ಕಾಲಿವುಡ್​ನಲ್ಲಿ ಭರ್ಜರಿ ಸುದ್ದಿ ಮಾಡುತ್ತಿದ್ದಾಳೆ ಖ್ಯಾತ ನಟಿ ಶ್ರೀದೇವಿ ಮಗಳು!

| Updated By: shivaprasad.hs

Updated on: Jul 18, 2021 | 3:07 PM

Jahnavi Kapoor: ಜಾಹ್ನವಿ ಕಪೂರ್ ತಮ್ಮ ಸ್ನೇಹಿತರೊಂದಿಗೆ ತಮಿಳಿನ ಖ್ಯಾತ ಗೀತೆಗೆ ಹೆಜ್ಜೆ ಹಾಕಿರುವುದು ಎಲ್ಲರ ಗಮನ ಸೆಳೆದಿದೆ.

ಕಾಲಿವುಡ್​ನಲ್ಲಿ ಭರ್ಜರಿ ಸುದ್ದಿ ಮಾಡುತ್ತಿದ್ದಾಳೆ ಖ್ಯಾತ ನಟಿ ಶ್ರೀದೇವಿ ಮಗಳು!
ಜಾಹ್ನವಿ ಕಪೂರ್ (ಸಂಗ್ರಹ ಚಿತ್ರ)
Follow us on

ಭಾರತದ ಖ್ಯಾತ ನಟಿ ಶ್ರೀದೇವಿ ಅವರ ಮಗಳು ಜಾಹ್ನವಿ ಕಪೂರ್(Jahnavi Kapoor) ಕಾಲಿವುಡ್​ನಲ್ಲಿ ಭರ್ಜರಿ ಸುದ್ದಿ ಮಾಡುತ್ತಿದ್ದಾರೆ. ಅರೆ, ಇದೇನು? ಅವರ ಯಾವ ಚಿತ್ರಗಳೂ ಸದ್ಯದಲ್ಲಿ ಬಿಡುಗಡೆಯಾಗಿಲ್ಲವಲ್ಲ ಎಂದು ಯೋಚಿಸುತ್ತಿದ್ದೀರಾ? ಹೌದು. ನಿಜ. ಅವರು ಸುದ್ದಿ ಮಾಡುತ್ತಿರುವುದು ತಮ್ಮ ‘ಅಕ್ಸಾ’ ಗ್ಯಾಂಗ್ ಮೂಲಕ. ವಿಜಯ್ ಆಂಟೊನಿ(Vijay Antony) ಸಂಗೀತ ನೀಡಿರುವ ತಮಿಳಿನ ಖ್ಯಾತ ಗೀತೆ ‘ನಾಕ ಮುಕ್ಕ’(Naaka Mukka) ಹಾಡಿಗೆ ತಮ್ಮ ತಂಡದೊಂದಿಗೆ ಹೆಜ್ಜೆ ಹಾಕಿರುವ ಅವರು ಕಾಲಿವುಡ್​ನಲ್ಲಿ ಸದ್ದು ಮಾಡುತ್ತಿದ್ದಾರೆ.

‘ಅಕ್ಸಾ’ ಗ್ಯಾಂಗ್ ಮರಳಿ ಬಂದಿದೆ ಎಂದು ಬರೆದುಕೊಂಡು ವಿಡಿಯೊವನ್ನು ಜಾಹ್ನವಿ ಕಪೂರ್ ಹಂಚಿಕೊಂಡಿದ್ದಾರೆ. ಅತ್ಯಂತ ಕಡಿಮೆ ವೆಚ್ಚದ ನರತ್ಯಗೀತೆ ಎಂದು ಬರೆದಿರುವ ಅವರು ತಮ್ಮ ಹಿಂದಿನ ವಿಡಿಯೊದ ಮುಂದಿನ ಭಾಗವಾಗಿ ಇದನ್ನು ಬಿಡುಗಡೆ ಮಾಡಿದ್ದಾರೆ. ‘ಯಾವುದೋ ದೊಡ್ಡ ದೊಡ್ಡ ಲೊಕೇಶನ್ಸ್ ಬಳಸಿಲ್ಲ. ಯಾವುದೇ ಸಾಮಗ್ರಿಗಳು, ಕಲಾ ನಿರ್ದೇಶನವನ್ನೂ ತಂಡ ಮಾಡಿಲ್ಲ. ಹೀಗಿದ್ದರೂ ನಮ್ಮ ತಂಡ ಗೆದ್ದಿದೆ(ರಾಕ್ಸ್)’ ಎಂದು ಜಾಹ್ನವಿ ಬರೆದಿದ್ದಾರೆ.

