‘ಫ್ಯಾಮಿಲಿ ಮ್ಯಾನ್ 3’ ಸರಣಿಗಾಗಿ ಕಾದು ಕುಳಿತವರಿಗೆ ಬ್ಯಾಡ್ ನ್ಯೂಸ್ ನೀಡಿದ ಮನೋಜ್ ಬಾಜ್​ಪಾಯಿ

The Family Man 3: ‘ದಿ ಫ್ಯಾಮಿಲಿ ಮ್ಯಾನ್ 3’ ಸರಣಿಗಾಗಿ ಫ್ಯಾನ್ಸ್ ಕಾದು ಕೂತಿದ್ದಾರೆ. ಆದರೆ, ಇವರೆಲ್ಲರಿಗೂ ಮನೋಜ್ ಬಾಜ್​ಪಾಯಿ ಬ್ಯಾಡ್​ನ್ಯೂಸ್ ನೀಡಿದ್ದಾರೆ.

‘ಫ್ಯಾಮಿಲಿ ಮ್ಯಾನ್ 3’ ಸರಣಿಗಾಗಿ ಕಾದು ಕುಳಿತವರಿಗೆ ಬ್ಯಾಡ್ ನ್ಯೂಸ್ ನೀಡಿದ ಮನೋಜ್ ಬಾಜ್​ಪಾಯಿ
ಮನೋಜ್ ಬಾಜ್​ಪಾಯಿ
Follow us
|

Updated on:May 05, 2023 | 3:20 PM

‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರಿಸ್​ನಲ್ಲಿ (The Family Man) ಈಗಾಗಲೇ ಎರಡು ಸೀಸನ್​ಗಳು ಪ್ರಸಾರ ಕಂಡಿವೆ. ಪಕ್ಕಾ ಫ್ಯಾಮಿಲಿಮ್ಯಾನ್ ಆಗಿ ಮನೋಜ್ ಬಾಜ್​ಪಾಯಿ ಅವರು ಗಮನ ಸೆಳೆದಿದ್ದಾರೆ. ಅವರು ನಿರ್ವಹಿಸಿರುವ ಶ್ರೀಕಾಂತ್ ತಿವಾರಿ ಪಾತ್ರ ಎಲ್ಲರ ಗಮನ ಸೆಳೆದಿದೆ. ಈಗ ‘ದಿ ಫ್ಯಾಮಿಲಿ ಮ್ಯಾನ್ 3’ ಸರಣಿಗಾಗಿ ಫ್ಯಾನ್ಸ್ ಕಾದು ಕೂತಿದ್ದಾರೆ. ಆದರೆ, ಇವರೆಲ್ಲರಿಗೂ ಮನೋಜ್ ಬಾಜ್​ಪಾಯಿ (Manoj Bajpayee) ಬ್ಯಾಡ್​ನ್ಯೂಸ್ ನೀಡಿದ್ದಾರೆ. ಅವರು ಹೇಳಿದ ವಿಚಾರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

