AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಗೂ ಮಂಡಿಯೂರಿದ ‘ಜನ ನಾಯಗನ್’; ರಿಲೀಸ್ ಮತ್ತಷ್ಟು ವಿಳಂಬ?

ದಳಪತಿ ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರದ ಬಿಡುಗಡೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡದ ಕಾರಣ ವಿಳಂಬವಾಗಿದೆ. ಮೊದಲು ನ್ಯಾಯಾಲಯದ ಮೊರೆ ಹೋಗಿದ್ದ ಚಿತ್ರತಂಡ, ಈಗ ಕೇಸ್ ಹಿಂಪಡೆದು ಸಿಬಿಎಫ್‌ಸಿ ಪರಿಷ್ಕರಣಾ ಸಮಿತಿಗೆ ಸಿನಿಮಾ ಸಲ್ಲಿಸಲು ನಿರ್ಧರಿಸಿದೆ. ಈ ಪ್ರಕ್ರಿಯೆ ಒಂದು ತಿಂಗಳು ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಮುಂಬರುವ ಚುನಾವಣೆಗಳೊಂದಿಗೆ ಸಿನಿಮಾ ಬಿಡುಗಡೆಯು ಮತ್ತಷ್ಟು ಮುಂದೂಡಬಹುದು.

ಕೊನೆಗೂ ಮಂಡಿಯೂರಿದ ‘ಜನ ನಾಯಗನ್’; ರಿಲೀಸ್ ಮತ್ತಷ್ಟು ವಿಳಂಬ?
ಜನ ನಾಯಗನ್
ರಾಜೇಶ್ ದುಗ್ಗುಮನೆ
|

Updated on: Feb 10, 2026 | 7:05 AM

Share

ಅಂದುಕೊಂಡಂತೆ ನಡೆದಿದ್ದರೆ ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಈಗಾಗಲೇ ರಿಲೀಸ್ ಆಗಿ ಒಂದು ತಿಂಗಳು ಕಳೆದಿರಬೇಕಿತ್ತು. ಈಗಾಗಲೇ ಸಿನಿಮಾ ಒಟಿಟಿಗೆ ರಿಲೀಸ್​ಗೆ ರೆಡಿ ಆಗಬೇಕಿತ್ತು. ಆದರೆ, ಹಾಗಾಗಿಲ್ಲ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಪ್ರಮಾಣ ಪತ್ರ ನೀಡಿಲ್ಲ. ಇದರಿಂದ ಸಿನಿಮಾದ ಥಿಯೇಟ್ರಿಕಲ್ ರಿಲೀಸ್ ವಿಳಂಬ ಆಗುತ್ತಿದೆ. ಈಗಾಗಲೇ ತಂಡದವರು ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಆದರೆ, ತಂಡದವರು ಕೋರ್ಟ್​ನಿಂದ ಕೇಸ್​ನ ಹಿಂಪಡೆಯುವ ಬಗ್ಗೆ ಆಲೋಚನೆ ಮಾಡಿದ್ದಾರೆ. ಈ ಮೂಲಕ ಕೊನೆಗೂ ತಂಡ ಮಂಡಿಯೂರಿದೆ ಎಂದು ವರದಿ ಆಗಿದೆ.

ಕೆವಿಎನ್ ಪ್ರೊಡಕ್ಷನ್ ಪರ ವಕೀಲ ವಿಜಯನ್ ಸುಬ್ರಮಣಿಯನ್ ಅವರು ಮದ್ರಾಸ್ ಹೈಕೋರ್ಟ್ ರಿಜಿಸ್ಟ್ರಿಗೆ ಪತ್ರವೊಂದನ್ನು ಸಲ್ಲಿಸಿದ್ದಾರೆ. ಸಿಬಿಎಫ್‌ಸಿ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಹಿಂತೆಗೆದುಕೊಳ್ಳುವ ವಿಷಯವನ್ನು ತಿಳಿಸಿದ್ದಾರೆ. ಈಗ ನಿರ್ಮಾಣ ಸಂಸ್ಥೆ ಚಿತ್ರವನ್ನು ಸಿಬಿಎಫ್‌ಸಿಯ ಪರಿಷ್ಕರಣಾ ಸಮಿತಿಯ ಮುಂದೆ ಪರಿಶೀಲನೆಗೆ ಸಲ್ಲಿಸಲು ನಿರ್ಧರಿಸಿದೆ ಎಂದು ವರದಿ ಆಗಿದೆ.

ಸದ್ಯ ಕೋರ್ಟ್​​​ನಲ್ಲಿ ಸಿನಿಮಾ ರಿಲೀಸ್​​ಗೆ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.ಕೊರ್ಟ್​​​ಗೆ ತುರ್ತು ವಿಚಾರಣೆ ಮಾಡುವಂತೆ ಅರ್ಜಿ ಸಲ್ಲಿಸಿ ವಾರದ ಒಳಗೆ ಚಿತ್ರ ಬಿಡುಗಡೆ ಮಾಡುವ ಪ್ಲ್ಯಾನ್ ಅನ್ನು ತಂಡ ರೂಪಿಸಿಕೊಂಡಿತ್ತು. ಆದರೆ, ತಿಂಗಳು ಕಳೆದರೂ ಯಾವುದೇ ಪಾಸಿಟಿವ್ ಬದಲಾವಣೆ ಕಾಣುತ್ತಿಲ್ಲ. ಹೀಗಾಗಿ, ತಂಡದವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿ ಆಗಿದೆ.

