ಜಾನಿ ಲಿವರ್ ಶ್ರೀಮಂತ ಕಾಮಿಡಿಯನ್ ಅನಿಸಿಕೊಂಡಿದ್ದು ಹೇಗೆ? ಇಲ್ಲಿದೆ ವಿವರ

| Updated By: ರಾಜೇಶ್ ದುಗ್ಗುಮನೆ

Updated on: Aug 14, 2024 | 7:50 AM

ನಟರಷ್ಟು ಕಮಾಯಿ ಮಾಡಲು ಕಾಮಿಡಿ ಕಲಾವಿದರ ಬಳಿ ಸಾಧ್ಯವಿಲ್ಲ ಎಂಬುದು ಚಿತ್ರರಂಗದಲ್ಲಿ ಇರುವವರ ನಂಬಿಕೆ. ಆದರೆ, ಇದನ್ನು ಸುಳ್ಳು ಮಾಡಿದ ಅನೇಕರಿದ್ದಾರೆ. ಜಾನಿ ಲಿವರ್ ಅವರು ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಜಾನಿ ಲಿವರ್ ಶ್ರೀಮಂತ ಕಾಮಿಡಿಯನ್ ಅನಿಸಿಕೊಂಡಿದ್ದು ಹೇಗೆ? ಇಲ್ಲಿದೆ ವಿವರ
ಜಾನಿ ಲಿವರ್
Follow us on

ಬಾಲಿವುಡ್​ನ ಖ್ಯಾತ ನಟ ಜಾನಿ ಲಿವರ್ ಅವರಿಗೆ ಇಂದು (ಆಗಸ್ಟ್ 4) ಜನ್ಮದಿನ. ಅವರಿಗೆ ಈಗ 67 ವರ್ಷ ವಯಸ್ಸು. ಅವರು ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆ. ‘ವೆಲ್​ಕಮ್ ಟು ದ ಜಂಗಲ್’ ಚಿತ್ರದಲ್ಲಿ ಜಾನಿ ಲಿವರ್ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ಪಾತ್ರವರ್ಗವೇ ಇದೆ. ಅವರ ಕಾಮಿಡಿ ಟೈಮಿಂಗ್​ ಫ್ಯಾನ್ಸ್​ಗೆ ಸಖತ್ ಇಷ್ಟ ಆಗುತ್ತದೆ. ಅವರು ಭಾರತದ ಶ್ರೀಮಂತ ಕಾಮಿಡಿಯನ್​ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

ಜಾನಿ ಲಿವರ್ ಅವರು ಜನಿಸಿದ್ದು ಆಂಧ್ರ ಪ್ರದೇಶದಲ್ಲಿ. ಕ್ರೈಸ್ತ ಕುಟುಂಬದಲ್ಲಿ ಅವರು ಹುಟ್ಟಿದರು. ಅವರ ತಂದೆ ಹಿಂದುಸ್ತಾನ್ ಯುನಿಲಿವರ್​ನಲ್ಲಿ ಕೆಲಸ ಮಾಡುತ್ತಿದ್ದರು. ಜಾನಿ ಕೂಡ ಇಲ್ಲಿ ಆರು ವರ್ಷ ಕೆಲಸ ಮಾಡಿದ್ದರು. ಶಿಕ್ಷಣ ತೊರೆದು ಪೆನ್ ಹಾಗೂ ಇತರ ವಸ್ತುಗಳನ್ನು ಮಾರಾಟ ಮಾಡಲು ಜಾನಿ ಲಿವರ್ ನಿರ್ಧರಿಸಿದರು. ಮುಂಬೈ ರಸ್ತೆಗಳಲ್ಲಿ ಖ್ಯಾತ ಹಿಂದಿ ನಾಮರ ಮಿಮಿಕ್ರಿ ಮಾಡುತ್ತಾ ಅವರು ಪೆನ್ ಮಾರಿದರು.

