AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜನ ನಾಯಗನ್’ ಚಿತ್ರಕ್ಕೆ ಸಿಗದ ಪರಿಹಾರ; ಕೇಸ್ ಹಿಂಪಡೆಯಲು ನಿರ್ಧರಿಸಿದ ಕೆವಿನ್?

'ಜನ ನಾಯಗನ್' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಗದ ಕಾರಣ ಬಿಡುಗಡೆ ಅನಿಶ್ಚಿತವಾಗಿದೆ. ನ್ಯಾಯಾಲಯದಲ್ಲಿ ಪರಿಹಾರ ಸಿಗದ ಹಿನ್ನೆಲೆಯಲ್ಲಿ, ಕೆವಿಎನ್ ಸಂಸ್ಥೆ ಕೋರ್ಟ್ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿದೆ. ಈಗ ಚಿತ್ರವನ್ನು ಪುನರ್​ವಿಮರ್ಶೆ ಸಮಿತಿಗೆ ಕಳುಹಿಸಲು ಮುಂದಾಗಿದ್ದು, 500 ಕೋಟಿ ರೂ. ವೆಚ್ಚದ ಈ ಸಿನಿಮಾ ಬಿಡುಗಡೆಗೆ ಹೊಸ ಮಾರ್ಗ ಹುಡುಕುತ್ತಿದೆ.

‘ಜನ ನಾಯಗನ್’ ಚಿತ್ರಕ್ಕೆ ಸಿಗದ ಪರಿಹಾರ; ಕೇಸ್ ಹಿಂಪಡೆಯಲು ನಿರ್ಧರಿಸಿದ ಕೆವಿನ್?
ಜನ ನಾಯಗನ್
ರಾಜೇಶ್ ದುಗ್ಗುಮನೆ
|

Updated on: Jan 29, 2026 | 7:34 AM

Share

ಅಂದುಕೊಂಡಂತೆ ನಡೆದಿದ್ದರೆ ‘ಜನ ನಾಯಗನ್’ ಸಿನಿಮಾ (Jana Nayagan) ರಿಲೀಸ್ ಆಗಿ ಇಂದಿಗೆ (ಜನವರಿ 29) ಮೂರು ವಾರಗಳು ಕಳೆದಿರುತ್ತಿದ್ದವು. ಆದರೆ, ಸೆನ್ಸಾರ್ ಮಂಡಳಿ ಸೆನ್ಸಾರ್ ಪ್ರಮಾಣಪತ್ರ ನೀಡದೆ ಇರುವುದು ತಂಡಕ್ಕೆ ಚಿಂತೆಯನ್ನು ತಂದೊಡ್ಡಿದೆ. ಹೀಗಿರುವಾಗಲೇ ‘ಜನ ನಾಯಗನ್’ ತಂಡ ಕೋರ್ಟ್​​ನಿಂದ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ವರದಿ ಆಗಿದೆ. ಅದಕ್ಕೆ ಕಾರಣವೂ ಇದೆ.

ಜನವರಿ 9ಕ್ಕೆ ‘ಜನ ನಾಯಗನ್’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಸೆನ್ಸಾರ್ ಪ್ರಮಾಣ ಪತ್ರ ಸಿಗದ ಕಾರಣ ಸಿನಿಮಾ ತಂಡ ಕೋರ್ಟ್ ಮೆಟ್ಟಿಲೇರಿತು. ಸ್ಥಳೀಯ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್​​ನಲ್ಲಿ ಕೇಸ್ ದಾಖಲು ಮಾಡಲಾಯಿತು. ಆದರೆ, ಎಲ್ಲಿಯೂ ಸಿನಿಮಾಗೆ ನ್ಯಾಯ ಸಿಗುತ್ತಿಲ್ಲ.