ಅಕ್ಸಾ ಗ್ಯಾಂಗ್​ನ ಈ ವಿಡಿಯೊದಲ್ಲಿ ಇಡೀ ತಂಡವು ಸರಳವಾದ ಆದರೆ ನಗು ಉಕ್ಕಿಸುವ ವೇಷಭೂಷಣಗಳನ್ನು ತೊಟ್ಟಿದೆ. ಹಾಗೆಯೇ ಅವರ ಹಾವ ಭಾವಗಳೂ ನೋಡುಗರ ಮುಖದಲ್ಲಿ ಮಂದಹಾಸ ಮೂಡಿಸುವಂತಿವೆ. ಹಲವಾರು ತಾರೆಗಳು ಇದನ್ನು ಇಷ್ಟಪಟ್ಟು ಹಂಚಿಕೊಂಡಿದ್ದಾರೆ. ಜಾಹ್ನವಿ ಕಪೂರ್ ಸಹೋದರ ಅರ್ಜುನ್ ಕಪೂರ್ ಈ ಗ್ಯಾಂಗ್​ನ ಸೃಜನಶೀಲತೆಯನ್ನು ಮೆಚ್ಚಿದ್ದಾರೆ.

‘ನಾಕು ಮಕ್ಕ’ ಹಾಡು ತಮಿಳಿನ ‘ಕದಲಿಲ್ ವಿಳುಂತೇನ್’() ಚಿತ್ರದ್ದು. ವಿಜಯ್ ಆಂಟೊನಿ ನೀಡಿರುವ ಸಂಗೀತದಿಂದಲೇ ಈ ಹಾಡು ಎಲ್ಲೆಡೆ ಜನಪ್ರಿಯವಾಯಿತು. ಈ ಚಿತ್ರದಿಂದಲೇ ವಿಜಯ್ ಆಂಟನಿ ಸಂಗತ ನಿರ್ದೇಶಕರಾಗಿ ಪ್ರವರ್ಧಮಾನಕ್ಕೆ ಬಂದರು.

ಕೆಲವೇ ಚಿತ್ರಗಳನ್ನು ಮಾಡಿದ್ದರೂ ತಮ್ಮ ಪ್ರತಿಭೆಯಿಂದ ಎಲ್ಲರ ಗಮನ ಸೆಳೆಯುತ್ತಿರುವ ಜಾಹ್ನವಿ ಕಪೂರ್ ತಮ್ಮ ಚೊಚ್ಚಲ ಚಿತ್ರ ‘ಧಡಕ್’ನಿಂದ ಗುರುತಿಸಿಕೊಂಡರು. ನಂತರ ಅವರು ನಟಿಸಿದ ‘ಘೋಸ್ಟ್ ಸ್ಟೋರೀಸ್’, ‘ಗುಂಜಾನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್’ ಚಿತ್ರಗಳು ಅವರಿಗೆ ಯಶಸ್ಸು ತಂದುಕೊಟ್ಟವು. ಅವರು ನಟಿಸಿರುವ ‘ದೋಸ್ತಾನಾ 2’ ಹಾಗೂ ‘ಗುಡ್ ಲಕ್ ಜೆರ್ರಿ’ ಇನ್ನಷ್ಟೇ ತೆರೆ ಕಾಣಬೇಕಿದೆ.

ಇದನ್ನೂ ಓದಿ: ಸಂಜಯ್​ ಲೀಲಾ ಬನ್ಸಾಲಿ ಸಿನಿಮಾಗೆ ಗುಡ್​ ಬೈ ಹೇಳಿದ ರಣಬೀರ್​; ಕಾರಣವೇನು?

ಇದನ್ನೂ ಓದಿ: ಸಾರ್ವಜನಿಕವಾಗಿಯೇ ಬಾಯ್​ಫ್ರೆಂಡ್​ಗೆ ಕಿಸ್​ ಮಾಡಿದ ಶ್ರುತಿ ಹಾಸನ್​; ವೈರಲ್​ ಆಯ್ತು ಫೋಟೋ

(Jahnavi Kapoor Aksa Gang makes sound in Kollywood for dancing Naakku Makka song)