450 ಕೋಟಿ ರೂಪಾಯಿ ಒಡೆಯ ಜೂನಿಯರ್ ಎನ್ಟಿಆರ್; ಆಸ್ತಿ ಬಗ್ಗೆ ಇಲ್ಲಿದೆ ವಿವರ
Jr NTR Birthday: ಜೂನಿಯರ್ ಎನ್ಟಿಆರ್ ಅವರ ಆಸ್ತಿ 450 ಕೋಟಿ ರೂಪಾಯಿ ಇದೆ. ನಟನೆ, ಬ್ರ್ಯಾಂಡ್ ಪ್ರಚಾರಗಳ ಮೂಲಕ ಅವರಿಗೆ ಹಣ ಬರುತ್ತಿದೆ. ಪ್ರತಿ ಚಿತ್ರಕ್ಕೆ ಅವರು 50-60 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ವಿಶೇಷ ಎಂದರೆ, ‘ವಾರ್ 2’ ಚಿತ್ರಕ್ಕೆ ಅವರು 100 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.
ಜೂನಿಯರ್ ಎನ್ಟಿಆರ್ ಅವರ ನಟನೆಯ ‘ಆರ್ಆರ್ಆರ್’ ಸಿನಿಮಾ (RRR Movie) ಸೂಪರ್ ಹಿಟ್ ಆದ ಬಳಿಕ ಅವರು ಒಂದು ವರ್ಷ ಬ್ರೇಕ್ ಪಡೆದರು. ಹಲವು ಅವಾರ್ಡ್ ಕಾರ್ಯಕ್ರಮಗಳಲ್ಲಿ ಇವರು ಭಾಗಿ ಆದರು. ಈ ಚಿತ್ರದ ಹಾಡು ಆಸ್ಕರ್ ಕೂಡ ಪಡೆಯಿತು. ಈಗ ಕೊರಟಾಲ ಶಿವ ನಿರ್ದೇಶನದ ‘ದೇವರ’ ಹಾಗೂ ಹಿಂದಿಯ ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಮೇ 20 ಅವರ ಜನ್ಮದಿನ. ಈ ವಿಶೇಷ ದಿನದಂದು ‘ದೇವರ’, ‘ವಾರ್ 2’ ಸಿನಿಮಾಗಳಿಂದ ಅಭಿಮಾನಿಗಳಿಗೆ ಗಿಫ್ಟ್ ಸಿಗೋ ಸಾಧ್ಯತೆ ಇದೆ. ಅಷ್ಟೇ ಅಲ್ಲ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾದ ಟೈಟಲ್ ಘೋಷಣೆ ಆಗೋ ಸಾಧ್ಯತೆ ಇದೆ. ಜೂನಿಯರ್ ಎನ್ಟಿಆರ್ ಅವರು ಸಾಕಷ್ಟು ಆಸ್ತಿ ಮಾಡಿದ್ದಾರೆ. ಬರ್ತ್ಡೇ ಸಂದರ್ಭದಲ್ಲಿ ಆ ಬಗ್ಗೆ ಇಲ್ಲಿದೆ ವಿವರ.
ಜೂನಿಯರ್ ಎನ್ಟಿಆರ್ ಅವರು ನಟ ಹಾಗೂ ಆಂಧ್ರದ ಮಾಜಿ ಸಿಎಂ ನಂದಮೂರಿ ತಾರಕ ರಾಮ ರಾವ್ ಅವರ ಮೊಮ್ಮಗ. ಜೂನಿಯರ್ ಎನ್ಟಿಆರ್ ಅವರು ‘ಬ್ರಹ್ಮರ್ಷಿ ವಿಶ್ವಾಮಿತ್ರ’ ಹಾಗೂ ‘ರಾಮಾಯಣಂ’ ಸಿನಿಮಾಗಳಲ್ಲಿ ಬಾಲ ನಟನಾಗಿ ನಟಿಸಿದ್ದಾರೆ. ‘ರಾಮಾಯಣಂ’ ಸಿನಿಮಾ ‘ಅತ್ಯುತ್ತಮ ಮಕ್ಕಳ ಸಿನಿಮಾ’ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆಯಿತು. ಜೂನಿಯರ್ ಎನ್ಟಿಆರ್ ಅವರು 2001ರಲ್ಲಿ ರಿಲೀಸ್ ಆದ ‘ನಿನ್ನು ಚೂಡಲಾನಿ’ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟರು. ‘ಸಿಂಹಾದ್ರಿ’, ‘ಆರ್ಆರ್ಆರ್’, ‘ಅರವಿದ ಸಮೇದ ವೀರ ರಾಘವ’ ಸೇರಿ ಹಲವು ಸಿನಿಮಾಗಳ ಮೂಲಕ ಅವರು ಮೆಚ್ಚುಗೆ ಪಡೆದಿದ್ದಾರೆ.
