‘ಫ್ಯಾಮಿಲಿ ಮ್ಯಾನ್ 3’ ಬಗ್ಗೆ ಸಿಕ್ಕಿದೆ ದೊಡ್ಡ ಅಪ್ಡೇಟ್; ಇಲ್ಲಿದೆ ವಿವರ
‘ದಿ ಫ್ಯಾಮಿಲಿ ಮ್ಯಾನ್ 3’ ಸರಣಿಗೆ ಶೂಟಿಂಗ್ ಶುರುವಾಗಿದೆ. ‘ದಿ ಫ್ಯಾಮಿ ಮ್ಯಾನ್ 2’ ಸರಣಿಯ ಕೊನೆಯಲ್ಲಿ ಮೂರನೇ ಸರಣಿ ಬರಲಿದೆ ಎನ್ನುವ ಸೂಚನೆಯನ್ನು ಕೊಡಲಾಗಿತ್ತು. ಈ ಬಾರಿ ವೈರಸ್ ಕುರಿತು ತೋರಿಸಲಾಗುತ್ತಿದೆ ಎಂಬ ಬಗ್ಗೆ ಹೇಳಲಾಗಿತ್ತು. ಅದೇ ರೀತಿಯಲ್ಲಿ ಸಿನಿಮಾ ಇರಲಿದೆ.
ಮನೋಜ್ ಬಾಜ್ಪಾಯಿ, ಪ್ರಿಯಾಮಣಿ (Priyamani) ಮೊದಲಾದವರು ನಟಿಸಿರೋ ‘ದಿ ಫ್ಯಾಮಿಲಿ ಮ್ಯಾನ್’ ಸರಣಿ ಪ್ರೇಕ್ಷಕರಿಗೆ ಸಖತ್ ಇಷ್ಟ. ಈಗಾಗಲೇ ಇದು ಎರಡು ಸೀಸನ್ ಪೂರ್ಣಗೊಳಿಸಿದೆ. ಮೂರನೇ ಸೀಸನ್ಗೆ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಯಾವ ಕಥೆಯ ಜೊತೆ ರಾಜ್ ಹಾಗೂ ಡಿಕೆ ಬರುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಿಗೆ ಇತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಮನೋಜ್ ಬಾಜ್ಪಾಯಿ ಅವರು ಈ ಸರಣಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಥೆ ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ವಿವರಿಸಿದ್ದಾರೆ.
‘ದಿ ಫ್ಯಾಮಿಲಿ ಮ್ಯಾನ್ 3’ ಸೀಸನ್ಗೆ ಈಗಾಗಲೇ ಶೂಟಿಂಗ್ ಶುರುವಾಗಿದೆ. ‘ದಿ ಫ್ಯಾಮಿ ಮ್ಯಾನ್ 2’ ಸರಣಿಯ ಕೊನೆಯಲ್ಲಿ ಮೂರನೇ ಸರಣಿ ಬರಲಿದೆ ಎನ್ನುವ ಸೂಚನೆಯನ್ನು ಕೊಡಲಾಗಿತ್ತು. ಈ ಬಾರಿ ವೈರಸ್ ಕುರಿತು ತೋರಿಸಲಾಗುತ್ತಿದೆ ಎಂಬ ಬಗ್ಗೆ ಹೇಳಲಾಗಿತ್ತು. ಅದಕ್ಕೆ ಪೂರಕವಾಗಿ ಮನೋಜ್ ಬಾಜ್ಪಾಯಿ ಅವರು ಮಾತನಾಡಿದ್ದಾರೆ.
‘ಮೂರನೇ ಸರಣಿಯ ಶೂಟಿಂಗ್ ಈಶಾನ್ಯ ರಾಜ್ಯಗಳಲ್ಲಿ ನಡೆಯಲಿದೆ. ಎಲ್ಲಿ ಕಥೆ ಮುಗಿದಿತ್ತೋ ಅಲ್ಲಿಂದಲೇ ಕಥೆ ಮುಂದುವರಿಯಲಿದೆ. ಈ ಹಿಂದಿನ ಸರಣಿಗಳಿಗಿಂತ ಈಗಿನ ಸೀಸನ್ ಇನ್ನೂ ಉತ್ತಮವಾಗಿ, ಸುಂದರವಾಗಿ ಹಾಗೂ ಭಯಾನಕವಾಗಿ ಮೂಡಿ ಬರಲಿದೆ’ ಎಂದಿದ್ದಾರೆ ಮನೋಜ್. ಈ ಮೊದಲು ಬಂದ ಸರಣಿಗಳಲ್ಲಿ ಅವರು ಹೇಳಿದ್ದ ಡೈಲಾಗ್ಗಳು ಮೀಮ್ಗಳಲ್ಲಿ ಹೆಚ್ಚು ಬಳಕೆ ಆಗಿತ್ತು. ಈ ಬಾರಿಯೂ ಅದೇ ರೀತಿಯ ಡೈಲಾಗ್ಗಳು ಇರಲಿವೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಇದಕ್ಕೆ ಅವರು ಹೌದು ಎನ್ನುವ ಉತ್ತರ ನೀಡಿದ್ದಾರೆ.
‘ಹೊಸ ಪರಿಸ್ಥಿತಿಗಳನ್ನು ಶ್ರೀಕಾಂತ್ ತಿವಾರಿ ಎದುರಿಸುತ್ತಾನೆ. ಮಕ್ಕಳು ದೊಡ್ಡವರಾಗಿದ್ದಾರೆ. ಅವನ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಎದುರಾಗುವ ಸವಾಲಗಳು ಹೆಚ್ಚುತ್ತವೆ’ ಎಂದಿದ್ದಾರೆ ಮನೋಜ್. ಇದರಿಂದ ಈ ಸರಣಿ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಮೂಡಿದೆ. ಈ ಸೀಸನ್ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ.
ಇದನ್ನೂ ಓದಿ: ‘ಫ್ಯಾಮಿಲಿ ಮ್ಯಾನ್ 3’ ಸರಣಿಗಾಗಿ ಕಾದು ಕುಳಿತವರಿಗೆ ಬ್ಯಾಡ್ ನ್ಯೂಸ್ ನೀಡಿದ ಮನೋಜ್ ಬಾಜ್ಪಾಯಿ
ರಾಜ್ ಹಾಗೂ ಡಿಕೆ ‘ದಿ ಫ್ಯಾಮಿಲಿ ಮ್ಯಾನ್ 2’ ಬಳಿಕ ‘ಫರ್ಜಿ’ ಸರಣಿ ಮಾಡಿದರು. ‘ಸಿಟಾಡೆಲ್: ಹನಿ ಬನಿ’ ಸರಣಿಯ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ಇದು ಹಾಲಿವುಡ್ ಸಿಟಾಡೆಲ್ನ ಇಂಡಿಯನ್ ವರ್ಷನ್ ಆಗಿದೆ. ಭಾರತದ ವರ್ಷನ್ನಲ್ಲಿ ಸಮಂತಾ ಹಾಗೂ ವರುಣ್ ಧವನ್ ನಟಿಸಿದ್ದಾರೆ. ಈಗ ಅವರು ‘ದಿ ಫ್ಯಾಮಿಲಿ ಮ್ಯಾನ್ 3’ ಸೀರಿಸ್ನಲ್ಲಿ ಬ್ಯುಸಿ ಆಗಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