ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಯಾರು ಬೇಕಾದರೂ ಫೇಮಸ್ ಆಗಬಹುದು. ಅಪರಿಚಿತರಾಗಿದ್ದವರು ರಾತ್ರೋರಾತ್ರಿ ಸ್ಟಾರ್ ಆಗಿ ಬಿಡಬಹುದು. ಅದೇ ರೀತಿ ಟ್ರೋಲ್ (Troll) ಕಾಟಕ್ಕೂ ಗುರಿಯಾಗಿ ನೆಗೆಟಿವ್ ಕಮೆಂಟ್ಗಳು ಕೂಡ ಬರಬಹುದು. ಈಗ ನಟಿ ಊರ್ಫಿ ಜಾವೇದ್ (Urfi Javed) ಅವರ ಪರಿಸ್ಥಿತಿ ಕೂಡ ಹಾಗೆಯೇ ಆಗಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಫೇಮಸ್ ಆಗಿದ್ದಾರೋ ಅಷ್ಟೇ ಪ್ರಮಾಣದಲ್ಲಿ ಟ್ರೋಲ್ ಕೂಡ ಆಗುತ್ತಿದ್ದಾರೆ. ಅಷ್ಟಕ್ಕೂ ಅವರು ಜನರಿಂದ ಟ್ರೋಲ್ ಆಗುತ್ತಿರುವುದು ಯಾಕೆ? ಬಟ್ಟೆಗಳ ಕಾರಣಕ್ಕೆ! ಹೌದು, ತಮ್ಮ ಮನಸ್ಸಿಗೆ ಬಂದಂತೆ ಕಾಸ್ಟ್ಯೂಮ್ ಡಿಸೈನ್ ಮಾಡಿಕೊಳ್ಳುವ ಅವರು ಚಿತ್ರ-ವಿಚಿತ್ರ ಬಟ್ಟೆ ಧರಿಸುತ್ತಾರೆ. ಸಖತ್ ಬೋಲ್ಡ್ ಆಗಿ ಕ್ಯಾಮೆರಾಗೆ ಪೋಸ್ ನೀಡುತ್ತಾರೆ. ಹಾಗಾಗಿ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.
ಊರ್ಫಿ ಜಾವೇದ್ ಅವರ ಇನ್ಸ್ಟಾಗ್ರಾಮ್ ಖಾತೆಗೆ ಹೋಗಿ ನೋಡಿದರೆ ಎಲ್ಲವೂ ತಿಳಿಯುತ್ತದೆ. ಬಟ್ಟೆಗಳ ಬಗ್ಗೆ ಅವರಿಗೆ ಇರುವಂಥ ಕ್ರೇಜ್ ಎಂಥದ್ದು ಎಂಬುದು ಗೊತ್ತಾಗುತ್ತದೆ. ಆಗಾಗ ಅವರು ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಫೋಟೋಶೂಟ್ ಮಾಡಿಸುತ್ತಾರೆ. ಅವುಗಳಿಗೆ ಬರುವುದು ಬಹುತೇಕ ನೆಗೆಟಿವ್ ಕಮೆಂಟ್ಗಳೇ. ಇತ್ತೀಚೆಗೆ ಹೊಸ ಫೋಟೋ ಹಂಚಿಕೊಂಡಿದ್ದ ಊರ್ಫಿ ಅವರು, ‘ನಿಮ್ಮ ಬಳಿ ಈಗಾಗಲೇ ರೆಕ್ಕಗಳಿವೆ, ನೀವು ಹಾರಬೇಕಷ್ಟೇ’ ಎಂದು ಕ್ಯಾಪ್ಷನ್ ನೀಡಿದ್ದರು. ‘ಇದೇನು ಹಗ್ಗ ಸುತ್ತಿಕೊಂಡು ಬಂದಿದ್ದೀರಲ್ಲ’ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ‘ಈ ರೀತಿ ಮಾಡುವ ಬದಲು ಒಂದೇ ಸಲ ಅಶ್ಲೀಲ ಸಿನಿಮಾ ಮಾಡಿಬಿಡಿ’ ಎಂಬ ಖಾರದ ಕಮೆಂಟ್ ಕೂಡ ಬಂದಿದೆ.
ಯಾರು ಎಷ್ಟೇ ಟ್ರೋಲ್ ಮಾಡಿದರೂ ಊರ್ಫಿ ಜಾವೇದ್ ತಲೆ ಕೆಡಿಸಿಕೊಳ್ಳುವವರಲ್ಲ. ಅವರ ವ್ಯಕ್ತಿತ್ವಕ್ಕೆ ಕೆಲವರು ಫ್ಯಾನ್ ಆಗಿದ್ದಾರೆ! ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಊರ್ಫಿ ಅವರನ್ನು 19 ಲಕ್ಷಕ್ಕೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ಕರಣ್ ಜೋಹರ್ ನಡೆಸಿಕೊಟ್ಟ ‘ಬಿಗ್ ಬಾಸ್ ಓಟಿಟಿ’ ಶೋನಲ್ಲಿ ಊರ್ಫಿ ಸ್ಪರ್ಧಿಸಿದ್ದರು. ಅಲ್ಲಿಯೂ ಅವರು ತಮ್ಮ ಕಾಸ್ಟ್ಯೂಮ್ ಕಾರಣದಿಂದ ಗಮನ ಸೆಳೆದಿದ್ದರು. ಕಸದ ಚೀಲವನ್ನೇ ಬಳಸಿಕೊಂಡು ಅವರು ಕಾಸ್ಟ್ಯೂಮ್ ಡಿಸೈನ್ ಮಾಡಿಕೊಂಡಿದ್ದರು. ಈ ರೀತಿ ವಿಚಿತ್ರ ಬಟ್ಟೆಗಳನ್ನು ಧರಿಸುವ ಕಾರಣಕ್ಕೆ ಅವರನ್ನು ‘ಲೇಡಿ ರಣವೀರ್ ಸಿಂಗ್’ ಎಂದು ಕೂಡ ಕೆಲವರು ಕರೆಯುತ್ತಾರೆ. ಊರ್ಫಿಯ ಫೋಟೋ ಮತ್ತು ವಿಡಿಯೋಗಳು ಟ್ರೋಲ್ ಪೇಜ್ಗಳಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ:
ಅತಿಯಾಯ್ತು ನಟಿಯ ಹಾಟ್ ಡ್ರೆಸ್ ಹಾವಳಿ; ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು
ಕಸದ ಚೀಲದಿಂದ ಮಾನ ಮುಚ್ಚಿಕೊಂಡ ನಟಿ; ಬಿಗ್ ಬಾಸ್ ಮನೆಯಲ್ಲಿ ಯಾಕಿಂಥ ಪರಿಸ್ಥಿತಿ?