Jailer Song: ದಿನದಿನವೂ ಹೆಚ್ಚುತ್ತಿದೆ ತಮನ್ನಾ ಭಾಟಿಯಾ ಮಾದಕತೆ; ‘ಜೈಲರ್’ ಸಿನಿಮಾದಲ್ಲಿ ಹಾಟ್​ ಅವತಾರ

Tamannaah Bhatia: ಪಾತ್ರವರ್ಗದ ಕಾರಣದಿಂದ ‘ಜೈಲರ್​’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಈ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಅವರು ಗ್ಲಾಮರಸ್​ ಆಗಿ ಕಾಣಿಸಿಕೊಳ್ಳಲಿದ್ದಾರೆ.

Jailer Song: ದಿನದಿನವೂ ಹೆಚ್ಚುತ್ತಿದೆ ತಮನ್ನಾ ಭಾಟಿಯಾ ಮಾದಕತೆ; ‘ಜೈಲರ್’ ಸಿನಿಮಾದಲ್ಲಿ ಹಾಟ್​ ಅವತಾರ
ತಮನ್ನಾ ಭಾಟಿಯಾ

Updated on: Jul 06, 2023 | 2:36 PM

ನಟಿ ತಮನ್ನಾ ಭಾಟಿಯಾ (Tamanna Bhatia) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ಸಿನಿಮಾ ಆಯ್ಕೆಯಲ್ಲಿ ತಮ್ಮ ನಿಲುವು ಬದಲಾಯಿಸಿಕೊಂಡಿದ್ದಾರೆ. 18 ವರ್ಷಗಳ ಕಾಲ ಕಿಸ್ಸಿಂಗ್ ದೃಶ್ಯಗಳಿಗೆ ನೋ ಎಂದಿದ್ದ ಅವರು ಈಗ ವಿಜಯ್​ ವರ್ಮಾ ಜೊತೆ ‘ಲಸ್ಟ್​​ ಸ್ಟೋರೀಸ್​ 2’ ಸಿನಿಮಾದಲ್ಲಿ ಲಿಪ್​ ಲಾಕ್​ ಮಾಡಿ ಸುದ್ದಿ ಆಗಿದ್ದಾರೆ. ಅಷ್ಟೇ ಅಲ್ಲದೇ ‘ಜೈಲರ್​’ (Jailer) ಸಿನಿಮಾದಲ್ಲೂ ಅವರು ಹಾಟ್​ ಅವತಾರ ತಾಳಿದ್ದಾರೆ. ರಜನಿಕಾಂತ್​ (Rajinikanth) ನಟನೆಯ ‘ಜೈಲರ್​’ ಚಿತ್ರದಲ್ಲಿ ತಮನ್ನಾ ಭಾಟಿಯಾ ನಟಿಸಿದ್ದು, ಹೊಸ ಪೋಸ್ಟರ್​ ಮೂಲಕ ಕೌತುಕ ಮೂಡಿಸಲಾಗಿದೆ. ಇಂದು (ಜುಲೈ 6) ಈ ಸಿನಿಮಾದ ಮೊದಲ ಸಾಂಗ್​ ಬಿಡುಗಡೆ ಆಗಲಿದೆ. ಅದರಲ್ಲಿ ತಮನ್ನಾ ಭಾಟಿಯಾ ಅವರು ಅಭಿಮಾನಿಗಳ ಕಣ್ಮನ ಸೆಳೆಯುವ ರೀತಿಯಲ್ಲಿ ಡ್ಯಾನ್ಸ್​ ಮಾಡಿದ್ದಾರೆ ಎಂಬುದಕ್ಕೆ ಈ ಪೋಸ್ಟರ್​ನಲ್ಲಿ ಸುಳಿವು ಸಿಕ್ಕಿದೆ.

ತಮನ್ನಾ ಭಾಟಿಯಾ ಅವರು ಐಟಂ ಸಾಂಗ್​ಗಳಲ್ಲಿ ನಟಿಸಿದ್ದು ಇದೇ ಮೊದಲೇನಲ್ಲ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ‘ಜೋಕೆ ನಾನು ಬಳ್ಳಿಯ ಮಿಂಚು..’ ಹಾಡಿನಲ್ಲಿ ತಮನ್ನಾ ಸ್ಟೆಪ್​ ಹಾಕಿದ ಪರಿಗೆ ಪಡ್ಡೆ ಹುಡುಗರು ಫಿದಾ ಆಗಿದ್ದರು. ತೆಲುಗು, ತಮಿಳಿನ ಸಿನಿಮಾಗಳಲ್ಲೂ ಅವರು ಐಟಂ ಡ್ಯಾನ್ಸ್​ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ‘ಜೈಲರ್​’ ಚಿತ್ರದಲ್ಲಿ ಯಾವ ರೀತಿ ಕುಣಿದಿದ್ದಾರೆ ಎಂಬುದನ್ನು ತಿಳಿಯುವ ಸಮಯ ಬಂದಿದೆ. ಜುಲೈ 6ರ ಸಂಜೆ 6 ಗಂಟೆಗೆ ‘ಕಾವಾಲಾ..’ ಸಾಂಗ್​ ರಿಲೀಸ್​ ಆಗಲಿದೆ.

ಪಾತ್ರವರ್ಗದ ಕಾರಣದಿಂದ ‘ಜೈಲರ್​’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ರಜನಿಕಾಂತ್​ ಜೊತೆ ರಮ್ಯಾ ಕೃಷ್ಣನ್​, ಯೋಗಿ ಬಾಬು, ವಿನಾಯಕನ್​, ವಸಂತ್​ ರವಿ, ಶಿವರಾಜ್​ಕುಮಾರ್​, ಮೋಹನ್​ಲಾಲ್​, ತಮನ್ನಾ ಭಾಟಿಯಾ, ಜಾಕಿ ಶ್ರಾಫ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್​ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

Vijay Varma: ‘ನಾನು ಖುಷಿಯಾಗಿದ್ದೇನೆ’: ತಮನ್ನಾ ಭಾಟಿಯಾ ಪ್ರೀತಿ ಒಪ್ಪಿಕೊಂಡ ಬಳಿಕ ವಿಜಯ್​ ವರ್ಮಾ ಪ್ರತಿಕ್ರಿಯೆ

ಪ್ರತಿಷ್ಠಿತ ‘ಸನ್​ ಪಿಕ್ಚರ್ಸ್​’ ಮೂಲಕ ‘ಜೈಲರ್​’ ಸಿನಿಮಾ ನಿರ್ಮಾಣ ಆಗುತ್ತಿದೆ. ಸದ್ಯ ಈ ಚಿತ್ರಕ್ಕೆ ಕೊನೇ ಹಂತದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಆಗಸ್ಟ್​ 11ರಂದು ಈ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಶಿವರಾಜ್​ಕುಮಾರ್​ ನಟಿಸಿರುವುದರಿಂದ ಕನ್ನಡಿಗರು ಸಹ ‘ಜೈಲರ್​’ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿರಂಜೀವಿ ನಟನೆಯ ‘ಭೋಲಾ ಶಂಕರ್​’ ಕೂಡ ಆಗಸ್ಟ್​ 11ರಂದು ರಿಲೀಸ್​ ಆಗಲಿರುವುದರಿಂದ ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್​ ಏರ್ಪಡಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.