2021ರಲ್ಲಿ ‘ದಿ ಫ್ಯಾಮಿಲಿ ಮ್ಯಾನ್ 2’ ರಿಲೀಸ್ ಆಯಿತು. ಮೊದಲ ಸೀಸನ್​ನಲ್ಲಿ ಪಾಕ್​ ಟೆರರಿಸ್ಟ್​ಗಳ ಕಥೆ ಹೇಳಿದ್ದ ನಿರ್ದೇಶಕರಾದ ರಾಜ್​ ಹಾಗೂ ಡಿಕೆ ಎರಡನೇ ಸೀಸನ್​ನಲ್ಲಿ ಶ್ರೀಲಂಕಾ ರೆಬೆಲ್ಸ್​ಗಳ ಕಥೆ ಹೇಳಿದ್ದರು. ‘ದಿ ಫ್ಯಾಮಿಲಿ ಮ್ಯಾನ್ 3’ ವೆಬ್ ಸೀರಿಸ್ ವೈರಸ್ ಬಗ್ಗೆ ಇರಲಿದೆ. ಎರಡನೇ ಸರಣಿಯ ಕೊನೆಯಲ್ಲಿ ಈ ವಿಚಾರ ರಿವೀಲ್ ಆಗಿತ್ತು. ಇಡೀ ವಿಶ್ವವನ್ನೇ ಕಾಡಿದ ಕೊರೊನಾ ವೈರಸ್ ವಿಚಾರ ಇಟ್ಟುಕೊಂಡು ಮೂರನೇ ಪಾರ್ಟ್ ಮಾಡಲಾಗುತ್ತಿದೆಯೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಬೇಸರದ ಸಂಗತಿ ಎಂದರೆ ‘ದಿ ಫ್ಯಾಮಿಲಿ ಮ್ಯಾನ್ 3’ ಸೀರಿಸ್​ಗೆ ಇನ್ನೂ ಶೂಟಿಂಗ್ ಆರಂಭ ಆಗಿಲ್ಲ!

ರಾಜ್ ಹಾಗೂ ಡಿಕೆ ‘ದಿ ಫ್ಯಾಮಿಲಿ ಮ್ಯಾನ್ 3’ ಸರಣಿಯನ್ನು ನಿರ್ದೇಶಿಸಲಿದ್ದಾರೆ. ವೆಬ್ ಸೀರಿಸ್​ಗಳನ್ನು ನಿರ್ದೇಶಿಸುವಲ್ಲಿ ಇವರದ್ದು ಎತ್ತಿದೆ ಕೈ. ‘ದಿ ಫ್ಯಾಮಿಲಿ ಮ್ಯಾನ್ 2’ ಬಳಿಕ ಅವರು ‘ಫರ್ಜಿ’ ಸರಣಿಯಲ್ಲಿ ಬ್ಯುಸಿ ಆದರು. ಇಂಗ್ಲಿಷ್ ‘ಸಿಟಾಡೆಲ್’ನ ಇಂಡಿಯನ್ ವರ್ಷನ್​ಗೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಪೂರ್ಣಗೊಂಡ ಬಳಿಕವೇ ರಾಜ್ ಮತ್ತು ಡಿಕೆ ‘ದಿ ಫ್ಯಾಮಿಲಿ ಮ್ಯಾನ್ 3’ ಮಾಡಲಿದ್ದಾರೆ.

ಇದನ್ನೂ ಓದಿ: ಯಾವಾಗ ರಿಲೀಸ್​ ಆಗಲಿದೆ ‘ದಿ ಫ್ಯಾಮಿಲಿ ಮ್ಯಾನ್​ 3’? ಕಾದು ಕಾದು ಸುಸ್ತಾದ ಪ್ರೇಕ್ಷಕ

‘ದಿ ಫ್ಯಾಮಿಲಿ ಮ್ಯಾನ್ ಹೊಸ ಸರಣಿಗೆ ಈ ವರ್ಷದ ಅಂತ್ಯದ ವೇಳೆಗೆ ನಾವು ಶೂಟಿಂಗ್ ಪ್ರಾರಂಭಿಸುತ್ತಿದ್ದೇವೆ. ಅದು ಸಿದ್ಧಗೊಳ್ಳೋಕೆ ಎಂಟು ತಿಂಗಳು ಬೇಕು. ಮತ್ತೊಮ್ಮೆ ಶ್ರೀಕಾಂತ್ ತಿವಾರಿ ಪಾತ್ರ ಮಾಡಲು ನಾನು ಉತ್ಸುಕನಾಗಿದ್ದೇನೆ’ ಎಂದು ಮನೋಜ್ ಬಾಜ್​ಪಾಯಿ ಇಂಡಿಯನ್ ಎಕ್ಸ್​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಮೂಲಕ ‘ದಿ ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಆಗೋದು 2024ರ ಕೊನೆಯಲ್ಲಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:26 am, Fri, 5 May 23

Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?