Aniruddha Press Meet: ಭಿನ್ನಾಭಿಪ್ರಾಯಗಳು ಮನೆಯಲ್ಲಿ ಇದ್ದೇ ಇರುತ್ತೆ, ನನಗೆ ಯಾವುದೇ ದುರಹಂಕಾರ ಇಲ್ಲ: ನಟ ಅನಿರುದ್ಧ

ನನಗೆ ದುರಂಹಕಾರ ಬಂತು ಅನ್ನೋ ಆರೋಪವಿದೆ. ಆದರೆ ನನ್ನ ಅಭಿನಯದಲ್ಲಿ ಯಾವುದಾದ್ರೂ ಸೀನ್ ನೋಡಿ ನಿಮಗೆ ಗೊತ್ತಾಗುತ್ತೆ. ಫ್ಲಾಶ್ ಬ್ಯಾಕ್ ಕತೆಗಾಗಿ 12 ಕೆಜಿ ಕಮ್ಮಿ ಆಗಿದ್ದಿನಿ, ನಾನು ಪಾತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ ಎಂದರು.

Aniruddha Press Meet: ಭಿನ್ನಾಭಿಪ್ರಾಯಗಳು ಮನೆಯಲ್ಲಿ ಇದ್ದೇ ಇರುತ್ತೆ, ನನಗೆ ಯಾವುದೇ ದುರಹಂಕಾರ ಇಲ್ಲ: ನಟ ಅನಿರುದ್ಧ
Jothe Jotheyali
Edited By:

Updated on: Aug 20, 2022 | 2:11 PM

ಕನ್ನಡ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ನ ನಾಯಕ ನಟ ಅನಿರುದ್ಧ್ (Aniruddha Jatkar) ಅವರಿಗೆ ಸಂಕಷ್ಟ ಎದುರಾಗಿದೆ. ಅವರನ್ನು ಮುಂದಿನ ಎರಡು ವರ್ಷಗಳ ಕಾಲ ಯಾವುದೇ ಧಾರಾವಾಹಿಗಳಲ್ಲಿ ಅವಕಾಶ ನೀಡದಂತೆ ಎಲ್ಲಾ ನಿರ್ಮಾಪಕರು ನಿರ್ಧರಿಸಿದ್ದಾರೆ. ಈ ಬಗ್ಗೆ ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಮಾಹಿತಿ ನೀಡಿದ್ದಾರೆ. ನಟ ಅನಿರುದ್ಧ್ ಅವರ ಜೊತೆ ತಂತ್ರಜ್ಞರ ತಂಡ ಮುನಿಸಿಕೊಂಡಿದ್ದು, ಹೀಗಾಗಿ ಅವರನ್ನು ಸೀರಿಯಲ್ನಿಂದ ಕೈ ಬಿಡಲು ನಿರ್ಧರಿಸಲಾಗಿದೆ. ಇದೀಗ ಈ ಎಲ್ಲ ಘಟನೆಗಳ ಬಗ್ಗೆ ನಟ ಅನಿರುದ್ಧ್ ಸುದ್ದಿಗೋಷ್ಠಿಯನ್ನು ನಡೆಸಿದ್ದಾರೆ. ಧಾರಾವಾಹಿ ನಂಗೆ ವೈಯಕ್ತಿಕವಾಗಿ ತುಂಬಾ ಕೊಟ್ಟಿದೆ. ಇದು ನನ್ನ ಅದೃಷ್ಟ ಎಂದು ಭಾವಿಸುವೇ, ಜೊತೆ ಜೊತೆಯಲ್ಲಿ ನನ್ನಿಂದ ನಡೆಯುತ್ತಿದೆ ಎಂದು ನಾನು ಭಾವಿಸಿಲ್ಲ. ದೇವರ ಸ್ವರೂಪ ಆಗಿರೋ ಪ್ರೇಕ್ಷಕರಿಂದ ಈ ಯಶಸ್ಸು ಸಿಕ್ಕಿದೆ ಎಂದು ಹೇಳಿದ್ದಾರೆ.

ನನಗೆ ದುರಂಹಕಾರ ಬಂತು ಅನ್ನೋ ಆರೋಪವಿದೆ. ಆದರೆ ನನ್ನ ಅಭಿನಯದಲ್ಲಿ ಯಾವುದಾದ್ರೂ ಸೀನ್ ನೋಡಿ ನಿಮಗೆ ಗೊತ್ತಾಗುತ್ತೆ. ಫ್ಲಾಶ್ ಬ್ಯಾಕ್ ಕತೆಗಾಗಿ 12 ಕೆಜಿ ಕಮ್ಮಿ ಆಗಿದ್ದಿನಿ, ನಾನು ಪಾತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ ಎಂದರು.

