಂಜು ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ, ಆನೇಕಲ್, ಹೊಸಪೇಟೆ, ಕನಕಪುರ, ಹಾರೋಹಳ್ಳಿ ಮುಂತಾದೆಡೆ ಶೂಟಿಂಗ್​ ಮಾಡಲಾಗಿದೆ. ‘ಬಡವರ ಮಕ್ಕಳು ಬರುತ್ತಿದ್ದೇವೆ. ಪ್ರೀತಿ ಕೊಡಿ’ ಎಂದು ‘ಗಾರುಡಿಗ’ ಟೀಮ್​ ಕೇಳಿಕೊಂಡಿದೆ. ಚಿತ್ರದ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಎಂ. ಸಂಜೀವ್‌ ರಾವ್ ಅವರು ಸಂಗೀತ ನಿರ್ದೇಶನ, ಅನಿರುದ್ದ್-ಭರತ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಭಾರ್ಗವ್-ಚೆಲುವಮೂರ್ತಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ವಿಧ ಆರ್., ಎಂ. ಸಂಜೀವ್‌ ರಾವ್ ಸಾಹಿತ್ಯ ಬರೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