AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಭಾಷೆಯ ಸಿನಿಮಾಗಳು ಕನ್ನಡಕ್ಕೆ ಹೆಚ್ಚು ಡಬ್ ಆಗಲ್ಲ ಏಕೆ? ಲೆಕ್ಕಾಚಾರವೇ ಬೇರೆ ಇದೆ..

ಮೂಲ ಭಾಷೆಯಲ್ಲೇ ಜನರು ಸಿನಿಮಾ ನೋಡುತ್ತಾರೆ. ಈ ಕಾರಣಕ್ಕೆ ಕನ್ನಡಕ್ಕೆ ಡಬ್ ಮಾಡಿ ಸಿನಿಮಾ ಮಾಡುವ ಸಾಹಸಕ್ಕೆ ಯಾರೂ ಹೋಗುತ್ತಿಲ್ಲ. ಈ ಮನಸ್ಥಿತಿ ಬದಲಾಗಬೇಕು ಎಂಬುದು ಅನೇಕರ ಅಭಿಪ್ರಾಯ.

ಪರಭಾಷೆಯ ಸಿನಿಮಾಗಳು ಕನ್ನಡಕ್ಕೆ ಹೆಚ್ಚು ಡಬ್ ಆಗಲ್ಲ ಏಕೆ? ಲೆಕ್ಕಾಚಾರವೇ ಬೇರೆ ಇದೆ..
ಕರ್ನಾಟಕದ ವಿಚಾರದಲ್ಲಿ ಹಿಂದಿ, ತಮಿಳು ನಿರ್ದೇಶಕರ ಲೆಕ್ಕಾಚಾರವೇ ಬೇರೆ ಇದೆ..
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Nov 17, 2023 | 3:01 PM

ಇತ್ತೀಚೆಗೆ ‘ಟೈಗರ್ 3’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲಾಗಿದೆ. ಹಿಂದಿ ಭಾಷೆಯ ಜೊತೆಗೆ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿದೆ. ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಏಕೆ ರಿಲೀಸ್ ಆಗಿಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಜೋರಾಗಿ ಚರ್ಚೆ ನಡೆದಿದೆ. ನಿರ್ಮಾಣ ಸಂಸ್ಥೆ ಯಶ್ ಚೋಪ್ರಾ ಫಿಲ್ಮ್ಸ್ (Yash Chopra Films) ವಿರುದ್ಧ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಈ ತಂತ್ರಕ್ಕೆ ಹಲವರು ಹಲವು ರೀತಿಯ ಕಾರಣ ನೀಡುತ್ತಾರೆ. ಗೌತಮ್ ವಾಸುದೇವ ಮೆನನ್ ನೀಡಿದ ಹೇಳಿಕೆ ಈಗ ಚರ್ಚೆ ಹುಟ್ಟುಹಾಕಿದೆ.

ಗೌತಮ್ ಮೆನನ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಯೇ ಮಾಯ ಚೇಸಾವೆ’ ಸೇರಿ ಹಲವು ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಅವರ ಸಿನಿಮಾಗಳಲ್ಲಿ ಪ್ರೀತಿಯ ಉತ್ಕಟತೆ ತೋರಿಸಲಾಗುತ್ತದೆ. ನಟನಾಗಿ, ನಿರ್ಮಾಪಕನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಅವರ ನಿರ್ದೇಶನದ ‘ಧ್ರುವ ನಕ್ಷತ್ರಂ’ ಸಿನಿಮಾ ಈ ತಿಂಗಳು ರಿಲೀಸ್ ಆಗಲಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.

ಕನ್ನಡದಲ್ಲಿ ಏಕಿಲ್ಲ?

‘ಧ್ರುವ ನಕ್ಷತ್ರಂ’ ಸಿನಿಮಾ ತಮಿಳು, ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಮಾತ್ರ ರಿಲೀಸ್ ಆಗುತ್ತಿದೆ. ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಏಕೆ ರಿಲೀಸ್ ಆಗುತ್ತಿಲ್ಲ ಎಂದು ಅವರನ್ನು ಕೇಳಲಾಗಿದೆ. ಇದಕ್ಕೆ ಅವರು ನೀಡಿರುವ ಸ್ಪಷ್ಟನೆ ಚರ್ಚೆ ಹುಟ್ಟುಹಾಕಿದೆ. ‘ತಮಿಳು ಸಿನಿಮಾಗಳಿಗೆ ಕೇರಳ ಹಾಗೂ ಬೆಂಗಳೂರು ಭಾಗದಲ್ಲಿ ಬೇಡಿಕೆ ಇದೆ. ತಮಿಳು ಭಾಷೆಯಲ್ಲೇ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತದೆ’ ಎಂದು ಅವರು ಹೇಳಿದ್ದಾರೆ.

ಭರ್ಜರಿ ಚರ್ಚೆ

ಹಲವು ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಮಾಡದೇ ಆಯಾ ಭಾಷೆಯಲ್ಲೇ ರಿಲೀಸ್ ಮಾಡಿ ಬಿಸ್ನೆಸ್ ಮಾಡುತ್ತಿವೆ. ತಮಿಳಿನ ಹಲವು ಸಿನಿಮಾಗಳು ಇದೇ ತಂತ್ರ ಉಪಯೋಗಿಸಿವೆ. ಬೆಂಗಳೂರಿನಲ್ಲಿ ತಮಿಳು ಸಿನಿಮಾ ರಿಲೀಸ್ ಆದರೆ ಭರ್ಜರಿ ಶೋ ಸಿಗುತ್ತವೆ. ಮೂಲ ಭಾಷೆಯಲ್ಲೇ ಜನರು ಸಿನಿಮಾ ನೋಡುತ್ತಾರೆ. ಈ ಕಾರಣಕ್ಕೆ ಕನ್ನಡಕ್ಕೆ ಡಬ್ ಮಾಡಿ ಸಿನಿಮಾ ಮಾಡುವ ಸಾಹಸಕ್ಕೆ ಯಾರೂ ಹೋಗುತ್ತಿಲ್ಲ. ಈ ಮನಸ್ಥಿತಿ ಬದಲಾಗಬೇಕು ಎಂಬುದು ಅನೇಕರ ಅಭಿಪ್ರಾಯ.

ಇದನ್ನೂ ಓದಿ: SSE Side B Review: ‘ಸೈಡ್​ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್​ ಬಿ’ ಲಯ ಬದಲಾಗಿಲ್ಲ

ಕನ್ನಡಕ್ಕೆ ಡಬ್ ಆದರೆ..

ಒಂದೊಮ್ಮೆ ತಮಿಳು ಸಿನಿಮಾ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆದರೆ ಅದಕ್ಕೆ ಸಿಗೋ ಶೋಗಳ ಸಂಖ್ಯೆ ಬೆರಳೆಣಿಕೆ ಮಾತ್ರ. ಈ ವಿಚಾರವಾಗಿ ಅನೇಕರು ಧ್ವನಿ ಎತ್ತಿದ್ದಾರೆ. ಆದರೆ, ಇದಕ್ಕೆ ನ್ಯಾಯ ಮಾತ್ರ ಸಿಕ್ಕಿಲ್ಲ.

Published On - 11:09 am, Fri, 17 November 23