ಜೂನಿಯರ್ ಎನ್ಟಿಆರ್ ಅವರ ಆಸ್ತಿ 450 ಕೋಟಿ ರೂಪಾಯಿ ಇದೆ. ನಟನೆ, ಬ್ರ್ಯಾಂಡ್ ಪ್ರಚಾರಗಳ ಮೂಲಕ ಅವರಿಗೆ ಹಣ ಬರುತ್ತಿದೆ. ಪ್ರತಿ ಚಿತ್ರಕ್ಕೆ ಅವರು 50-60 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ವಿಶೇಷ ಎಂದರೆ, ‘ವಾರ್ 2’ ಚಿತ್ರಕ್ಕೆ ಅವರು 100 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.
ಹೈದರಾಬಾದ್ನ ಜುಬ್ಲಿ ಹಿಲ್ಸ್ನಲ್ಲಿ ಲಕ್ಷುರಿ ಬಂಗಲೆಯನ್ನು ಹೊಂದಿದ್ದಾರೆ ಜೂನಿಯರ್ ಎನ್ಟಿಆರ್. ಹೈದರಾಬಾದ್ ಸಮೀಪ ಫಾರ್ಮ್ಹೌಸ್, ಬೆಂಗಳೂರು ಹಾಗೂ ಮುಂಬೈನಲ್ಲಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಜೂನಿಯರ್ ಎನ್ಟಿಆರ್ ಬಳಿ 80 ಕೋಟಿ ರೂಪಾಯಿಯ ಪ್ರೈವೆಟ್ ಜೆಟ್ ಇದೆ. ಅವರ ಬಳಿ ಇರೋ ಮ್ಯಾನ್ಷನ್ ಬೆಲೆ 25 ಕೋಟಿ ರೂಪಾಯಿ.
ಇದನ್ನೂ ಓದಿ: ಜೂನಿಯರ್ ಎನ್ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕೆ ಸಿಕ್ತು ಪವರ್ಫುಲ್ ಟೈಟಲ್
ಜೂನಿಯರ್ ಎನ್ಟಿಆರ್ ಬಳಿ ದುಬಾರಿ ವಾಚ್ಗಳಿವೆ. ಅವರ ಬಳಿ ಸುಮಾರು 10 ಕೋಟಿ ರೂಪಾಯಿ ಬೆಲೆ ಬಾಳೋ ವಾಚ್ ಕಲೆಕ್ಷನ್ ಇದೆ ಎನ್ನಲಾಗಿದೆ. ಕಾರ್ಗಳ ಬಗ್ಗೆ ಅವರಿಗೆ ವಿಶೇಷ ಕ್ರೇಜ್ ಇದೆ. 5 ಕೋಟಿ ರೂಪಾಯಿ ಬೆಲೆಯ ಲ್ಯಾಂಬೋರ್ಗಿನಿ ಉರುಸ್, 2 ಕೋಟಿ ರೂಪಾಯಿ ಬೆಲೆಯ ರೇಂಜ್ ರೋವರ್, 2 ಕೋಟಿಯ ಬಿಎಂಡಬ್ಲ್ಯೂ, 1 ಕೋಟಿ ರೂಪಾಯಿ ಬೆಲೆಯ ಪೋರ್ಷಾ, 1 ಕೋಟಿ ರೂಪಾಯಿ ಬೆಲೆಯ ಪೋರ್ಷಾ ಕಾರನ್ನು ಹೊಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.