ಯಶ್, ರಣಬೀರ್ ನಟನೆಯ ‘ರಾಮಾಯಣ’ದ ಜತೆ ಸ್ಪರ್ಧೆ; ರಾಮನ ಬಗ್ಗೆ ಹೊಸ ಸಿನಿಮಾ

|

Updated on: Apr 18, 2024 | 6:59 AM

ರಾಮಾಯಣ ಆಧರಿಸಿ ಚಿತ್ರರಂಗದಲ್ಲಿ ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ಹಿಂದಿಯಲ್ಲಿ ‘ರಾಮಾಯಣ’ದ ಶೂಟಿಂಗ್ ಶುರುವಾಗಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಮೊದಲಾದವರು ನಟಿಸಿದ್ದಾರೆ. ರಾಮ ನವಮಿ ಸಂದರ್ಭದಲ್ಲಿ ತೆಲುಗು ‘ರಾಮಾಯಣ’ದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ.  

ಯಶ್, ರಣಬೀರ್ ನಟನೆಯ ‘ರಾಮಾಯಣ’ದ ಜತೆ ಸ್ಪರ್ಧೆ; ರಾಮನ ಬಗ್ಗೆ ಹೊಸ ಸಿನಿಮಾ
ರಾಮಾಯಣ
Follow us on

ಏಪ್ರಿಲ್ 17ರಂದು ಎಲ್ಲ ಕಡೆಗಳಲ್ಲಿ ರಾಮ ನವಮಿಯನ್ನು ಆಚರಿಸಲಾಗಿದೆ. ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಈ ಹಬ್ಬದ ಅದ್ದೂರಿತನ ಜೋರಾಗಿತ್ತು. ಈ ಮಧ್ಯೆ ರಾಮಾಯಣದ ಬಗ್ಗೆ ಹೊಸ ಸಿನಿಮಾ ಘೋಷಣೆ ಮಾಡಲಾಗಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಜರ್ನಿ ಟು ಅಯೋಧ್ಯ’ (Journey To Ayodhya) ಎಂದು ಶೀರ್ಷಿಕೆ ಇಡಲಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಟೈಟಲ್ ಘೋಷಣೆ ಆಗಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಚಿತ್ರರಂಗದಲ್ಲಿ ಈಗಾಗಲೇ ರಾಮಾಯಣ ಆಧರಿಸಿ ಹಲವು ಸೀರಿಸ್ ಹಾಗೂ ಸಿನಿಮಾಗಳು ಬಂದಿವೆ. ಹಿಂದಿಯಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ದ ಶೂಟಿಂಗ್ ಶುರುವಾಗಿದೆ. ಈ ಸಿನಿಮಾ ಸೆಟ್​ನ ಫೋಟೋಗಳು ಲೀಕ್ ಆಗಿದ್ದವು. ಈಗ ರಾಮ ನವಮಿ ಸಂದರ್ಭದಲ್ಲಿ ತೆಲುಗು ‘ರಾಮಾಯಣ’ದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ.

‘ಚಿತ್ರಾಲಯಂ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ವಿಎನ್​ ಆದಿತ್ಯ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪೋಸ್ಟರ್​ನಲ್ಲಿ ವ್ಯಕ್ತಿಯೋರ್ವ ರಸ್ತೆಯಲ್ಲಿ ನಡೆದು ಸಾಗುತ್ತಿರುವುದಿದೆ. ಅಯೋಧ್ಯೆ 1177 ಕಿ.ಮೀ ಎಂದು ಬರೆದಿದೆ. ಹೀಗಾಗಿ ದಕ್ಷಿಣದಿಂದ ಅಯೋಧ್ಯೆಗೆ ಹೋಗುವ ಕಥೆ ಇದಿರಬಹುದು ಎಂದು ಊಹಸಿಲಾಗಿದೆ. ಪೋಸ್ಟರ್​ನಲ್ಲಿ ಇರುವುದು ರಾಮನೇ ಹೌದೋ ಅಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಸಿನಿಮಾದ ಪಾತ್ರವರ್ಗದ ಬಗ್ಗೆಯೂ ತಂಡ ಗುಟ್ಟುಬಿಟ್ಟುಕೊಟ್ಟಿಲ್ಲ. ಸದ್ಯ ಸಿನಿಮಾ ಕೆಲಸಗಳು ಪ್ರೀ ಪ್ರೊಡಕ್ಷನ್ ಹಂತದಲ್ಲಿ ಇವೆ.

ಇದನ್ನೂ ಓದಿ: ಬಾಲಿವುಡ್​ನ ‘ರಾಮಾಯಣ’ ಚಿತ್ರಕ್ಕೆ ನಿರ್ಮಾಪಕನಾದ ಯಶ್; ಏನಿದು ಸಮಾಚಾರ?

ರಾಮಾಯಣ ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ಬೇಕು. ಕಥೆ ಹೇಳಿರುವ ಅನುಭವ ಬೇಕು. ಆದರೆ, ವಿಎನ್​ ಆದಿತ್ಯ ನಿರ್ದೇಶನಕ್ಕೆ ಹೊಸಬರು. ಅವರು ಯಾವ ರೀತಿಯಲ್ಲಿ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಮೂಡಿದೆ. ಅಂದಹಾಗೆ ಇದು ಪ್ಯಾನ್ ಇಂಡಿಯಾ ಸಿನಿಮಾ ಎಂದು ತಂಡ ಹೇಳಿಕೊಂಡಿದೆ. ಸದ್ಯ ಚಿತ್ರಾಲಯಂ ಸ್ಟುಡಿಯೋದವರು ‘ವಿಶ್ವಂ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಗೋಪಿ ಚಂದ್ ಅವರು ಈ ಚಿತ್ರಕ್ಕೆ ಹೀರೋ. ವ್ಯತ್ಲಾ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