ಪವನ್ ಕಲ್ಯಾಣ್ ಸಿನಿಮಾದಲ್ಲಿ ಜಪಾನಿನ ಸೂಪರ್ ಸ್ಟಾರ್ ನಟ

Pawan Kalyan: ಆಂಧ್ರ ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಅರ್ಧಕ್ಕೆ ನಿಂತಿದ್ದ ತಮ್ಮ ಸಿನಿಮಾಗಳ ಚಿತ್ರೀಕರಣ ಪೂರ್ಣಗೊಳಿಸಲು ಮುಂದಾಗಿದ್ದಾರೆ. ‘ಹರಿ ಹರ ವೀರ ಮಲ್ಲು’ ಸಿನಿಮಾ ಚಿತ್ರೀಕರಣ ಪೂರ್ಣ ಮಾಡಿದ್ದಾರೆ. ಇದೀಗ ‘ಓಜಿ’ ಸಿನಿಮಾ ಸಹ ಪೂರ್ಣಗೊಳಿಸಲು ಮುಂದಾಗಿದ್ದಾರೆ. ಈ ಸಿನಿಮಾನಲ್ಲಿ ಜಪಾನಿನ ಸ್ಟಾರ್ ನಟರೊಬ್ಬರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಪವನ್ ಕಲ್ಯಾಣ್ ಸಿನಿಮಾದಲ್ಲಿ ಜಪಾನಿನ ಸೂಪರ್ ಸ್ಟಾರ್ ನಟ
Pawan Kalyan

Updated on: May 13, 2025 | 4:52 PM

ಪವನ್ ಕಲ್ಯಾಣ್ (Pawan Kalyan) ನಟನೆಯ ಮೂರು ಸಿನಿಮಾಗಳು ಕಳೆದ ಒಂದೂವರೆ ವರ್ಷದಿಂದ ನೆನೆಗುದಿಗೆ ಬಿದ್ದಿವೆ. ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ಪವನ್ ಕಲ್ಯಾಣ್ ‘ಹರಿ ಹರ ವೀರ ಮಲ್ಲು’, ‘ಓಜಿ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳನ್ನು ಪ್ರಾರಂಭ ಮಾಡಿದ್ದರು. ಅದರಲ್ಲಿ ಬಹಳ ಒತ್ತಡದ ಬಳಿಕ ಇತ್ತೀಚೆಗಷ್ಟೆ ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣವನ್ನು ಹಾಗೋ ಹೀಗೋ ಮಾಡಿ ಮುಗಿಸಿಕೊಟ್ಟಿದ್ದಾರೆ. ‘ಓಜಿ’ ಸಿನಿಮಾವನ್ನು ಸಹ ಮುಗಿಸಿಕೊಡುವುದಾಗಿ ಪವನ್ ಕಲ್ಯಾಣ್ ಹೇಳಿದ್ದಾರೆ. ‘ಓಜಿ’ ಸಿನಿಮಾದ ಚಿತ್ರೀಕರಣಕ್ಕೆ ಯೋಜನೆ ಸಿದ್ಧವಾಗಿದೆಯಂತೆ. ಇದರ ನಡುವೆ ಬಂದಿರುವ ಹೊಸ ಸುದ್ದಿಯ ಪ್ರಕಾರ, ಜಪಾನಿನ ಸೂಪರ್ ಸ್ಟಾರ್ ನಟರೊಬ್ಬರು ‘ಓಜಿ’ ಸಿನಿಮಾನಲ್ಲಿ ನಟಿಸಲಿದ್ದಾರೆ.

