ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಚಿತ್ರರಂಗದಿಂದ ತುಸು ಬ್ರೇಕ್ ತೆಗೆದುಕೊಂಡಿದ್ದಾರೆ. 2020ರಲ್ಲಿ ತೆರೆಕಂಡ ‘ನಿಶ್ಶಬ್ದಂ’ ನಂತರ ಅವರು ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಅದಕ್ಕೂ ಹಿಂದೆ ಅವರು 2018ರಲ್ಲಿ ‘ಭಾಗಮತಿ’ಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅನುಷ್ಕಾ ಮುಂದಿನ ಚಿತ್ರದ ಕುರಿತು ಸುದ್ದಿ ಹರಿದಾಡುತ್ತಿದ್ದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಟಾಲಿವುಡ್ ಅಂಗಳದಲ್ಲಿ ಓಡಾಡುತ್ತಿರುವ ಹೊಸ ಸುದ್ದಿಯ ಪ್ರಕಾರ, ಖ್ಯಾತ ನಟರೊಬ್ಬರ ಚಿತ್ರದ ಮೂಲಕ ಅನುಷ್ಕಾ ಕಮ್ಬ್ಯಾಕ್ ಮಾಡಲಿದ್ದಾರೆ . ಆ ನಟ ಬೇರಾರೂ ಅಲ್ಲ, ಟಾಲಿವುಡ್ನ ಹಿರಿಯ ನಟ ಮೆಗಾಸ್ಟಾರ್ ಚಿರಂಜೀವಿ! ಅನುಷ್ಕಾ ಹಾಗೂ ಮೆಗಾಸ್ಟಾರ್ ಮೊತ್ತಮೊದಲ ಬಾರಿಗೆ ಜತೆಯಾಗಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬುದು ಟಾಲಿವುಡ್ ಅಂಗಳದ ಲೇಟೆಸ್ಟ್ ಸುದ್ದಿ!
ಈರ್ವರೂ ತಾರೆಯರಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಆದರೆ ಅಭಿಮಾನಿಗಳಿಗಿರುವ ದೊಡ್ಡ ಕೊರಗೆಂದರೆ ಅನುಷ್ಕಾ ಹಾಗೂ ಚಿರಂಜೀವಿ ಜತೆಯಾಗಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿಲ್ಲ ಎಂಬುದು. 2006ರಲ್ಲಿ ತೆರೆಕಂಡ ‘ಸ್ಟಾಲಿನ್’ ಚಿತ್ರದಲ್ಲಿ ಅನುಷ್ಕಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಹತ್ತು ವರ್ಷಗಳ ನಂತರ ಅನುಷ್ಕಾ ನಟಿಸಿದ ‘ರುದ್ರಮ್ಮದೇವಿ’ ಚಿತ್ರವನ್ನು ಚಿರಂಜೀವಿ ನಿರೂಪಿಸಿದ್ದರು. ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಅನುಷ್ಕಾ ರಾಣಿ ಲಕ್ಷ್ಮಿ ಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈರ್ವರೂ ಒಟ್ಟಾಗಿ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿಲ್ಲ.
ಮುಂದಿನ ಚಿತ್ರದಲ್ಲಿ ಅನುಷ್ಕಾ- ಚಿರಂಜೀವಿ ಜತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಈ ಮೂಲಕ ಅಭಿಮಾನಿಗಳ ಬಹುಕಾಲದ ಬೇಡಿಕೆ ಈಡೇರುವ ನಿರೀಕ್ಷೆ ಇದೆ. ಸದ್ಯ ಚಿರಂಜೀವಿ ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ‘ಗಾಡ್ಫಾದರ್’ ಹಾಗೂ ‘ಭೋಲಾ ಶಂಕರ್’ನಲ್ಲೂ ಅವರು ಬಣ್ಣಹಚ್ಚುತ್ತಿದ್ದಾರೆ. ಈ ಚಿತ್ರಗಳ ನಂತರ ಮುಂದಿನ ಚಿತ್ರ ಸೆಟ್ಟೇರಲಿದೆ.
ಇದನ್ನೂ ಓದಿ:
Salman Khan: ಸಲ್ಮಾನ್- ಸಮಂತಾ ಜತೆಯಿರುವ ಚಿತ್ರಗಳು ವೈರಲ್; ಏನಿದು ಸಮಾಚಾರ?
Rashmika Mandanna: ‘ಈ ಲುಕ್ ಹೇಗಿದೆ?’; ಹೊಸ ಪೋಟೋಗಳನ್ನು ಹಂಚಿಕೊಂಡು ರಶ್ಮಿಕಾ ಪ್ರಶ್ನೆ