ಕೇಸು ಹಿಂಪಡೆಯಲಿರುವ ‘ಜನ ನಾಯಗನ್’ ನಿರ್ಮಾಪಕ: ಕಾರಣ?
Jana Nayagan movie: ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆದ ‘ಜನ ನಾಯಗನ್’ಗೆ ಸಿಬಿಎಫ್ಸಿಯು ಸೆನ್ಸಾರ್ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ. ಇದನ್ನು ಪ್ರಶ್ನಿಸಿ ‘ಜನ ನಾಯಗನ್’ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದಾರಾದರೂ ಅಲ್ಲಿಯೂ ಸಹ ‘ಜನ ನಾಯಗನ್’ ನಿರ್ಮಾಪಕರಿಗೆ ಸೂಕ್ತವಾಗಿ ನ್ಯಾಯ ದೊರಕಿಲ್ಲ ಬದಲಿಗೆ ನ್ಯಾಯ ವಿತರಣೆ ತಡ ಆಗುತ್ತಲೇ ಸಾಗುತ್ತಿದೆ. ಇದರಿಂದಾಗಿ ರೋಸಿ ಹೋಗಿರುವ ನಿರ್ಮಾಪಕರು ದೂರನ್ನೇ ಹಿಂಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ರಾಜಕೀಯ ಕಾರಣಗಳಿಂದಾಗಿ ಬಿಡುಗಡೆ ವಿಳಂಬ ಆಗುತ್ತಲೇ ಇದೆ. ತೆಲುಗಿನ ‘ಭಗವಂತ ಕೇಸರಿ’ ಸಿನಿಮಾದ ರೀಮೇಕ್ ಆದ ‘ಜನ ನಾಯಗನ್’ಗೆ ಸಿಬಿಎಫ್ಸಿಯು ಸೆನ್ಸಾರ್ ಪ್ರಮಾಣ ಪತ್ರ ನೀಡಲು ನಿರಾಕರಿಸಿದೆ. ಇದನ್ನು ಪ್ರಶ್ನಿಸಿ ‘ಜನ ನಾಯಗನ್’ ನಿರ್ಮಾಪಕರು ಕೋರ್ಟ್ ಮೆಟ್ಟಿಲೇರಿದ್ದಾರಾದರೂ ಅಲ್ಲಿಯೂ ಸಹ ‘ಜನ ನಾಯಗನ್’ ನಿರ್ಮಾಪಕರಿಗೆ ಸೂಕ್ತವಾಗಿ ನ್ಯಾಯ ದೊರಕಿಲ್ಲ ಬದಲಿಗೆ ನ್ಯಾಯ ವಿತರಣೆ ತಡ ಆಗುತ್ತಲೇ ಸಾಗುತ್ತಿದೆ. ಇದರಿಂದಾಗಿ ರೋಸಿ ಹೋಗಿರುವ ನಿರ್ಮಾಪಕರು ದೂರನ್ನೇ ಹಿಂಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
‘ಜನ ನಾಯಗನ್’ ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕ ಕೆವಿಎನ್ ಪ್ರೊಡಕ್ಷನ್ನ ವೆಂಕಟ್ ಅವರು ನ್ಯಾಯಾಲಯದಲ್ಲಿ ಆಗುತ್ತಿರುವ ವಿಳಂಬದಿಂದ ಬೇಸತ್ತು ಕೇಸನ್ನೇ ಹಿಂಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಆದೇಶ ಹೊರಡಿಸಿದ್ದ ಹೈಕೋರ್ಟ್, ಪ್ರಕರಣದಲ್ಲಿ ಈ ಹಿಂದೆ ಹೈಕೋರ್ಟ್ನ ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ಬದಿಗೆ ಸರಿಸಿರುವುದಲ್ಲದೆ, ಪ್ರಕರಣವನ್ನು ಮತ್ತೆ ಏಕಸದಸ್ಯ ಪೀಠಕ್ಕೆ ವರ್ಗಾಯಿಸಿದೆ. ಅಲ್ಲದೆ ಸಿಬಿಎಫ್ಸಿಯ ವಾದವನ್ನು ಆಲಿಸುವಂತೆ ಸೂಚಿಸಿದೆ. ಇದರಿಂದಾಗಿ ವಿಚಾರಣೆ ಇನ್ನಷ್ಟು ತಡ ಆಗುವ ಸಾಧ್ಯತೆ ಇದೆ. ಇದರಿಂದ ಸಿನಿಮಾದ ಬಿಡುಗಡೆ ಇನ್ನೂ ಹೆಚ್ಚು ಸಮಯ ಹಿಡಿಯಲಿದೆ.
