‘ಪುಟ್ಟಕ್ಕನ ಮಕ್ಕಳು’, ‘ಅಮೃತಧಾರೆ’ ಟಿಆರ್​ಪಿಯಲ್ಲಿ ಭಾರೀ ಏರಿಕೆ; ಟಾಪ್ 5 ಧಾರಾವಾಹಿಗಳು ಇವೇ

Kannada Serials TRP: ಧಾರಾವಾಹಿಗಳ ಟಿಆರ್​ಪಿ ರೇಟಿಂಗ್ ಸಿಕ್ಕಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’, ‘ಅಮೃತಧಾರೆ’ ಟಿಆರ್​ಪಿಯಲ್ಲಿ ಭಾರೀ ಏರಿಕೆ ಆಗಿದೆ.

‘ಪುಟ್ಟಕ್ಕನ ಮಕ್ಕಳು’, ‘ಅಮೃತಧಾರೆ’ ಟಿಆರ್​ಪಿಯಲ್ಲಿ ಭಾರೀ ಏರಿಕೆ; ಟಾಪ್ 5 ಧಾರಾವಾಹಿಗಳು ಇವೇ
ಕನ್ನಡ ಸೀರಿಯಲ್ ಟಿಆರ್​ಪಿ
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Jul 06, 2023 | 12:49 PM

ಕಿರುತೆರೆ ಲೋಕದಲ್ಲಿ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಅದ್ದೂರಿಯಾಗಿ ಸೀರಿಯಲ್ ಮಾಡಿ ಎಲ್ಲರ ಗಮನ ಸೆಳೆಯಲು ಎಲ್ಲಾ ವಾಹಿನಿಗಳು ಪ್ರಯತ್ನಿಸುತ್ತಿವೆ. ವಿವಿಧ ರೀತಿಯ ಕಥೆಯ ಮೂಲಕ ವೀಕ್ಷಕರ ಎದುರು ಬರಲಾಗುತ್ತಿದೆ. ಅತ್ತೆ-ಸೊಸೆ ಕಥೆ, ತಾಯಿ ಮಕ್ಕಳ ಕಥೆ, ವಯಸ್ಸಿನ ಅಂತರ ಇದ್ದು ಮದುವೆ ಆಗಲು ಕಷ್ಟಪಡುತ್ತಿರುವ ಪುರುಷ-ಮಹಿಳೆಯ ಕಥೆ ಹೀಗೆ ಬಣ್ಣಬಣ್ಣದ ಕಥೆಗಳನ್ನು ಇಟ್ಟುಕೊಂಡು ಸೀರಿಯಲ್ ಮಾಡಲಾಗುತ್ತಿದೆ. ಈಗ ಜುಲೈ 23-29ರವರೆಗಿನ ಟಿಆರ್​ಪಿ ರೇಟಿಂಗ್ ಸಿಕ್ಕಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’, ‘ಅಮೃತಧಾರೆ’ (Amruthadhare Serial) ಟಿಆರ್​ಪಿಯಲ್ಲಿ ಭಾರೀ ಏರಿಕೆ ಆಗಿದೆ.

‘ಪುಟ್ಟಕ್ಕನ ಮಕ್ಕಳು’

ಉಮಾಶ್ರೀ ಮೊದಲಾದವರು ನಟಿಸಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಟಿಆರ್​ಪಿಯಲ್ಲಿ ಭಾರೀ ಏರಿಕೆ ಕಂಡಿದೆ. ಕಳೆದ ಕೆಲ ವಾರದಿಂದ ಈ ಧಾರಾವಾಹಿ ಟಿಆರ್​ಪಿ ಡಬಲ್ ಡಿಜಿಟ್ ತಲುಪಿದೆ. ಈ ಧಾರಾವಾಹಿ ಪ್ರಮುಖ ಘಟ್ಟ ತಲುಪಿರುವುದರಿಂದ ಇಷ್ಟು ದೊಡ್ಡ ಮಟ್ಟದ ಟಿಆರ್​ಪಿ ಸಿಗುತ್ತಿದೆ.

