ಜೂನಿಯರ್ ಎನ್ಟಿಆರ್ (JR NTR) ಅವರಿಗೆ ಇಂದು (ಮೇ 20) ಬರ್ತ್ಡೇ. ಈ ವಿಶೇಷ ದಿನದಂದು ಸೆಲೆಬ್ರಿಟಿಗಳು, ಕುಟುಂಬದವರು, ಅಭಿಮಾನಿಗಳು ನಟನಿಗೆ ಶುಭಾಶಯ ಬರುತ್ತಿದೆ. ಜೂನಿಯರ್ ಎನ್ಟಿಆರ್ ಹೆಸರಲ್ಲಿ ಅನೇಕ ಸಾಮಾಜಿಕ ಕೆಲಸಗಳು ನಡೆಯುತ್ತಿವೆ. ರಕ್ತದಾನ, ಅನ್ನದಾನ ಕೂಡ ಆಯೋಜನೆ ಮಾಡಲಾಗಿದೆ. ಅವರ ಬರ್ತ್ಡೇ ದಿನ ‘ದೇವರ’ ಸಿನಿಮಾದ ಸಾಂಗ್ ಕೂಡ ರಿಲೀಸ್ ಆಗಿದೆ. ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ. ಪುನೀತ್ಗಾಗಿ ಅವರು ಒಂದು ಕನ್ನಡ ಹಾಡು ಕೂಡ ಹಾಡಿದ್ದರು.
ಜೂನಿಯರ್ ಎನ್ಟಿಆರ್ ಅವರು ಬಾಲ ಕಲಾವಿದನಾಗಿ ಮಿಂಚಿದರು. 2001ರಲ್ಲಿ ರಿಲೀಸ್ ಆದ ‘ನಿನ್ನು ಚೂಡಾಲನಿ’ ಸಿನಿಮಾ ತೆರೆಗೆ ಬಂದು ಯಶಸ್ಸು ಕಂಡಿತು. ಹೀರೋ ಆಗಿ ಅವರು ನಟಿಸಿದ ಇದು ಮೊದಲ ಸಿನಿಮಾ. ಅದೇ ವರ್ಷ ರಿಲೀಸ್ ಆದ ‘ಸ್ಟೂಡೆಂಟ್ ನಂಬರ್ 1’ ಚಿತ್ರ ದೊಡ್ಡ ಯಶಸ್ಸು ಕಂಡಿತು. ಇದನ್ನು ಸೆಲ್ವ ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರದಿಂದ ಜೂನಿಯರ್ ಎನ್ಟಿಆರ್ ಅವರು ಟಾಲಿವುಡ್ನಲ್ಲಿ ಭದ್ರ ನೆಲೆ ಕಂಡುಕೊಂಡರು. ‘ಸಿಂಹಾದ್ರಿ’, ‘ಟೆಂಪರ್’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 2022ರಲ್ಲಿ ರಿಲೀಸ್ ಆದ ‘ಆರ್ಆರ್ಆರ್’ ಸಿನಿಮಾ ಕೂಡ ಯಶಸ್ಸು ಕಂಡಿತು. ‘ನಾಟು ನಾಟು..’ ಹಾಡು ಮಾಡಿದ ಮೋಡಿ ತುಂಬಾನೇ ದೊಡ್ಡದು.
ಜೂನಿಯರ್ ಎನ್ಟಿಆರ್ ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ. ಜೂನಿಯರ್ ಎನ್ಟಿಆರ್ ತಾಯಿ ಕುಂದಾಪುರದವರು. ಹೀಗಾಗಿ, ಅವರಿಗೆ ಕನ್ನಡದ ನಂಟಿದೆ. ‘ಆರ್ಆರ್ಆರ್’ ಚಿತ್ರದ ಕನಡ ವರ್ಷನ್ಗೆ ಅವರೇ ಡಬ್ ಮಾಡಿದ್ದರು ಅನ್ನೋದು ವಿಶೇಷ. ಅವರ ಕನ್ನಡ ಪ್ರೀತಿ ಇಲ್ಲಿಗೆ ಮುಗಿದಿಲ್ಲ. ತೆಲುಗು ರಿಯಾಲಿಟಿ ಶೋ ಬಿಗ್ ಬಾಸ್ನ ಜೂನಿಯರ್ ಎನ್ಟಿಆರ್ ಒಮ್ಮೆ ನಡೆಸಿಕೊಟ್ಟಿದ್ದರು. ಅಲ್ಲಿಗೆ ಕನ್ನಡ ಸ್ಪರ್ಧಿಗಳ ಆಗಮನ ಆಗಿತ್ತು. ಈ ವೇಳೆ ಅವರು ಕನ್ನಡದಲ್ಲೇ ಸಂವಹನ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ಸ್ಪರ್ಧಿಗಳಿಬ್ಬರು ಕನ್ನಡದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಕನ್ನಡದಲ್ಲೇ ಮಾತನಾಡಿದ್ದ ಜೂನಿಯರ್ ಎನ್ಟಿಆರ್, ‘ನೀವು ಕನ್ನಡದಲ್ಲಿ ಚೆನ್ನಾಗಿ ಮಾತಾಡ್ತಾ ಇದ್ರಿ. ನಿಮ್ಮಲ್ಲಿ ಕನ್ನಡದವರು ಯಾರು’ ಎಂದು ಪ್ರಶ್ನೆ ಮಾಡಿದರು ಜೂನಿಯರ್ ಎನ್ಟಿಆರ್. ‘ನಾವಿಬ್ಬರೂ ಕನ್ನಡವರೇ’ ಎಂದರು ಸ್ಪರ್ಧಿಗಳು. ‘ನನ್ನ ಅಮ್ಮ ಕೂಡ ಕನ್ನಡವರು, ಕುಂದಾಪುರದವರು’ ಎಂದು ಕನ್ನಡದಲ್ಲೇ ಜೂನಿಯರ್ ಎನ್ಟಿಆರ್ ಸಂವಹನ ಮಾಡಿದರು.‘
ಇದನ್ನೂ ಓದಿ: 450 ಕೋಟಿ ರೂಪಾಯಿ ಒಡೆಯ ಜೂನಿಯರ್ ಎನ್ಟಿಆರ್; ಆಸ್ತಿ ಬಗ್ಗೆ ಇಲ್ಲಿದೆ ವಿವರ
ಜೂನಿಯರ್ ಎನ್ಟಿಆರ್ ಅವರಿಗೆ ಪುನೀತ್ ರಾಜ್ಕುಮಾರ್ ಜೊತೆ ಒಳ್ಳೆಯ ಗೆಳೆತನ ಇತ್ತು. ಪುನೀತ್ ನಟನೆಯ ‘ಚಕ್ರವ್ಯೂಹ’ ಸಿನಿಮಾದ ‘ಗೆಳೆಯಾ.. ಗೆಳೆಯಾ..’ ಹಾಡನ್ನು ಜೂನಿಯರ್ ಎನ್ಟಿಆರ್ ಅವರು ಹಾಡಿದ್ದರು. ಅವರು ಕರ್ನಾಟಕಕ್ಕೆ ಸಿನಿಮಾ ಪ್ರಮೋಷನ್ಗೆ ಬಂದ ಸಂದರ್ಭದಲ್ಲೂ ಸ್ವಚ್ಛ ಕನ್ನಡದಲ್ಲೇ ಮಾತನಾಡುತ್ತಾರೆ ಅನ್ನೋದು ವಿಶೇಷ. ಈ ಮೂಲಕ ಅವರು ಕನ್ನಡ ಪ್ರೇಮ ಹೊರಹಾಕುತ್ತಾ ಇರುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.