ಜಾನಿ ಲಿವರ್ ಮೂಲ ಹೆಸರು ಜಾನ್ ಪ್ರಕಾಶ್ ರಾವ್ ನುನುಮಾಲಾ. ಅವರು ಹಿಂದೂಸ್ತಾನ್ ಯುನಿಲಿವರ್​ನಲ್ಲಿ ಕೆಲಸ ಮಾಡುವಾಗ ಅವರನ್ನು ಅಲ್ಲಿದ್ದವರು ಜಾನಿ ಲಿವರ್ ಎಂದು ಕರೆಯಲು ಆರಂಭಿಸಿದರು. ಅದೇ ಹೆಸರನ್ನು ಅವರು ಚಿತ್ರರಂಗದಲ್ಲೂ ಬಳಸಿಕೊಂಡರು. ಆರಂಭದಲ್ಲಿ ಜಾನಿ ಲಿವರ್ ಅವರು ಸ್ಟ್ಯಾಂಡಪ್ ಕಾಮಿಡಿ ಮಾಡುತ್ತಿದ್ದರು. ಇವರ ಟ್ಯಾಲೆಂಟ್ ಗಮನಿಸಿದ ಸಂಜಯ್ ದತ್ ಅವರು ಸಿನಿಮಾ ಆಫರ್ ನೀಡಿದರು. 1982ರಲ್ಲಿ ರಿಲೀಸ್ ಆದ ‘ದರ್ದ್​ ಕಾ ರಿಷ್ತಾ’ ಸಿನಿಮಾ ಆಫರ್ ನೀಡಿದರು. ಇದರಿಂದ ಅವರು ಚಿತ್ರರಂಗದಲ್ಲಿ ಬ್ಯುಸಿ ಆದರು.

‘ತುಮ್ ಪರ್ ಹಮ್ ಕುರ್ಬಾನ್’ ಚಿತ್ರದಿಂದ ಜಾನಿ ಲಿವರ್ ಖ್ಯಾತಿ ಹೆಚ್ಚಾಯಿತು. ಆ ಬಳಿಕ ಅವರು ಹಿಂದಿರುಗಿ ನೋಡಲೇ ಇಲ್ಲ. ನಂತರ ಜಾನಿ ಲಿವುಡ್ ಬಾಲಿವುಡ್​ನ ಖ್ಯಾತ ಕಾಮಿಡಿಯನ್ ಆಗಿ ಫೇಮಸ್ ಆದರು. ಅಕ್ಷಯ್ ಕುಮಾರ್ ಸಿನಿಮಾಗಳಲ್ಲಿ ಅವರು ಮಾಡಿರೋ ಪಾತ್ರಗಳು ಈಗಲೂ ಗಮನ ಸೆಳೆಯುತ್ತಿವೆ.

ಇದನ್ನೂ ಓದಿ: ಕಪಿಲ್ ಶರ್ಮಾ ಅಲ್ಲ, ಬ್ರಹ್ಮಾನಂದಂ ಭಾರತದ ಶ್ರೀಮಂತ ಕಾಮಿಡಿಯನ್; ಸ್ಟಾರ್​​​ಗಳನ್ನೂ ಮೀರಿಸುತ್ತದೆ ಆಸ್ತಿ

ಜಾನಿ ಲಿವರ್ ಆಸ್ತಿ ಸುಮಾರು 270 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಮಾಡಿದ ಸಿನಿಮಾಗಳಿಂದ ದೊಡ್ಡ ಮಟ್ಟದ ಗಳಿಕೆ ಮಾಡಿದ್ದಾರೆ. ಅವರು ಚಿತ್ರರಂಗದಲ್ಲಿ ಕಳೆದ ಮೂರು ದಶಕಗಳಿಂದ ಮಿಂಚುತ್ತಿದ್ದಾರೆ. ಅವರು ಮುಂಬೈಬಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಅನೇಕ ಕಡೆಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.