ರಿವ್ಯೂ ಸಮಿತಿಗೆ ಸಿನಿಮಾನ ಸಲ್ಲಿಕೆ ಮಾಡಿದರೆ ಆ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ತಿಂಗಳು ಹಿಡಿಯುತ್ತದೆ. ಮಾರ್ಚ್ ವೇಳೆಗೆ ತಂಡಕ್ಕೆ ಸರ್ಟಿಫಿಕೇಟ್ ಸಿಗಬಹುದು. ಆ ವೇಳೆಗೆ ತಮಿಳುನಾಡು ಚುನಾವಣೆ ಘೋಷಣೆ ಆದರೆ, ಸಿನಿಮಾ ರಿಲೀಸ್ ಸಾಕಷ್ಟು ಮುಂದಕ್ಕೆ ಹೋಗಲಿದೆ.

ಇದನ್ನೂ ಓದಿ: ಮದುವೆ ಫಂಕ್ಷನ್​​ಗೆ ಅಟೆಂಡ್ ಆಗಿದ್ದಕ್ಕೂ ಟೀಕೆ ಎದುರಿಸಿದ ದಳಪತಿ ವಿಜಯ್

ಸದ್ಯದ ಬೆಳವಣಿಗೆ ವಿಜಯ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ವಿಜಯ್ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಿರೀಕ್ಷೆ ಹುಸಿಯಾಗಿದೆ. ‘ಜನ ನಾಯಗನ್’ ಚಿತ್ರವನ್ನು ಎಚ್​. ವಿನೋದ್ ನಿರ್ದೇಶನ ಮಾಡಿದ್ದಾರೆ. ದಳಪತಿ ವಿಜಯ್ , ಪೂಜಾ ಹೆಗ್ಡೆ, ಮಮಿತಾ ಬೈಜು ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ಹಾರ್ಮುಜ್ ಜಲಸಂಧಿ ಕ್ಲೋಸ್: ಪರ್ಷಿಯನ್ ಕೊಲ್ಲೀಲಿ ಸಿಲುಕಿದ ಭಾರತದ 37 ಹಡಗು
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಾವಣಗೆರೆ ಜಿಲ್ಲಾಧಿಕಾರಿ ನಿವಾಸಕ್ಕೆ ಬಾಂಬ್ ಬೆದರಿಕೆ
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ದಂಪತಿ ಜಗಳ ಶಾಲೆ ತನಕ:ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಹಾಲು ಮಾರುವ ಕೆಲಸ ಕೊಟ್ಟದ್ದಾರೆ: ಡಿ.ಕೆ.ಸುರೇಶ್
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಡಿಕೆ, ನಾನು ಹಾಲು ಜೇನು ಇದ್ದಂತೆ ಎಂದ ಸಿದ್ದು ಹೇಳಿಕೆಗೆ ಜೋಶಿ ವ್ಯಂಗ್ಯ
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಶಾಲೆಗೆ ಬಂದು ಮುಖ್ಯಶಿಕ್ಷಕನ 2ನೇ ಪತ್ನಿ ಹೈಡ್ರಾಮಾ: ವಿದ್ಯಾರ್ಥಿಗಳು ಕಂಗಾಲು
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಜಮ್ಮು ಕಾಶ್ಮೀರ: ಕುಣಿದು ಕುಪ್ಪಳಿಸಿ ಹೋಳಿ ಆಚರಿಸಿದ ಸಿಆರ್​ಪಿಎಫ್ ಯೋಧರು!
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರು
ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರರು
ಚಿತ್ರರಂಗಕ್ಕೆ 93 ವರ್ಷ: ನಡೆದು ಬಂದ ಹಾದಿಯ ನೆನೆದ ಜಯಮಾಲ
ಚಿತ್ರರಂಗಕ್ಕೆ 93 ವರ್ಷ: ನಡೆದು ಬಂದ ಹಾದಿಯ ನೆನೆದ ಜಯಮಾಲ
ಮುದ್ದು ಮಗಳ ಹುಟ್ಟುಹಬ್ಬಕ್ಕೆ ಮುದ್ದಾದ ವಿಡಿಯೋ ಹಂಚಿಕೊಂಡ ರಿಷಬ್ ಶೆಟ್ಟಿ
ಮುದ್ದು ಮಗಳ ಹುಟ್ಟುಹಬ್ಬಕ್ಕೆ ಮುದ್ದಾದ ವಿಡಿಯೋ ಹಂಚಿಕೊಂಡ ರಿಷಬ್ ಶೆಟ್ಟಿ