AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಂಜ್ಞುಮೆಲ್ ಬಾಯ್ಸ್’ ನಿರ್ಮಾಪಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ತಡೆ

‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ನಿರ್ಮಾಪಕರು ವಿವಾದಕ್ಕೆ ಸಿಲುಕಿದ್ದಾರೆ. ಸಿನಿಮಾದ ಮೂವರು ನಿರ್ಮಾಪಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ಪ್ರಕರಣ ಕೇರಳ ಹೈಕೋರ್ಟ್​ನಲ್ಲಿದೆ.

‘ಮಂಜ್ಞುಮೆಲ್ ಬಾಯ್ಸ್’ ನಿರ್ಮಾಪಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ತಡೆ
‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಪಕರಿಂದ ಮೋಸ; ಬಂತು ಜಾರಿ ನಿರ್ದೇಶನಾಲಯದ ನೋಟಿಸ್
ಮಂಜುನಾಥ ಸಿ.
|

Updated on:May 18, 2024 | 10:03 PM

Share

ಫೆಬ್ರವರಿಯಲ್ಲಿ ಬಿಡುಗಡೆ ಆದ ಮಲಯಾಳಂ ಸಿನಿಮಾ ‘ಮಂಜ್ಞುಮೆಲ್ ಬಾಯ್ಸ್’  (manjummel boys) ಈಗಲೂ ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ವಿಮರ್ಶಕರು ಹಾಗೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಅತ್ಯಂತ ಕಡಿಮೆ ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ ಈಗಾಗಲೇ ಸುಮಾರು 300 ಕೋಟಿ ರೂಪಾಯಿ ಹಣ ಗಳಿಸಿದೆ. ಸಿನಿಮಾ ಭರ್ಜರಿ ಹಿಟ್ ಆದ ಬೆನ್ನಲ್ಲೆ ವಿವಾದವೊಂದು ಸಿನಿಮಾದ ನಿರ್ಮಾಪಕರ ಹೆಗಲೇರಿದ್ದು, ಪ್ರಕರಣ ಕೇರಳ ಹೈಕೋರ್ಟ್ ಮೆಟ್ಟಿಲೇರಿದೆ. ಆದರೆ ಹೈಕೋರ್ಟ್​ನಲ್ಲಿ ನಿರ್ಮಾಪಕರಿಗೆ ತಾತ್ಕಾಲಿಕ ನಿರಾಳ ಒದಗಿದೆ.

‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾವನ್ನು ಸೊಬಿನ್ ಸಾಹಿರ್, ಬಾಬು ಸಾಹಿರ್, ಶಾನ್ ಆಂಟೊನಿ ಒಟ್ಟಿಗೆ ನಿರ್ಮಾಣ ಮಾಡಿದ್ದರು. ಈ ಮೂವರ ಮೇಲೆ ಸಿರಾಜ್ ಹಮೀದ್ ಎಂಬುವರು ವಂಚನೆ ಪ್ರಕರಣ ದಾಖಲಿಸಿದ್ದರು. ಕ್ರಿಮಿನಲ್ ವಂಚನೆ, ಮೋಸ, ನಕಲು ಇನ್ನಿತರೆ ಗಂಭೀರ ಆರೋಪಗಳನ್ನು ಮಾಡಿದ್ದು ಕೇರಳದ ಮರಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಫ್​ಐಆರ್ ಸಹ ದಾಖಲಾಗಿತ್ತು. ಎಫ್​ಐಆರ್ ವಿರುದ್ಧ ಮೂವರು ನಿರ್ಮಾಪಕರಲ್ಲಿ ಒಬ್ಬರಾದ ಬಾಬು ಶಾಹಿರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯವು ಕ್ರಿಮಿನಲ್ ಮೊಕದ್ದಮೆ ನಡೆಸುವುದಕ್ಕೆ ತಡೆ ನೀಡಿದೆ.

ದೇಶಬಿಟ್ಟು ಪರಾರಿಯಾಗಲಿದ್ದ ಮಲಯಾಳಂ ಸಿನಿಮಾ ನಿರ್ಮಾಪಕ ಬಂಧನ

ಕಳೆದ ವರ್ಷ ನವೆಂಬರ್​ನಲ್ಲಿ ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾದ ಮೂವರು ನಿರ್ಮಾಪಕರು ಸಿರಾಜ್ ಹಮೀದ್ ಅವರೊಟ್ಟಿಗೆ ಹೂಡಿಕೆ ಒಪ್ಪಂದ ಒಂದನ್ನು ಮಾಡಿಕೊಂಡಿದ್ದರು. ಹಮೀದ್ ಅವರಿಂದ ಏಳು ಕೋಟಿ ಹಣ ಪಡೆದು, ಅದಕ್ಕೆ ಪ್ರತಿಯಾಗಿ ಸಿನಿಮಾದಿಂದ ಬಂದ ಲಾಭದಲ್ಲಿ 40% ನೀಡುವುದಾಗಿ ಹೇಳಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈಗ ಸಿನಿಮಾ ಬಿಡುಗಡೆ ಆಗಿ ಭರ್ಜರಿ ಲಾಭ ಸಹ ಪಡೆಯುತ್ತಿರುವಾಗ ನಿರ್ಮಾಪಕರು ಲಾಭದ ಹಂಚಿಕೆ ಮಾಡಿಲ್ಲ ಎಂದು ಹಮೀದ್ ಆರೋಪಿಸಿದ್ದಾರೆ.

ನಿರ್ಮಾಪಕರ ಪರವಾಗಿ ಹೈಕೋರ್ಟ್​ನಲ್ಲಿ ವಾದ ಮಾಡಿದ ವಕೀಲರು, ‘ನಿರ್ಮಾಪಕರು ಲಾಭದ ಹಣ ನೀಡುವುದಿಲ್ಲ ಎಂದು ಹೇಳಿಲ್ಲ. ಒಪ್ಪಂದದಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್​ನಲ್ಲಿ ಲಾಭ ಹಂಚಿಕೆ ಮಾಡಿಕೊಳ್ಳುವ ಒಪ್ಪಂದವಾಗಿದೆ. ಆದರೆ ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಸಿನಿಮಾದ ಪ್ರದರ್ಶನ ಪೂರ್ಣವಾದ ಬಳಿಕವಷ್ಟೆ ಲಾಭ ಹಂಚಿಕೆ ಮಾಡಲಾಗುತ್ತದೆ. ಅಲ್ಲದೆ ಶಾಹಿರ್ ಈಗಾಗಲೇ ಹಮೀದ್ ಅವರಿಗೆ 50 ಲಕ್ಷ ಹಣವನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:02 pm, Sat, 18 May 24