
ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ (Jana Nayagan Movie) ಜುಲೈ 23ರಂದು ವಿಶ್ವಾದ್ಯಂತ ತೆರೆಗೆ ಬಂದಿದೆ. ತಮಿಳುನಾಡು ಮಾತ್ರವಲ್ಲದೆ, ಕರ್ನಾಟಕದಲ್ಲೂ ಈ ಚಿತ್ರ ಉತ್ತಮ ಓಪನಿಂಗ್ ಸಿಕ್ಕಿದೆ. ಈ ಮೂಲಕ ದಳಪತಿ ವಿಜಯ್ ಹವಾ ಕರ್ನಾಟಕದಲ್ಲಿ ಜೋರಾಗಿಯೇ ಇದೆ ಎಂಬುದು ಸ್ಪಷ್ಟವಾಗಿದೆ. ಹಾಗಾದರೆ, ದಳಪತಿ ವಿಜಯ್ ಸಿನಿಮಾ ಕರ್ನಾಟಕದಲ್ಲಿ ಎಷ್ಟು ಗಳಿಕೆ ಮಾಡಿದೆ? ಇಲ್ಲಿ ಆಕ್ಯುಪೆನ್ಸಿ ಎಷ್ಟಿತ್ತು ಎಂಬುದರ ವಿವರ ಇಲ್ಲಿದೆ.
ತಮಿಳು ಸಿನಿಮಾಗಳಿಗೆ ಬೆಂಗಳೂರಿನಲ್ಲಿ ದೊಡ್ಡ ಮಾರುಕಟ್ಟೆ ಇದೆ. ಈ ಮೊದಲು ರಿಲೀಸ್ ಆದ ಸಾಕಷ್ಟು ತಮಿಳು ಹೀರೋ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದವು. ಈಗ ಆ ಸಾಲಿಗೆ ‘ಜನ ನಾಯಗನ್’ ಕೂಡ ಸೇರ್ಪಡೆ ಆಗಿದೆ. ಈ ಚಿತ್ರ ಕರ್ನಾಟಕದಲ್ಲಿ 11.57 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ. ಇದರಲ್ಲಿ ಬೆಂಗಳೂರಿನದ್ದು ಸಿಂಹಪಾಲು ಎಂಬುದು ವಿಶೇಷ. ಬೆಂಗಳೂರಲ್ಲಿ ಒಟ್ಟೂ 54 ಪರ್ಸೆಂಟ್ ಆಕ್ಯುಪೆನ್ಸಿ ಇತ್ತು. ಚೆನ್ನೈನಲ್ಲಿ 97 ಪರ್ಸೆಂಟ್ ಆಕ್ಯುಪೆನ್ಸಿ ಇತ್ತು. ಅಂದರೆ, ಅಲ್ಲಿ ಬಹುತೇಕ ಶೋಗಳು ಹೌಸ್ಫುಲ್ ಪ್ರದರ್ಶನ ಕಂಡಿದೆ ಎಂದರ್ಥ
ಭಾರತದಲ್ಲಿ ಗಳಿಸಿದ್ದೆಷ್ಟು?
ಇದನ್ನೂ ಓದಿ: ನೆಗೆಟಿವ್ ವಿಮರ್ಶೆ ಮಧ್ಯೆ ‘ಜನ ನಾಯಗನ್’ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?
‘ಜನ ನಾಯಗನ್’ ಸಿನಿಮಾ ತಮಿಳು ಭಾಷೆಯ ಜೊತೆಗೆ ತೆಲುಗು ಹಾಗೂ ಹಿಂದಿ ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ದೇಶಾದ್ಯಂತ ಮೊದಲ ದಿನ 13 ಸಾವಿರ ಶೋಗಳು ಸಿಕ್ಕಿವೆ. ಇದರಿಂದ ಸಿನಿಮಾ 48 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಹಾಗೂ 41 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಗಳಿಸಿದೆ. ತಮಿಳಿನಿಂದ 38.20 ಕೋಟಿ ರೂಪಾಯಿ, ಹಿಂದಿಯಿಂದ 1.75 ಕೋಟಿ ರೂಪಾಯಿ ಹಾಗೂ ತೆಲುಗಿನಿಂದ 2.75 ಕೋಟಿ ರೂಪಾಯಿ ಗಳಿಕೆ ಮಾಡಿದೆ.
‘ಜನ ನಾಯಗನ್’ ಸಿನಿಮಾ ದುಬೈ, ಅಮೆರಿಕ ಸೇರಿದಂತೆ ಅನೇಕ ಭಾಷೆಗಳಲ್ಲಿ ತೆರೆಗೆ ಬಂದಿದೆ. ಈ ಚಿತ್ರಕ್ಕೆ ವಿಶ್ವ ಮಾರುಕಟ್ಟೆಯಿಂದ 30 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಚಿತ್ರದ ಒಟ್ಟೂ ಗಳಿಕ 78.27 ಕೋಟಿ ರೂಪಾಯಿ ಆಗಿದೆ. ‘ಜನ ನಾಯಗನ್’ ಸಿನಿಮಾಗೆ ಎಚ್. ವಿನೋದ್ ನಿರ್ದೇಶನ ಮಾಡಿದ್ದಾರೆ. ಇದು ವಿಜಯ್ ಅವರ ಕೊನೆಯ ಸಿನಿಮಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.