ಮತ್ತೆ ಬರಲಿದೆ ‘96’, ವಿಜಯ್ ಸೇತುಪತಿ ಬದಲು ಹೊಸ ನಾಯಕ?

Vijay Sethupathi: 2018 ರಲ್ಲಿ ಬಿಡುಗಡೆ ಆಗಿದ್ದ ವಿಜಯ್ ಸೇತುಪತಿ ಮತ್ತು ತ್ರಿಷಾ ನಟನೆಯ ‘96’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಸರಳವಾದ ಪ್ರೇಮಕತೆ ಹಾಗೂ ಅದ್ಭುತವಾದ ಸಂಗೀತವನ್ನು ಈ ಸಿನಿಮಾ ಹೊಂದಿತ್ತು. ಇದೀಗ ಈ ಸಿನಿಮಾದ ಎರಡನೇ ಭಾಗ ನಿರ್ಮಾಣ ಆಗಲಿದೆ. ಆದರೆ ವಿಜಯ್ ಸೇತುಪತಿ ಬದಲಿಗೆ ಹೊಸ ನಾಯಕ ನಟಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಮತ್ತೆ ಬರಲಿದೆ ‘96’, ವಿಜಯ್ ಸೇತುಪತಿ ಬದಲು ಹೊಸ ನಾಯಕ?
Vijay Sethupathi Trisha

Updated on: May 30, 2025 | 1:26 PM

ವಿಜಯ್ ಸೇತುಪತಿ (Vijay Sethupathi), ತ್ರಿಷಾ (Trisha) ನಟಿಸಿದ್ದ ತಮಿಳು ಸಿನಿಮಾ ‘96’ ಭಾರಿ ದೊಡ್ಡ ಹಿಟ್ ಆಗಿತ್ತು. ಇಬ್ಬರು ಮಾಜಿ ಪ್ರೇಮಿಗಳು ಬಹಳ ವರ್ಷಗಳ ಬಳಿಕ ಭೇಟಿಯಾಗಿ ಒಂದು ರಾತ್ರಿ ಒಟ್ಟಿಗೆ ಕಳೆಯುವ ಸರಳವಾದ ಆದರೆ ಮನಸ್ಸಿಗೆ ತಟ್ಟುವ ಕತೆಯನ್ನು ‘96’ ಸಿನಿಮಾ ಒಳಗೊಂಡಿತ್ತು. ಸಿನಿಮಾದ ಹಾಡು, ಹಿನ್ನೆಲೆ ಸಂಗೀತ ಪ್ರೇಕ್ಷಕರಿಗೆ ಬಹುವಾಗಿ ಹಿಡಿಸಿತ್ತು. ಈ ಸಿನಿಮಾ ಕನ್ನಡಕ್ಕೂ ರೀಮೇಕ್ ಆಗಿ ಗೋಲ್ಡನ್ ಸ್ಟಾರ್ ಗಣೇಶ್ ಈ ಸಿನಿಮಾನಲ್ಲಿ ನಟಿಸಿದ್ದರು. ಇದೀಗ ಇದೇ ಸಿನಿಮಾದ ಎರಡನೇ ಭಾಗ ಬರುತ್ತಿದೆ.

‘96’ ಸಿನಿಮಾದ ಎರಡನೇ ಭಾಗ ತಮಿಳಿನಲ್ಲಿ ಬರುತ್ತಿದ್ದು, ಹಾಗೆಂದು ಮೊದಲ ಸಿನಿಮಾದ ಕತೆಯ ಮುಂದುವರೆಕಿ ಇದಲ್ಲ. ಇದೇ ಪ್ರತ್ಯೇಕ ಕತೆ ಆದರೆ ಎರಡೂ ಸಿನಿಮಾದ ಥೀಮ್ ಒಂದೇ ಆಗಿರಲಿದೆ. ಭಗ್ನ ಪ್ರೇಮಿಗಳ ಕತೆಯನ್ನೇ ‘96’ ಎರಡನೇ ಭಾಗ ಸಹ ಹೊಂದಿರಲಿದೆ. ಈ ಸಿನಿಮಾನಲ್ಲಿ ವಿಜಯ್ ಸೇತುಪತಿ ಬದಲಿಗೆ ಹೊಸ ನಾಯಕನನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

‘ಡ್ರ್ಯಾಗನ್’, ‘ಲವ್ ಟುಡೆ’ ಸಿನಿಮಾಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿರುವ, ಹೊಸ ತಲೆಮಾರಿನ ಮೆಚ್ಚಿನ ನಾಯಕ ನಟನಾಗಿರುವ ಪ್ರದೀಪ್ ರಂಗನಾಥನ್ ಅವರು ‘96’ ಎರಡನೇ ಭಾಗದ ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ‘96’ ಸಿನಿಮಾದ ನಿರ್ದೇಶಕ ಪ್ರೇಮ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶವೊಂದನ್ನ ಸಹ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರತಿ ದಿನ ಮಲಗುವ ಮುನ್ನ ಈ ಅಭ್ಯಾಸ ತಪ್ಪಿಸುವುದಿಲ್ಲ ನಟಿ ತ್ರಿಷಾ

ಪ್ರದೀಪ್ ರಂಗನಾಥನ್ ಅವರನ್ನು ಸಂಪರ್ಕಿಸಿರುವುದು ಸತ್ಯ ಆದರೆ ಅದು ಬೇರೆಯದ್ದೇ ಸಿನಿಮಾಕ್ಕಾಗಿ. ‘96-2’ಗೂ ಪ್ರದೀಪ್​ಗೂ ಸಂಬಂಧವಿಲ್ಲ ಎಂದಿದ್ದಾರೆ. ‘96’ ಸಿನಿಮಾದಲ್ಲಿ ನಟಿಸಿದ್ದ ನಟರುಗಳೇ ‘96-2’ ಸಿನಿಮಾದಲ್ಲಿಯೂ ಇರಲಿದ್ದಾರಂತೆ. ಆ ಸಿನಿಮಾದಲ್ಲಿ ನಟಿಸಿದ್ದ ಎಲ್ಲ ನಟರೂ ಹೊಸ ಸಿನಿಮಾನಲ್ಲಿಯೂ ಇರಲಿದ್ದಾರಂತೆ. ಸಿನಿಮಾದ ಕತೆ ಪೂರ್ಣವಾಗಿದ್ದು, ಆದಷ್ಟು ಬೇಗ ಅಧಿಕೃತವಾಗಿ ಘೋಷಿಸಲಾಗುವುದು ಎಂದು ನಿರ್ದೇಶಕ ಹೇಳಿದ್ದಾರೆ.

ವಿಜಯ್ ಸೇತುಪತಿ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಟ್ರೈನ್’, ‘ತಲೈವಿಯಾನ್ ತಲೈವಿ’, ‘ಮಹಾರಾಜ 2’ ಇನ್ನೂ ಕೆಲವು ಸಿನಿಮಾಗಳಲ್ಲಿ ವಿಜಯ್ ಸೇತುಪತಿ ಬ್ಯುಸಿಯಾಗಿದ್ದಾರೆ. ತ್ರಿಷಾ ಕೈಯಲ್ಲಿ ಸಹ ಹಲವು ಸಿನಿಮಾಗಳಿವೆ. ಈ ವರ್ಷದ ಅಂತ್ಯದ ವೇಳೆಗೆ ‘96-2’ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:26 pm, Fri, 30 May 25