ಲೀಲಾವತಿಯವರ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಎಲ್ಲಿ? ಯಾವಾಗ?

|

Updated on: Dec 08, 2023 | 7:27 PM

Leelavathi: ಹಿರಿಯ ನಟಿ ಲೀಲಾವತಿ ಅವರು ನಿಧನ ಹೊಂದಿದ್ದು, ಅವರ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಎಲ್ಲಿ, ಯಾವಾಗ ನಡೆಯಲಿದೆ ಎಂಬ ಮಾಹಿತಿ ಇಲ್ಲಿದೆ.

ಲೀಲಾವತಿಯವರ ಅಂತಿಮ ದರ್ಶನ, ಅಂತಿಮ ಸಂಸ್ಕಾರ ಎಲ್ಲಿ? ಯಾವಾಗ?
ಲೀಲಾವತಿ
Follow us on

ಕನ್ನಡ ಚಿತ್ರರಂಗದ (Sandalwood) ಹಿರಿಯ ನಟಿ ಲೀಲಾವತಿಯವರು (Leelavathi) ಇಂದು (ಡಿಸೆಂಬರ್ 08) ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅಪಾರ ಅಭಿಮಾನಿಗಳನ್ನು ಹೊಂದಿರುವ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಕುಟುಂಬ ಹಾಗೂ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಲಿದ್ದು, ಅದರ ಮಾಹಿತಿ ಇಲ್ಲಿದೆ.

ಲೀಲಾವತಿಯವರ ಮೃತದೇಹ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿದ್ದು ಅಲ್ಲಿಂದ ಮೆರವಣಿಗೆ ಮೂಲಕ ಮೃತದೇಹವನ್ನು ಮೈಲನಹಳ್ಳಿಯ ಮನೆಗೆ ಕರೆದೊಯ್ಯಲಾಗುತ್ತದೆ. ಅದು ಅವರು ಮೊದಲಿದ್ದ ಮನೆ. ಲೀಲಾವತಿಯವರಿಗೆ ಆ ಮನೆಯ ಬಗ್ಗೆ ವಿಶೇಷ ಪ್ರೇಮವಿತ್ತು, ಅವರ ಕೊನೆಯಾಸೆಯಂತೆ ಅವರ ಮೃತದೇಹವನ್ನು ಕೆಲ ಕಾಲ ಆ ಮನೆಯಲ್ಲಿಡಲಾಗುತ್ತದೆ.

ಆ ಬಳಿಕ ಅಲ್ಲಿಂದ ನೆಲಮಂಗಲದ ಜೂನಿಯರ್ ಕಾಲೇಜಿನ ಅಂಬೇಡ್ಕರ್ ಮೈದಾನಕ್ಕೆ ಕರೆತರಲಾಗುತ್ತದೆ. ಅಲ್ಲಿ ಜಿಲ್ಲಾಡಳಿತ ಈಗಾಗಲೇ ವ್ಯವಸ್ಥೆಗಳನ್ನು ಮಾಡಿದ್ದು ಅಲ್ಲಿ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಶಾಮಿಯಾನಾ, ಬ್ಯಾರಿಕೇಡ್ ಇತ್ಯಾದಿ ವ್ಯವಸ್ಥೆಗಳನ್ನು ಪೊಲೀಸರು ಈಗಾಗಲೇ ಮಾಡಿದ್ದಾರೆ ಎನ್ನಲಾಗಿದೆ. ನಾಳೆ ಅಂದರೆ ಡಿಸೆಂಬರ್ 09ರ ಮಧ್ಯಾಹ್ನದ ವರೆಗೆ ಲೀಲಾವತಿಯವರ ಅಂತಿಮ ದರ್ಶನ ಮಾಡಬಹುದುದಾಗಿದೆ. ಆ ಬಳಿಕ ಅಂತಿಮ ಸಂಸ್ಕಾರವನ್ನು ಸೋಲದೇವನಹಳ್ಳಿಯ ತೋಟದಲ್ಲಿ ಮಾಡಲಾಗುತ್ತದೆ.

ನೆಲಮಂಗಲ ತಹಶೀಲ್ದಾರ್, ಜಿಲ್ಲಾ ಎಸ್​ಪಿ, ಐಜಿಪಿ ರವಿಕಾಂತೇಗೌಡ, ಜಿಲ್ಲಾಧಿಕಾರಿಗಳು ನೆಲಮಂಗಲಕ್ಕೆ ಧಾವಿಸಿದ್ದು, ಹಿರಿಯ ನಟಿಯ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದಾರೆ. ಅಭಿಮಾನಿಗಳು ನೂಕು-ನುಗ್ಗಲು ಮಾಡಿಕೊಳ್ಳದೆ ಶಾಂತ ರೀತಿಯಲ್ಲಿ ಹಿರಿಯ ನಟಿಯ ಅಂತಿಮ ದರ್ಶನ ಮಾಡಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