ಇದನ್ನೂ ಓದಿ:‘ಜನ ನಾಯಗನ್’ ವಿಳಂಬದಿಂದ ‘ಟಾಕ್ಸಿಕ್’,‘ಕೆಡಿ’ಗೆ ದೊಡ್ಡ ಹೊಡೆತ?
ಅದರ ಬದಲಿಗೆ ಕೇಸು ವಾಪಸ್ ಪಡೆದರೆ ಸಿಬಿಎಫ್ಸಿ ಯು, ಈ ಮೊದಲು ನಿರ್ಣಯಿಸಿದಂತೆ ರಿವ್ಯೂ ಕಮಿಟಿಗೆ ಸಿನಿಮಾವನ್ನು ಕಳಿಸುತ್ತದೆ. ಅಲ್ಲಿ ಗರಿಷ್ಠ ಹದಿನೈದು ದಿನಗಳಲ್ಲಿ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲೇ ಬೇಕಾಗುತ್ತದೆ. ಸಿಬಿಎಫ್ಸಿ ಹೇಳುವ ಎಲ್ಲ ಕಟ್ಗಳಿಗೆ ನಿರ್ಮಾಪಕರು ಈ ಮುಂಚೆಯೇ ಒಪ್ಪಿದ್ದ ಕಾರಣ ಹಾಗೂ ನ್ಯಾಯಾಲಯದಲ್ಲಿ ಪ್ರಕ್ರಿಯೆ ವಿಳಂಬ ಆಗುತ್ತಿರುವ ಕಾರಣ ಇದೀಗ ನಿರ್ಮಾಪಕರು ಈ ನಿರ್ಣಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೆಲವೇ ದಿನಗಳಲ್ಲಿ ನಿರ್ಮಾಪಕರು ತಮ್ಮ ದಾವೆಯನ್ನು ಹಿಂಪಡೆಯಲಿದ್ದಾರೆ ಅಥವಾ ಮುಂದಿನ ವಿಚಾರಣೆಯಲ್ಲಿ ತಮಗೆ ತಮ್ಮ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಲು ಯಾವುದೇ ಆಕ್ಷೇಪ ಇಲ್ಲ ಎಂದು ನ್ಯಾಯಾಲಯದ ಮುಂದೆ ಹೇಳಲಿದ್ದಾರೆ.
‘ಜನ ನಾಯಗನ್’ ಸಿನಿಮಾವು ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ರಾಜಕೀಯ ಪಕ್ಷ ಸ್ಥಾಪಿಸಿ, ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತಯಾರಾಗಿರುವ ವಿಜಯ್ ಅವರು ‘ಜನ ನಾಯಗನ್’ ಸಿನಿಮಾವನ್ನು ತಮ್ಮ ರಾಜಕೀಯ ಅಜೆಂಡ ಪ್ರಚಾರಕ್ಕೆ ಬಳಸುತ್ತಿದ್ದಾರೆ ಎಂಬ ಗುಮಾನಿಯ ಮೇಲೆ ರಾಜಕೀಯ ಒತ್ತಡಗಳನ್ನು ತಂದು ಸಿನಿಮಾದ ಸೆನ್ಸಾರ್ ಪ್ರಮಾಣ ಪತ್ರವನ್ನು ತಡೆ ಹಿಡಿಯಲಾಗಿದೆ ಎನ್ನಲಾಗುತ್ತಿದೆ. ಸಿಬಿಎಫ್ಸಿಯ ಈ ನಡೆಯನ್ನು ಕಾಂಗ್ರೆಸ್ ಕಠಿಣ ಶಬ್ದಗಳಲ್ಲಿ ಟೀಕೆ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