‘ಗಟ್ಟಿಮೇಳ’

‘ಗಟ್ಟಿಮೇಳ’ ಧಾರಾವಾಹಿ ಈಗಾಗಲೇ ಸಾವಿರಾರು ಎಪಿಸೋಡ್ ಪೂರ್ಣಗೊಳಿಸಿದೆ. ಈ ಧಾರಾವಾಹಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಕಳೆದ ವಾರಕ್ಕಿಂತ ಈ ವಾರ ಧಾರಾವಾಹಿಯ ಟಿಆರ್​ಪಿಯಲ್ಲಿ ಏರಿಕೆ ಕಂಡಿದೆ.

ಅಮೃತಧಾರೆ

ರಾಜೇಶ್ ನಟರಂಗ, ಛಾಯಾ ಸಿಂಗ್ ಅಭಿನಯದ ‘ಅಮೃತಧಾರೆ’ ಧಾರಾವಾಹಿ ಕೂಡ ಪ್ರಮುಖ ಘಟ್ಟ ತಲುಪಿದೆ. ಇಬ್ಬರ ಮಧ್ಯೆ ಈಗತಾನೇ ಪ್ರೀತಿ ಮೂಡುವ ಹಂತದಲ್ಲಿದೆ. ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಅವರ ಪ್ರಬುದ್ಧ ನಟನೆಯ ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಮೂರನೇ ಸ್ಥಾನದಲ್ಲಿದೆ. ಈ ಮೊದಲ ವಾರಕ್ಕಿಂತ ಈ ಧಾರಾವಾಹಿಯ ಟಿಆರ್​ಪಿ ಹೆಚ್ಚಿದೆ.

ನಾಲ್ಕನೇ ಸ್ಥಾನದಲ್ಲಿ ಎರಡು ಧಾರಾವಾಹಿ

ಟಿಆರ್​ಪಿ ರೇಸ್​ನಲ್ಲಿ ಮೂರನೇ ಸ್ಥಾನದಲ್ಲಿ ಎರಡು ಧಾರಾವಾಹಿಗಳು ಇವೆ. ‘ಶ್ರೀರಸ್ತು ಶುಭಮಸ್ತು’ ಹಾಗೂ ‘ನಮ್ಮ ಲಚ್ಚಿ’ ಧಾರಾವಾಹಿಗಳು ಇವೆ. ಎರಡೂ ಧಾರಾವಾಹಿಗೆ ಒಂದೇ ರೀತಿಯ ಟಿಆರ್​ಪಿ ಸಿಕ್ಕಿದೆ.

ಇದನ್ನೂ ಓದಿ: ‘ಸೀತಾ ರಾಮ’ ಟೈಟಲ್ ಗೀತೆಯಲ್ಲಿ ಗಮನ ಸೆಳೆದ ವೈಷ್ಣವಿ; ಧಾರಾವಾಹಿ ಕಥೆಯ ಬಗ್ಗೆ ಮೂಡಿದೆ ಕುತೂಹಲ

ಲಕ್ಷ್ಮೀ ಬಾರಮ್ಮ

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಎಲ್ಲರ ಗಮನ ಸೆಳೆಯುತ್ತಿದೆ. ಕಳೆದ ವಾರ ಈ ಧಾರಾವಾಹಿ ಆರನೇ ಸ್ಥಾನದಲ್ಲಿ ಇತ್ತು. ಈ ವಾರ ಈ ಧಾರಾವಾಹಿಗೆ ಐದನೇ ಸ್ಥಾನ ಸಿಕ್ಕಿದೆ.

ಕುಗ್ಗಿತು ಭಾಗ್ಯಲಕ್ಷ್ಮೀ ಟಿಆರ್​ಪಿ

ಆರನೇ ಸ್ಥಾನದಲ್ಲಿ ‘ಸತ್ಯ’ ಧಾರಾವಾಹಿ ಸ್ಥಾನ ಪಡೆದುಕೊಂಡಿದೆ. ಏಳನೇ ಸ್ಥಾನದಲ್ಲಿ ‘ಭಾಗ್ಯಲಕ್ಷ್ಮೀ ಧಾರಾವಾಹಿ ಇದೆ. ಈ ಧಾರಾವಾಹಿಗೆ ದಿನ ಕಳೆದಂತೆ ಟಿಆರ್​ಪಿ ಕಡಿಮೆ ಆಗುತ್ತಿದೆ. ಇದು ವೀಕ್ಷಕರ ಬೇಸರಕ್ಕೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:44 pm, Thu, 6 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