ಹಿಂದಿನಿ ದಿನ ಸೀನ್ ಪೇಪರ್ ಕಳುಹಿಸಿ ಎಂದು ಸಿರೀಯಲ್ ಶುರುವಾದಾಗಿನಿಂದ ಕೇಳುತ್ತಿರುವೇ ಇವತ್ತು ಅಧಿಕೃತವಾಗಿ ಮಾಹಿತಿ ಬಂದಿದೆ. ಭಿನ್ನಾಭಿಪ್ರಾಯ ಆಗೋದು ಸರ್ವೇ ಸಾಮಾನ್ಯ, ಇಲ್ಲಿ ಆಗಿರುವ ಘಟನೆ ಕತೆಗೋಸ್ಕರ, ಆ ಭಿನ್ನಾಭಿಪ್ರಾಯ ಹೊರಗಡೆ ಹೇಳೋ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ.

ವಿಷ್ಣುವರ್ಧನ್ ಅಳಿಯ ಅನ್ನೋ ವಿಶೇಷವಾದ ಗೌರವ ಇದೆ: ಆರೂರು ಜಗದೀಶ್

ಅನಿರುಧ್ ಅವರು ಮೇಲೆ ವಿಷ್ಣುವರ್ಧನ್ ಅಳಿಯ ಅನ್ನೋ ವಿಶೇಷವಾದ ಗೌರವ ಇದೆ. ಜನಪ್ರಿಯತೆ ಬಂದ್ಮೆಲೆ ಧಾರವಾಹಿ ಮೇಲೆ ಹಿಡಿತ ಸಾಧಿಸೋಕೆ ಬಂದ್ರು, ಬೀದಿಗಳಲ್ಲಿ ಶೂಟ್ ಮಾಡ್ತಿದ್ವಿ ಈಗ ಕಾರವಾನ್ ಇಲ್ದೆ ಶೂಟ್​ಗೆ ಬರಲ್ಲ ಅನ್ನುವ ಹಂತಕ್ಕೆ ಬಂದಿದೆ. ಈ ಹಿಂದೆ ಫ್ಯಾಕ್ಟರಿಯಲ್ಲಿ ಶೂಟ್ ಮಾಡುವಾಗಲು ಈ ರೀತಿಯ ಕಿರಿಕ್ ಆಗಿತ್ತು. ಸ್ಕ್ರಿಪ್ಟ್ ಈಗ ಕೊಟ್ಟಿದ್ದೀರ ಎಂದು ಕಿರಿಕ್ ಮಾಡಿದ್ದಾರೆ. ಇದರಿಂದ ಒಂದು ಗಂಟೆ ಶೂಟಿಂಗ್ ಸ್ಟಾಪ್ ಆಗಿದೆ. ಈ ಸಿರಿಯಲ್​ಗಾಗಿ ನನ್ನ ಎಲ್ಲ ಒಡವೆಯನ್ನು ಅಡವಿಟ್ಟಿದ್ದೀನಿ. ಪ್ರತಿ ಬಾರಿ ಶೂಟಿಂಗ್ ವೇಳೆ ಸಣ್ಣ ಸಣ್ಣ ವಿಷಯಕ್ಕೂ ಜೋರಾಗಿ ಕೂಗಾಡಿದ್ದಾರೆ. ನಮ್ಮಲ್ಲಿ ಕೆಲಸ ಮಾಡುವ ಸುಮಾರು ಜನರನ್ನು ಇವ್ರಿಗಾಗಿ ಕೆಲಸದಿಂದ ತೆಗೆದಿರುವೇ ಎಂದು ಆರೂರು ಜಗದೀಶ್ ಹೇಳಿದ್ದಾರೆ.

ಸೆಟ್​ನಲ್ಲಿರುವ ತಂತ್ರಜ್ಞರು ನನ್ನ ಬಗ್ಗೆ ಗಾಸಿಪ್ ಮಾತನಾಡುತ್ತಾರೆ ಎಂದು ಅನಿರುದ್ಧ್ ಹೇಳಿದ್ದಾರೆ, ಅಂತಹ ಯಾರು ಈ ರೀತಿ ಮಾಡಿಲ್ಲ ಗಟ್ಟಿಮೇಳ ಜೊತೆ ಜೊತೆಯಲ್ಲಿ ಮಹಾಸಂಗಮ‌ ನಡೀತು ಕೊರೊನಾ ಟೈಮ್​ನಲ್ಲಿ ಎಲ್ಲರಿಗೂ ಪೇಮೆಂಟ್ 15% ಕಡಿಮೆ ಮಾಡಿದ್ವಿ ಆ ಸಮಯದಲ್ಲೂ ಕೂಡ ಇವರು ಗಲಾಟೆ ಮಾಡಿದ್ದಾರೆ ಎಂದು ಸೆಟ್​ನಲ್ಲಿ ಅನಿರುದ್ಧ್ ಅವರು ಮಾಡಿದ ಕಿರಿಕ್ ಬಗ್ಗೆ ಹೇಳಿದ್ದಾರೆ.

Published On - 2:01 pm, Sat, 20 August 22