ಹೊಸ ರಿಲೀಸ್​ ದಿನಾಂಕದ ಬಗ್ಗೆ ಆಲೋಚಿಸಿದ ‘ಕಲ್ಕಿ 2898 ಎಡಿ’ ಚಿತ್ರತಂಡ?

|

Updated on: Apr 10, 2024 | 7:18 PM

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್​ ಜತೆ ಕಮಲ್ ಹಾಸನ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮುಂತಾದ ಪ್ರತಿಭಾನ್ವಿತ ಕಲಾವಿದರ ಸಂಗಮ ಆಗಿದೆ. ಪುರಾಣದ ಕಹಾನಿಯ ಜೊತೆ ಸೈನ್ಸ್​ ಫಿಕ್ಷನ್​ ಕೂಡ ಅಳವಡಿಸಿ ಈ ಸಿನಿಮಾ ಮಾಡಲಾಗುತ್ತಿದೆ ಎಂಬುದು ವಿಶೇಷ. ಈ ಎಲ್ಲ ಕಾರಣದಿಂದಾಗಿ ‘ಕಲ್ಕಿ 2898 ಎಡಿ’ ಚಿತ್ರದ ಮೇಲಿನ ಕ್ರೇಜ್​ ಹೆಚ್ಚಾಗಿದೆ.

ಹೊಸ ರಿಲೀಸ್​ ದಿನಾಂಕದ ಬಗ್ಗೆ ಆಲೋಚಿಸಿದ ‘ಕಲ್ಕಿ 2898 ಎಡಿ’ ಚಿತ್ರತಂಡ?
ಪ್ರಭಾಸ್​
Follow us on

ಟಾಲಿವುಡ್​ ನಟ ಪ್ರಭಾಸ್ (Prabhas) ಅವರು ‘ಕಲ್ಕಿ 2898 ಎಡಿ’ ಸಿನಿಮಾದ ಮೇಲೆ ಸಂಪೂರ್ಣ ಗಮನ ಹರಿಸಿದ್ದಾರೆ. ಈ ಸಿನಿಮಾಗೆ ‘ಮಹಾನಟಿ’ ಖ್ಯಾತಿಯ ಖ್ಯಾತ ನಿರ್ದೇಶಕ ನಾಗ್ ಅಶ್ವಿನ್ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಮೇ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕು ಎಂಬುದು ಈ ಸಿನಿಮಾ ತಂಡದ ಪ್ಲ್ಯಾನ್​ ಆಗಿತ್ತು. ಆದರೆ ಈಗಿನ ಬೆಳವಣಿಗೆಗಳ ಅನುಸಾರ ಬಿಡುಗಡೆ ದಿನಾಂಕವನ್ನು (Kalki 2898 AD Release Date) ಮುಂದೂಡಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ‘ಪಿಂಕ್​ ವಿಲ್ಲಾ’ ವರದಿ ಪ್ರಕಾರ, ಜೂನ್ 20ಕ್ಕೆ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿರುವ ಸಾಧ್ಯತೆ ಇದೆ. ಮುಂಬರುವ ಲೋಕಸಭಾ ಚುನಾವಣೆಯ ಕಾರಣದಿಂದ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರದ ಬಿಡುಗಡೆ ದಿನಾಂಕದಲ್ಲಿ ಗೊಂದಲ ಉಂಟಾಗಿದೆ. ನಿರ್ಮಾಪಕರು ರಿಲೀಸ್​ ಡೇಟ್​ ಬದಲಾವಣೆ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡುವುದು ಇನ್ನೂ ಬಾಕಿ ಇದೆ.

‘ಕಲ್ಕಿ 2898 ಎಡಿ’ ಸಿನಿಮಾ ಬಗ್ಗೆ ಕೇಳಿಬರುತ್ತಿರುವ ಗಾಸಿಪ್​ ಒಂದೆರಡಲ್ಲ. ಮೇ 9ರ ಬದಲಿಗೆ ಮೇ 30ಕ್ಕೆ ಸಿನಿಮಾ ರಿಲೀಸ್​ ಮಾಡಲು ನಿರ್ಧರಿಸಲಾಗಿದೆ ಎಂದು ಕೂಡ ಕೆಲವು ಕಡೆಗಳಲ್ಲಿ ಸುದ್ದಿ ಹಬ್ಬಿತ್ತು. ಆದರೆ ಸಿನಿಮಾದ ನಿರ್ಮಾಪಕರು ಈಗ ಬಿಡುಗಡೆ ದಿನಾಂಕದ ಬಗ್ಗೆ ಪುನಃ ಆಲೋಚಿಸಿದಂತಿದೆ. ಜೂನ್​ 20 ಸೂಕ್ತ ಎಂದು ಚಿತ್ರತಂಡದಲ್ಲಿನ ಕೆಲವು ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಒಂದು ಸ್ಪಷ್ಟನೆ ಸಿಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಈ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ದಿಶಾ ಪಟಾನಿ ಮುಂತಾದ ಪ್ರತಿಭಾನ್ವಿತ ಕಲಾವಿದರ ಸಂಗಮ ಆಗಿದೆ. ಪುರಾಣದ ಕಥೆಯ ಜೊತೆಗೆ ಸೈನ್ಸ್​ ಫಿಕ್ಷನ್​ ಅಂಶಗಳನ್ನು ಅಳವಡಿಸಿ ಈ ಸಿನಿಮಾ ಮಾಡಲಾಗುತ್ತಿದೆ. ಈ ಎಲ್ಲ ಕಾರಣದಿಂದಾಗಿ ‘ಕಲ್ಕಿ 2898 ಎಡಿ’ ಸಿನಿಮಾ ಮೇಲಿನ ಕ್ರೇಜ್​ ಜಾಸ್ತಿ ಆಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಪ್ರಭಾಸ್​ ಫ್ಯಾನ್​​ಗೆ ಅಲ್ಲು ಅರ್ಜುನ್​ ಅಭಿಮಾನಿಗಳಿಂದ ಥಳಿತ

‘ಕಲ್ಕಿ 2898 ಎಡಿ’ ಸಿನಿಮಾವನ್ನು ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಚಿತ್ರೀಕರಿಸಲಾಗಿದೆ. ಪ್ರಭಾಸ್​ ಅವರ ವೃತ್ತಿ ಜೀವನದ ದುಬಾರಿ ಸಿನಿಮಾಗಳಲ್ಲಿ ಈ ಚಿತ್ರ ಕೂಡ ಸ್ಥಾನ ಪಡೆದುಕೊಳ್ಳುತ್ತಿದೆ. ಇದಲ್ಲದೇ ‘ದಿ ರಾಜಾ ಸಾಬ್​​’ ಸಿನಿಮಾದಲ್ಲೂ ಪ್ರಭಾಸ್​ ನಟಿಸುತ್ತಿದ್ದಾರೆ. ಆ ಬಳಿಕ ಅವರು ಸಂದೀಪ್​ ರೆಡ್ಡಿ ವಂಗಾ ಜೊತೆಗಿನ ‘ಸ್ಪಿರಿಟ್​’ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.