ಗಲ್ಲಾಪೆಟ್ಟಿಗೆಯಲ್ಲಿ ‘ಜವಾನ್’ ಸಿನಿಮಾ (Jawan Movie) ಅಬ್ಬರಿಸುತ್ತಿದೆ. ಈ ಸಿನಿಮಾದ ಕ್ರೇಜ್ನಿಂದ ಅನೇಕ ಚಿತ್ರಗಳ ದಾಖಲೆಗಳು ಪುಡಿ ಆಗುತ್ತಿವೆ. ಸೆಪ್ಟೆಂಬರ್ 7ರಂದು ‘ಜವಾನ್’ ಬಿಡುಗಡೆ ಆಯಿತು. ಶಾರುಖ್ ಖಾನ್ (Shah Rukh Khan) ಅಭಿಮಾನಿಗಳು ಈ ಸಿನಿಮಾಗೆ ದೊಡ್ಡ ಮಟ್ಟದ ಓಪನಿಂಗ್ ನೀಡಿದರು. ಅಂದಿನಿಂದ ಪ್ರತಿದಿನವೂ ಈ ಸಿನಿಮಾ ಸದ್ದು ಮಾಡುತ್ತಲೇ ಇದೆ. ಬಾಕ್ಸ್ ಆಫೀಸ್ ಕಲೆಕ್ಷನ್ (Jawan Box Office Collection) ವಿಚಾರದಲ್ಲಿ ಈ ಚಿತ್ರ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಅಚ್ಚರಿ ಎಂದರೆ ಅತಿ ವೇಗವಾಗಿ 250 ಕೋಟಿ ರೂಪಾಯಿ ಗಳಿಸಿದ ಹಿಂದಿ ಸಿನಿಮಾ ಎಂಬ ಖ್ಯಾತಿಗೆ ‘ಜವಾನ್’ ಪಾತ್ರವಾಗಿದೆ. ಈ ವಿಚಾರದಲ್ಲಿ ‘ಕೆಜಿಎಫ್ 2’ ಮತ್ತು ‘ಬಾಹುಬಲಿ 2’ ಸಿನಿಮಾದ ಹಿಂದಿ ವರ್ಷನ್ ಅನ್ನು ‘ಜವಾನ್’ ಮೀರಿಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
ದಕ್ಷಿಣ ಭಾರತದ ‘ಕೆಜಿಎಫ್ 2’, ‘ಬಾಹುಬಲಿ 2’ ಮುಂತಾದ ಸಿನಿಮಾಗಳು ಹಿಂದಿಗೂ ಡಬ್ ಆಗಿ ತೆರೆಕಂಡು ಉತ್ತಮವಾಗಿ ಕಮಾಯಿ ಮಾಡಿದ್ದವು. ಆ ಚಿತ್ರಗಳ ಗಳಿಕೆಗೆ ಹೋಲಿಸಿದರೆ ‘ಜವಾನ್’ ಸಿನಿಮಾ ಬಹಳ ವೇಗವಾಗಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದೆ. ಈ ವಿಚಾರದಲ್ಲಿ ಶಾರುಖ್ ಖಾನ್ ಅವರು ಹೊಸ ದಾಖಲೆ ಬರೆದಿದ್ದಾರೆ. ಹಿಂದಿ ಮಾರುಕಟ್ಟೆಯಲ್ಲಿ 250 ಕೋಟಿ ರೂಪಾಯಿ ಗಳಿಸಲು ‘ಕೆಜಿಎಫ್ 2’ ಸಿನಿಮಾ 7 ದಿನಗಳನ್ನು ತೆಗೆದುಕೊಂಡಿತ್ತು. ‘ಬಾಹುಬಲಿ 2’ ಸಿನಿಮಾಗೆ 8 ದಿನ ಹಿಡಿದಿತ್ತು. ಆದರೆ ‘ಜವಾನ್’ ಸಿನಿಮಾ ಕೇವಲ ನಾಲ್ಕೇ ದಿನದಲ್ಲಿ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
#Xclusiv… ‘JAWAN’ FASTEST TO HIT ₹ 250 CR… OVERTAKES ‘PATHAAN’, ‘GADAR 2’, ‘KGF2’, ‘BAAHUBALI 2’…
⭐️ #Jawan: Day 4
⭐️ #Pathaan: Day 5
⭐️ #Gadar2: Day 6
⭐️ #KGF2 #Hindi: Day 7
⭐️ #Baahubali2 #Hindi: Day 8
⭐️ #Dangal: Day 10
⭐️ #Sanju: Day 10
⭐️ #TigerZindaHai: Day 10#India… pic.twitter.com/HysUPHUbqL— taran adarsh (@taran_adarsh) September 11, 2023
‘ಜವಾನ್’ – 4ನೇ ದಿನ
‘ಪಠಾಣ್’ – 5ನೇ ದಿನ
‘ಗದರ್ 2’ – 6ನೇ ದಿನ
‘ಕೆಜಿಎಫ್ 2’- 7ನೇ ದಿನ
‘ಬಾಹುಬಲಿ 2’- 8ನೇ ದಿನ
‘ದಂಗಲ್’ – 10ನೇ ದಿನ
‘ಸಂಜು’ – 10ನೇ ದಿನ
‘ಟೈಗರ್ ಜಿಂದಾ ಹೈ’ – 10ನೇ ದಿನ
ಇದನ್ನೂ ಓದಿ: ಸೋಮವಾರವೂ ತಗ್ಗಲಿಲ್ಲ ‘ಜವಾನ್’ ಕಲೆಕ್ಷನ್; 300 ಕೋಟಿ ಕ್ಲಬ್ ಸೇರಿದ ಶಾರುಖ್ ಸಿನಿಮಾ
‘ಜವಾನ್’ ಸಿನಿಮಾಗೆ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಜೊತೆ ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಸುನಿಲ್ ಗ್ರೋವರ್, ಸಂಜಯ್ ದತ್, ನಯನತಾರಾ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶ್ವಾದ್ಯಂತ ಹಿಂದಿ, ತಮಿಳು, ತೆಲುಗು ವರ್ಷನ್ ಸೇರಿ ಈ ಸಿನಿಮಾಗೆ ನಾಲ್ಕು ದಿನದಲ್ಲಿ 520 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.