ಜಪಾನ್ ಮನೊರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಕಜುಕಿ ಕಿಟಾಮುರಾ, ‘ಓಜಿ’ ಸಿನಿಮಾನಲ್ಲಿ ನಟಿಸಲಿದ್ದಾರೆ. ಕಜುಕಿ ಕಿಟಾಮುರಾ ಜಪಾನ್ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಹಾಲಿವುಡ್​ನ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಜನಪ್ರಿಯ ‘ಕಿಲ್ ಬಿಲ್’ ಸಿನಿಮಾದ ಎರಡು ಭಾಗಗಳಲ್ಲಿಯೂ ಕಜುಕಿ ಕಿಟಾಮುರಾ ನಟಿಸಿದ್ದಾರೆ. ಅದಲ್ಲದೆ ‘ಗಾಡ್ಜಿಲಾ: ಫೈನಲ್ ವಾರ್ಸ್’ ಸಿನಿಮಾನಲ್ಲಿಯೂ ಕಜುಕಿ ನಟಿಸಿದ್ದಾರೆ. ಇದರ ಜೊತೆಗೆ ಜಪಾನಿ ಸೂಪರ್ ಹಿಟ್ ಸಿನಿಮಾಗಳಾದ ‘ಯಕೂಜಾ’, ‘ಅಜುಮಿ’, ‘ರುರೊನಿ ಕೆನ್​ಶಿನ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಲಿವುಡ್ ಸಿನಿಮಾಗಳಾದ ‘ದಿ ರೈಡ್ 2’, ‘ಬ್ಲೇಡ್ ಆಫ್ ಇಮ್ಮಾರ್ಟಲ್’ ಇನ್ನಿತರೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಜುಕಿ ಕಿಟಾಮುರಾ ಅದ್ಭುತ ನಟ.

ಇದನ್ನೂ ಓದಿ:ಪವನ್ ಕಲ್ಯಾಣ್ ಸಿನಿಮಾ ಸೆಟ್​ನಲ್ಲಿ ತ್ರಿವಿಕ್ರಮ್, ಅಭಿಮಾನಿಗಳಿಗೆ ಆತಂಕ

ಕಜುಕಿ ಕಿಟಾಮುರಾ ಮಾತ್ರವೇ ಅಲ್ಲದೆ ಥಾಯ್ ಜನಪ್ರಿಯ ನಟರೊಬ್ಬರು ಸಹ ‘ಓಜಿ’ ಸಿನಿಮಾನಲ್ಲಿ ನಟಿಸಲಿದ್ದಾರೆ. ವಿಥಾಯಾ ಪನ್​ಸ್ರಿಗನ್ ಅವರು ಸಹ ‘ಓಜಿ’ ಸಿನಿಮಾನಲ್ಲಿ ನಟಿಸಲಿದ್ದಾರೆ. ‘ಓನ್ಲಿ ಗಾಡ್ ಫರ್ಗೀವ್ಸ್’, ‘ಹ್ಯಾಂಗೋವರ್ 2’, ‘ಪ್ಯಾರಡಾಕ್ಸ್’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾನಲ್ಲಿ ಜಪಾನಿನ ಮಾಫಿಯಾ ಡಾನ್ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಈ ನಟ ‘ಓಜಿ’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ.

‘ಓಜಿ’ ಸಿನಿಮಾ ಅಂಡರ್ವಲ್ಡ್ ಕತೆಯನ್ನು ಒಳಗೊಂಡಿದ್ದು, ಸಿನಿಮಾ ಅನ್ನು ಸುಜಿತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ತಮಗೆ ಸಾಕಷ್ಟು ನಿರೀಕ್ಷೆಗಳು ಇವೆ ಎಂದು ಸ್ವತಃ ಪವನ್ ಕಲ್ಯಾಣ್, ಚುನಾವಣೆ ಸಮಯದಲ್ಲಿ ಹೇಳಿಕೊಂಡಿದ್ದರು. ಸಿನಿಮಾದ ಮತ್ತೊಂದು ವಿಶೇಷವೆಂದರೆ ಪವನ್ ಕಲ್ಯಾಣ್ ಹಿರಿಯ ಪುತ್ರ ‘ಓಜಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕೊಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