AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್

ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್

Mangala RR
| Edited By: |

Updated on:Jan 28, 2026 | 10:54 PM

Share

‘ಯಾವುದೇ ನಷ್ಟ ಆದರೂ ನಿರ್ಮಾಪಕರನ್ನು ಕೈ ಹಿಡಿಯುವ ಸಪೋರ್ಟ್ ಸಿಗುತ್ತಿಲ್ಲ. ನಷ್ಟ ಆದರೆ ಚಿತ್ರರಂಗದವರೆಲ್ಲ ಸೇರಿ ಗೆಲ್ಲಿಸುವ ಪ್ರಯತ್ನ ಆಗಬೇಕು. ಸರ್ಕಾರದಿಂದ ಸಬ್ಸಿಡಿ ಸಿಗುತ್ತಿಲ್ಲ. ಸಬ್ಸಿಡಿ ಜಾಸ್ತಿ ಆಗಬೇಕು. ಸರಿಯಾದ ಸಮಯದಲ್ಲಿ ಸಿಗಬೇಕು. ಎಲ್ಲರೂ ಸೇರಿ ಸಿನಿಮಾ ಮಾಡಲು ವ್ಯವಸ್ಥೆ ಬರಬೇಕು’ ಎಂದು ಪ್ರಿಯಾ ಹಾಸನ್ ಹೇಳಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಚುನಾವಣೆ ಕಾವು ಹೆಚ್ಚಾಗಿದೆ. ಈ ಬಾರಿ ಪ್ರಿಯಾ ಹಾಸನ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಈ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಅವುಗಳನ್ನು ಬಗೆಹರಿಸುವ ಬಗ್ಗೆ ಅವರು ಭರವಸೆ ನೀಡಿದ್ದಾರೆ. ‘ನಿರ್ಮಾಪಕರಿಗೆ ಇರುವ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು. ಕೇವಲ ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ. ಬೇರೆ ಬೇರೆ ಸಿನಿಮಾಗಳು ಕೂಡ ಬರಬೇಕು. ಆಗ ಎಲ್ಲರಿಗೂ ಕೆಲಸ ಸಿಗುತ್ತದೆ. ತುಂಬ ನಿರ್ಮಾಪಕರು ಈಗ ಸಿನಿಮಾ ಮಾಡಲು ಹೆದರುತ್ತಿದ್ದಾರೆ. ಈ ರೀತಿಯ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶ ನಮಗೆ ಇದೆ’ ಎಂದು ಪ್ರಿಯಾ ಹಾಸನ್ (Priya Hassan) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 28, 2026 10:49 PM