ಈಗ ‘ಜನ ನಾಯಗನ್’ ತಂಡ ಒಂದು ನಿರ್ಧಾರಕ್ಕೆ ಬಂದಿದೆ ಎಂದು ವರದಿ ಆಗಿದೆ. ಕೆವಿಎನ್ ಸಂಸ್ಥೆ ಪ್ರಕರಣವನ್ನು ಕೋರ್ಟ್​​ನಿಂದ ಹಿಂಪಡೆಯುವ ನಿರ್ಧಾರಕ್ಕೆ ಬಂದಿದೆಯಂತೆ. ಚಿತ್ರವನ್ನು ಪುನರ್​ವಿಮರ್ಶೆ ಸಮಿತಿಗೆ ಕಳಿಸಲು ನಿರ್ಧರಿಸಿದೆ ಎನ್ನಲಾಗಿದೆ.

ತಮಿಳುನಾಡಿನ ಸೆನ್ಸಾರ್ ಮಂಡಳಿ ‘ಜನ ನಾಯಗನ್’ ಸಿನಿಮಾದ ಕೆಲವು ವಿಷಯದ ಬಗ್ಗೆ ಪ್ರಶ್ನೆ ಮಾಡಿ, ಅದನ್ನು ಪುನರ್ ವಿಮರ್ಶಾ ಸಮಿತಿಗೆ ಕಳುಹಿಸಲು ನಿರ್ಧರಿಸಿತ್ತು. ಆದರೆ, ಅದಕ್ಕೆ ಸಮಯ ಹಿಡಿಯುತ್ತದೆ ಎಂಬ ಕಾರಣಕ್ಕೆ ಕೋರ್ಟ್​​ನಲ್ಲಿ ಪರಿಹಾರ ಕಂಡುಕೊಳ್ಳಲು ನಿರ್ಮಾಣ ಸಂಸ್ಥೆ ನಿರ್ಧರಿಸಿತ್ತು. ಆದರೆ, ಕೋರ್ಟ್​​ನಲ್ಲಿ ಯಾವುದೇ ಪರಿಹಾರ ಸಿಗೋ ಸೂಚನೆ ಕಾಣಿಸುತ್ತಿಲ್ಲ. ಹೀಗಾಗಿ, ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ಜನ ನಾಯಗನ್’ ವಿಳಂಬದಿಂದ ‘ಟಾಕ್ಸಿಕ್’,‘ಕೆಡಿ’ಗೆ ದೊಡ್ಡ ಹೊಡೆತ?

‘ಕೆವಿಎನ್’ ಸಂಸ್ಥೆ ಕೋರ್ಟ್​​​ನಲ್ಲಿ ಸಿನಿಮಾದ ಬಜೆಟ್ ವಿಷಯವನ್ನು ಪ್ರಸ್ತಾಪ ಮಾಡುತ್ತಲೇ ಇದೆ. ‘ಚಿತ್ರಕ್ಕಾಗಿ 500 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಈ ಬಗ್ಗೆ ಗಮನಹರಿಸಬೇಕು’ ಎಂದು ನಿರ್ಮಾಣ ಸಂಸ್ಥೆ ಹೇಳಿತ್ತು. ‘ಜನ ನಾಯಗನ್’ ಸಿನಿಮಾಗೆ ವಿಜಯ್ ಹೀರೋ. ಇದು ಅವರ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಲಿದೆ. ಈ ಚಿತ್ರದ ಬಳಿಕ ಅವರು ರಾಜಕೀಯಕ್ಕೆ ಹೊರಳಲಿದ್ದಾರೆ. ಈ ಚಿತ್ರದಲ್ಲಿ ಮಲಯಾಳಂ ನಟಿ ಮಮಿತಾ ಬೈಜು, ಪೂಜಾ ಹೆಗ್ಡೆ ನಟಿಸಿದ್ದಾರೆ. ಎಚ್​. ವಿನೋದ್ ನಿರ್ದೇಶನ ಚಿತ್ರಕ್ಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.