Pushpa 2 Movie: ರಿಲೀಸ್ ಆಗಲಿದೆ ‘ಪುಷ್ಪ 2’ ಹೊಸ ಟೀಸರ್? ಸಿಕ್ಕಿದೆ ದೊಡ್ಡ ಅಪ್ಡೇಟ್
ಏಪ್ರಿಲ್ 8ರಂದು ಅಲ್ಲು ಅರ್ಜುನ್ ಅವರು ಬರ್ತ್ಡೇ ಆಚರಿಸಿಕೊಂಡರು. ಆ ಪ್ರಯುಕ್ತ ಬೆಳಿಗ್ಗೆ ‘ಪುಷ್ಪ 2’ ಟೀಸರ್ ರಿಲೀಸ್ ಮಾಡಲಾಗಿತ್ತು. ಈ ಟೀಸರ್ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಟೀಸರ್ ಅಂದುಕೊಂಡಮಟ್ಟದಲ್ಲಿ ಮೂಡಿ ಬಂದಿಲ್ಲ ಎಂದು ಕೆಲವರು ತಕರಾರರು ತೆಗೆದಿದ್ದರು.

‘ಪುಷ್ಪ 2’ ಸಿನಿಮಾ (Pushpa 2 Movie) ಬಗ್ಗೆ ಅಭಿಮಾನಿಗಳಿಗೆ ಇರೋ ನಿರೀಕ್ಷೆ ಸಖತ್ ದೊಡ್ಡದು. ಅಲ್ಲು ಅರ್ಜುನ್ ಬರ್ತ್ಡೇ ಪ್ರಯುಕ್ತ ಇತ್ತೀಚೆಗೆ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿತ್ತು. ಇದು ಅನೇಕರಿಗೆ ಇಷ್ಟ ಆಗಿತ್ತು. ಸಿನಿಮಾ ಟೀಸರ್ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿತ್ತು. ಆದರೆ, ಕೆಲವರು ಟಿಸರ್ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಈ ಮೊದಲು ರಿಲೀಸ್ ಮಾಡಿದ ಪೋಸ್ಟರ್ನ ಮುಂದುವರಿದ ಭಾಗದ ರೀತಿಯಲ್ಲಿ ಟೀಸರ್ ತೋರಿಸಲಾಗಿದೆ ಎಂದು ಅನೇಕರು ಪುಕಾರು ತೆಗೆದಿದ್ದರು. ಅಲ್ಲು ಅರ್ಜುನ್ ಮಾತ್ರ ಹೈಲೈಟ್ ಆಗಿದ್ದು ಅನೇಕರಿಗೆ ಬೇಸರ ಮೂಡಿಸಿತ್ತು. ವಿಶೇಷ ಎಂದರೆ ಈಗ ಸುಕುಮಾರ್ ಅವರು ಹೊಸ ಟೀಸರ್ ರೆಡಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಅಲ್ಲು ಅರ್ಜುನ್ ಅವರು ಏಪ್ರಿಲ್ 8ರಂದು ಬರ್ತ್ಡೇ ಆಚರಿಸಿಕೊಂಡರು. ಆ ಪ್ರಯುಕ್ತ ಬೆಳಿಗ್ಗೆ ‘ಪುಷ್ಪ 2’ ಟೀಸರ್ ರಿಲೀಸ್ ಮಾಡಲಾಯಿತು. ಈ ಟೀಸರ್ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಟೀಸರ್ ಅಂದುಕೊಂಡಮಟ್ಟದಲ್ಲಿ ಮೂಡಿ ಬಂದಿಲ್ಲ ಎಂದು ಕೆಲವರು ತಕರಾರರು ತೆಗೆದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಇದು ಸುಕುಮಾರ್ ಗಮನಕ್ಕೂ ಬಂದಿದೆ.
ಅಭಿಮಾನಿಗಳ ಕೋರಿಕೆಗೆ ಸುಕುಮಾರ್ ಅವರು ಬೆಲೆ ಕೊಡುತ್ತಾರೆ. ಹೀಗಾಗಿ ಅವರು ಶೀಘ್ರವೇ ಒಂದೊಳ್ಳೆಯ ದಿನ ನೋಡಿ ‘ಪುಷ್ಪ 2’ ಚಿತ್ರದ ಹೊಸ ಟೀಸರ್ ರಿಲೀಸ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಮೇ ಅಂತ್ಯಕ್ಕೆ ಸಿನಿಮಾ ಶೂಟಿಂಗ್ ಪೂರ್ಣಗೊಳ್ಳಲಿದೆ. ಆ ಬಳಿಕ ಪೋಸ್ಟ್ ಪ್ರೊಡಕ್ಷನ್ ಜೊತೆ ಸಿನಿಮಾದ ಪ್ರಮೋಷನ್ ಕಾರ್ಯ ಕೂಡ ಆರಂಭಿಸಲು ತಂಡ ಪ್ಲ್ಯಾನ್ ಮಾಡಿದೆ.
ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅವರು ಚಿತ್ರಕ್ಕೆ ದೊಡ್ಡ ಓಪನಿಂಗ್ ನಿರೀಕ್ಷಿಸಿದ್ದಾರೆ. ಆಗಸ್ಟ್ 15ರಂದು ಸರ್ಕಾರಿ ರಜೆ ಇರುತ್ತದೆ. ಅಂದು ಸಿನಿಮಾ ರಿಲೀಸ್ ಆದರೆ ದೊಡ್ಡ ಮಟ್ಟದಲ್ಲಿ ಸಹಕಾರಿ ಆಗಲಿದೆ ಎಂಬುದು ಸಿನಿಮಾ ನಿಮ್ರಾತೃರ ಆಲೋಚನೆ.
‘ಪುಷ್ಪ 2’ ಚಿತ್ರಕ್ಕೆ ಸುಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅಲ್ಲದೆ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ಮೊದಲಾದವರು ನಟಿಸಿದ್ದಾರೆ. ದೇವಿಶ್ರೀ ಪ್ರಸಾದ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಪುಷ್ಪ’ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿ ಗಮನ ಸೆಳೆದಿದ್ದವು. ಹೀಗಾಗಿ, ‘ಪುಷ್ಪ 2’ ಹಾಡುಗಳ ಬಗ್ಗೆಯೂ ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: ರಿಲೀಸ್ಗೂ ಮೊದಲೇ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ‘ಪುಷ್ಪ 2’; ಸಾಧ್ಯವಾಗಿದ್ದು ಹೇಗೆ?
ಸಾವಿರ ಕೋಟಿ ಬಿಸ್ನೆಸ್?
‘ಪುಷ್ಪ 2’ ಸಿನಿಮಾ ರಿಲೀಸ್ಗೂ ಮೊದಲೇ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಎಂದು ವರದಿ ಆಗಿದೆ. ಈ ಚಿತ್ರದ ಒಟಿಟಿ ಹಕ್ಕು, ಟಿವಿ ಹಕ್ಕು ಹಾಗೂ ಥಿಯೇಟ್ರಿಕಲ್ ಹಕ್ಕುಗಳು ಮಾರಾಟ ಆಗಿವೆ. ಉತ್ತರ ಭಾರತದಲ್ಲೂ ಈ ಚಿತ್ರಕ್ಕೆ ಬೇಡಿಕೆ ಸೃಷ್ಟಿ ಆಗಿದೆ. ಹೀಗಾಗಿ, ಸಿನಿಮಾ ರಿಲೀಸ್ಗೂ ಮೊದಲೇ ಈ ಚಿತ್ರ ಲಾಭ ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:17 am, Thu, 18 April 24



