ರಾಮ್ ಚರಣ್ ಮೇಲೆ ಬರಲಿದೆ ಡಾಕ್ಯುಮೆಂಟರಿ; ನೆಟ್ಫ್ಲಿಕ್ಸ್ನಿಂದ ತೆರೆಮರೆಯಲ್ಲಿ ಸಿದ್ಧತೆ
ರಾಮ್ ಚರಣ್ ಅವರ ಜೀವನದ ಮೇಲೆ ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿ ನಿರ್ಮಾಣ ಆಗುತ್ತಿದೆ ಎಂಬ ಸುದ್ದಿ ಹರಡಿದೆ. ಆರು ತಿಂಗಳಿಂದ ಈ ಯೋಜನೆಯ ಮೇಲೆ ಕೆಲಸ ನಡೆಯುತ್ತಿದೆ ಎನ್ನಲಾಗಿದೆ. 'ಆರ್‌ಆರ್‌ಆರ್' ಚಿತ್ರದ ಯಶಸ್ಸು ಮತ್ತು ಇತರ ಚಿತ್ರಗಳ ಬಗ್ಗೆಯೂ ಡಾಕ್ಯುಮೆಂಟರಿಯಲ್ಲಿ ತೋರಿಸಲಾಗುವುದು .

ರಾಮ್ ಚರಣ್ (Ram Charan) ಅವರು ತೆಲುಗು ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಪಡೆದ ನಟ. ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದ ಇವರು ಯಾವುದೇ ಕಷ್ಟ ನೋಡಿದವರಲ್ಲ. ಆದರೆ, ಚಿರಂಜೀವಿ ನೆರಳಲ್ಲಿ ಬದುಕದೇ ತಮ್ಮನ್ನು ತಾವು ಸಾಬೀತು ಮಾಡಿಕೊಂಡರು. ಇದು ಅವರ ಹೆಚ್ಚುಗಾರಿಕೆ. ಈಗ ರಾಮ್ ಚರಣ್ ಅವರ ಬಗ್ಗೆ ಒಂದು ಅಚ್ಚರಿಯ ವಿಚಾರ ರಿವೀಲ್ ಆಗಿದೆ. ರಾಮ್ ಚರಣ್ ಹೆಸರಲ್ಲಿ ಡಾಕ್ಯುಮೆಂಟರಿ ಮಾಡಲು ನೆಟ್‌ಫ್ಲಿಕ್ಸ್ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.
ಲಂಡನ್ನ ವಿಶ್ವ ವಿಖ್ಯಾತ ಮೇಡಮ್ ಟುಸ್ಸಾಡ್ಸ್ ವ್ಯಾಕ್ಸ್ ಮ್ಯೂಸಿಯಂನಲ್ಲಿ ರಾಮ್ ಚರಣ್ ಸ್ಟ್ಯಾಚ್ಯೂ ಅನಾವರಣಗೊಂಡಿದೆ. ಈ ಅದ್ದೂರಿ ಕಾರ್ಯಕ್ರಮಕ್ಕೆ ರಾಮ್ ಚರಣ್ ಅವರು ಕುಟುಂಬದ ಜೊತೆ ಹಾಜರಿ ಹಾಕಿದ್ದರು. ಇಷ್ಟೇ ಅಲ್ಲ, ಅವರ ಪ್ರೀತಿಯ ಸಾಕು ನಾಯಿ ರೈಮಿ ಕೂಡ ಅವರ ಜೊತೆ ಇತ್ತು. ಈ ಫೋಟೋ ವೈರಲ್ ಆಗಿದೆ. ಈಗ ರಾಮ್ ಚರಣ್ ಬಗ್ಗೆ ಹೊಸ ಅಪ್ಡೇಟ್ ಒಂದು ಕೇಳಿ ಬಂದಿದೆ.
ರಾಮ್ ಚರಣ್ ಅವರ ಜೀವನ ಆಧರಿಸಿ ಒಂದು ಡಾಕ್ಯುಮೆಂಟರಿ ಮಾಡಲು ನೆಟ್‌ಫ್ಲಿಕ್ಸ್ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೆ ಆರು ತಿಂಗಳಿಂದ ತೆರೆಮರೆಯ ಸಿದ್ಧತೆ ನಡೆದಿದೆ. ಇದಕ್ಕಾಗಿ ಕೆಲವು ದೃಶ್ಯಗಳನ್ನು ಕೂಡ ಶೂಟ್ ಮಾಡಲಾಗಿದೆ ಎನ್ನಲಾಗಿದೆ. ಇದೆಲ್ಲವೂ ನೈಸರ್ಗಿಕವಾಗಿ ಮೂಡಿ ಬರುವಂತೆ ನೋಡಿಕೊಳ್ಳಲಾಗುತ್ತಿದೆ. ‘ಗೇಮ್ ಚೇಂಜರ್’ ಸಿನಿಮಾದ ಮೊದಲ ದಿನದ ಶೋಗೆ ಯಾವ ರೀತಿಯಲ್ಲಿ ಜನರು ನುಗ್ಗಿದ್ದರು ಎಂಬುದನ್ನು ಶೂಟ್ ಮಾಡಿಟ್ಟುಕೊಳ್ಳಲಾಗಿದೆಯಂತೆ.
ಈ ಮೊದಲು ನಯನಾತಾರಾ ಜೀವನ ಆಧರಿಸಿ ಡಾಕ್ಯುಮೆಂಟರಿ ಮೂಡಿ ಬಂದಿತ್ತು. ಇದರಲ್ಲಿ ನಯನತಾರಾ ಅವರ ವೈಯಕ್ತಿಕ ಜೀವನ ಹಾಗೂ ಸಿನಿಮಾ ಜೀವನದ ಬಗ್ಗೆ ತೋರಿಸಲಾಗಿತ್ತು. ಜೊತೆಗೆ ಅವರ ಜೊತೆ ಕೆಲಸ ಮಾಡಿದವರ ಬೈಟ್ ಕೂಡ ಇತ್ತು. ರಾಮ್ ಚರಣ್ ಡಾಕ್ಯುಮೆಂಟರಿ ಕೂಡ ಇದೇ ರೀತಿಯಲ್ಲಿ ಇರಲಿದೆ ಎನ್ನಲಾಗಿದೆ. ಈ ಬಗ್ಗೆ ಶೀಘ್ರವೇ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ: ಇದರಲ್ಲಿ ನಿಜವಾದ ರಾಮ್ ಚರಣ್ ಯಾರು ಅಂತ ಗುರುತಿಸಲು ಸಾಧ್ಯವೇ?
ರಾಮ್ ಚರಣ್ ನಟನೆಯ ‘ಆರ್‌ಆರ್‌ಆರ್’ ಸಿನಿಮಾ 2023ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತು. ಆ ಬಳಿಕ ಬಂದ ‘ಆಚಾರ್ಯ’ ಹಾಗೂ ‘ಗೇಮ್ ಚೇಂಜರ್’ ಚಿತ್ರಗಳು ನೆಲಕಚ್ಚಿದವು. ಈಗ ಅವರು ‘ಪೆದ್ದಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಬುಚಿ ಬಾಬು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








