‘ವಾರ್ 2’ ಚಿತ್ರದ ಬಗ್ಗೆ ಸಿಕ್ತು ದೊಡ್ಡ ಅಪ್ಡೇಟ್; ಮತ್ತೊಂದು ‘ನಾಟು ನಾಟು..’ ರೀತಿಯ ಸಾಂಗ್?
‘ವಾರ್’ ಸಿನಿಮಾ ದೊಡ್ಡ ಮಟ್ಟದ ಗಳಿಕೆ ಮಾಡಿದೆ. ಈ ಸಿನಿಮಾದ ‘ಜೈ ಜೈ ಶಿವಶಂಕರ್’ ಹಾಡನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಈ ಹಾಡಿನಲ್ಲಿ ಹೃತಿಕ್ ಹಾಗೂ ಟೈಗರ್ ಭರ್ಜರಿ ಡ್ಯಾನ್ಸ್ ಮಾಡಿದ್ದರು. ‘ವಾರ್ 2’ ಸಿನಿಮಾದಲ್ಲಿ ಈ ಬಾರಿ ಹೃತಿಕ್ ಹಾಗೂ ಜೂನಿಯರ್ ಎನ್ಟಿಆರ್ ಒಂದಾಗುತ್ತಿದ್ದಾರೆ.
2019ರಲ್ಲಿ ರಿಲೀಸ್ ಆದ ಹೃತಿಕ್ ರೋಷನ್ (Hrithik Roshan), ಟೈಗರ್ ಶ್ರಾಫ್ ನಟನೆಯ ‘ವಾರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಚಿತ್ರಕ್ಕೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಮೆಚ್ಚುಗೆ ಸಿಕ್ಕಿತ್ತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ರೆಡಿ ಆಗುತ್ತಿದೆ. ಸಿನಿಮಾನ ಅದ್ದೂರಿಯಾಗಿ ನಿರ್ಮಾಣ ಮಾಡುವುದರ ಜೊತೆಗೆ ಸಿನಿಮಾ ದೊಡ್ಡ ಬಜೆಟ್ನಲ್ಲಿ ರೆಡಿ ಆಗಲಿದೆ. ಈ ಸಿನಿಮಾದ ಬಗ್ಗೆ ಈಗ ಹೊಸ ಅಪ್ಡೇಟ್ ಒಂದು ಕೇಳಿ ಬಂದಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
‘ವಾರ್’ ಸಿನಿಮಾ ದೊಡ್ಡ ಮಟ್ಟದ ಗಳಿಕೆ ಮಾಡಿದೆ. ಈ ಸಿನಿಮಾದ ‘ಜೈ ಜೈ ಶಿವಶಂಕರ್’ ಹಾಡನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ. ಈ ಹಾಡಿನಲ್ಲಿ ಹೃತಿಕ್ ಹಾಗೂ ಟೈಗರ್ ಭರ್ಜರಿ ಡ್ಯಾನ್ಸ್ ಮಾಡಿದ್ದರು. ‘ವಾರ್ 2’ ಸಿನಿಮಾದಲ್ಲಿ ಈ ಬಾರಿ ಹೃತಿಕ್ ಹಾಗೂ ಜೂನಿಯರ್ ಎನ್ಟಿಆರ್ ಒಂದಾಗುತ್ತಿದ್ದಾರೆ. ಇವರು ಭರ್ಜರಿಯಾಗಿ ಡ್ಯಾನ್ಸ್ ಮಾಡಲಿದ್ದಾರಂತೆ.
‘ಯಶ್ ರಾಜ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ‘ವಾರ್ 2’ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈ ಸಿನಿಮಾದಲ್ಲೂ ವಿಶೇಷ ಹಾಡನ್ನು ಇಡಲು ತಂಡ ಪ್ಲ್ಯಾನ್ ಮಾಡಿದೆ. ಹೃತಿಕ್ ರೋಷನ್ ಅವರು ಡ್ಯಾನ್ಸ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಜೂನಿಯರ್ ಎನ್ಟಿಆರ್ ಅವರು ‘ನಾಟು ನಾಟು..’ ಹಾಡಿನ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ಈ ಹಾಡು ಆಸ್ಕರ್ ಕೂಡ ಗೆದ್ದಿದೆ. ಈಗ ಮತ್ತೊಂದು ‘ನಾಟು ನಾಟು..’ ರೀತಿಯ ಹಾಡು ರೆಡಿ ಆಗುತ್ತಿದೆ.
‘ವಾರ್ ಸೀಕ್ವೆಲ್ನಲ್ಲಿ ಹೃತಿಕ್ Vs ಜೂನಿಯರ್ ಎನ್ಟಿಆರ್ ಇರಲಿದೆ. ಆದಾಗ್ಯೂ ಒಂದು ಸಾಂಗ್ಗೆ ಇವರ ಡ್ಯಾನ್ಸ್ ಇರಲಿದೆ. ಈ ಹಾಡು ಸಿನಿಮಾದ ದೊಡ್ಡ ಹೈಲೈಟ್ ಆಗಲಿದೆ’ ಎಂದು ಮೂಲಗಳು ಹೇಳಿರುವುದಾಗಿ ಬಾಲಿವುಡ್ ಹಂಗಾಮ ವರದಿ ಮಾಡಿದೆ.
ಇದನ್ನೂ ಓದಿ: War 2: ‘ವಾರ್ 2’ ಸಿನಿಮಾ ಸೆಟ್ನಿಂದ ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ಫೋಟೋಸ್ ವೈರಲ್
ಈಗಾಗಲೇ ‘ವಾರ್ 2’ ಚಿತ್ರಕ್ಕೆ ಶೂಟಿಂಗ್ ಶುರುವಾಗಿದೆ. ಚಿತ್ರದ ಸೆಟ್ ಫೋಟೋಗಳು ಲೀಕ್ ಆಗಿವೆ. ಅಯಾನ್ ಮುಖರ್ಜಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದಿತ್ಯ ಚೋಪ್ರಾ ಅವರು ದೊಡ್ಡ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ವಾರ್ 2’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಈ ಸಿನಿಮಾ 2025ರಲ್ಲಿ ಆಗಸ್ಟ್ 14ರಂದು ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