JR NTR Birthday: ಜೂನಿಯರ್ ಎನ್​ಟಿಆರ್ ಜನ್ಮದಿನ; ಸ್ಟಾರ್ ಹೀರೋಗೆ ಕನ್ನಡದ ಬಗ್ಗೆ ಇದೆ ವಿಶೇಷ ಪ್ರೀತಿ

ಜೂನಿಯರ್ ಎನ್​ಟಿಆರ್​ ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ. ಜೂನಿಯರ್ ಎನ್​ಟಿಆರ್ ತಾಯಿ ಕುಂದಾಪುರದವರು. ಹೀಗಾಗಿ, ಅವರಿಗೆ ಕನ್ನಡದ ನಂಟಿದೆ.

JR NTR Birthday: ಜೂನಿಯರ್ ಎನ್​ಟಿಆರ್ ಜನ್ಮದಿನ; ಸ್ಟಾರ್ ಹೀರೋಗೆ ಕನ್ನಡದ ಬಗ್ಗೆ ಇದೆ ವಿಶೇಷ ಪ್ರೀತಿ
ಜೂನಿಯರ್ ಎನ್​ಟಿಆರ್​-ಪುನೀತ್

Updated on: May 20, 2023 | 6:30 AM

ಜೂನಿಯರ್ ಎನ್​ಟಿಆರ್ ಅವರಿಗೆ ಇಂದು (ಮೇ 20) ಜನ್ಮದಿನದ ಸಂಭ್ರಮ. ಈ ವಿಶೇಷ ದಿನಕ್ಕೆ ಅಭಿಮಾನಿಗಳಿಂದ, ಸೆಲೆಬ್ರಿಟಿಗಳಿಂದ ಹಾಗೂ ಕುಟುಂಬದವರಿಂದ ನಟನಿಗೆ ಶುಭಾಶಯ ಬರುತ್ತಿದೆ. ಜೂನಿಯರ್ ಎನ್​ಟಿಆರ್ ಹೆಸರಲ್ಲಿ ಅನೇಕ ಸಾಮಾಜಿಕ ಕೆಲಸಗಳು ಆಗುತ್ತಿವೆ. ಎನ್​ಟಿಆರ್ ಅವರ 30ನೇ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಜೂನಿಯರ್ ಎನ್​ಟಿಆರ್ (Jr NTR) ಅವರ ನಟನೆಯ ‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು (Naatu Naatu Song) ಆಸ್ಕರ್ ಗೆದ್ದ ಕಾರಣ ಅವರ ಬರ್ತ್​ಡೇ ಸಖತ್ ವಿಶೇಷ ಎನಿಸಿಕೊಂಡಿದೆ.

2001ರಲ್ಲಿ ರಿಲೀಸ್ ಆದ ‘ನಿನ್ನು ಚೂಡಾಲನಿ’ ಸಿನಿಮಾ ತೆರೆಗೆ ಬಂದು ಯಶಸ್ಸು ಕಂಡಿತು. ಅದೇ ವರ್ಷ ರಿಲೀಸ್ ಆದ ‘ಸ್ಟೂಡೆಂಟ್ ನಂಬರ್ 1’ ಚಿತ್ರ ಕೂಡ ಯಶಸ್ಸು ಕಂಡಿತು. ಇದರಿಂದ ಜೂನಿಯರ್ ಎನ್​ಟಿಆರ್ ಅವರು ಟಾಲಿವುಡ್​ನಲ್ಲಿ ಭದ್ರ ನೆಲೆ ಕಂಡುಕೊಂಡರು. ಬಳಿಕ ‘ಸಿಂಹಾದ್ರಿ’, ‘ಟೆಂಪರ್​’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರ ನಟನೆಯ ‘ಆರ್​ಆರ್​ಆರ್’ ಸಿನಿಮಾ ಕೂಡ ಯಶಸ್ಸು ಕಂಡಿತು. ‘ನಾಟು ನಾಟು..’ ಹಾಡು ಮಾಡಿದ ಮೋಡಿ ತುಂಬಾನೇ ದೊಡ್ಡದು.

ಜೂನಿಯರ್ ಎನ್​ಟಿಆರ್​ ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇದೆ. ಜೂನಿಯರ್ ಎನ್​ಟಿಆರ್ ತಾಯಿ ಕುಂದಾಪುರದವರು. ಹೀಗಾಗಿ, ಅವರಿಗೆ ಕನ್ನಡದ ನಂಟಿದೆ. ‘ಆರ್​ಆರ್​ಆರ್’ ಚಿತ್ರಕ್ಕೆ ಅವರೇ ಡಬ್ ಮಾಡಿದ್ದರು ಅನ್ನೋದು ವಿಶೇಷ. ಅವರ ಕನ್ನಡ ಪ್ರೀತಿ ಇಲ್ಲಿಗೆ ಮುಗಿದಿಲ್ಲ. ತೆಲುಗು ರಿಯಾಲಿಟಿ ಶೋ ಬಿಗ್ ಬಾಸ್​ನಲ್ಲಿ ಕನ್ನಡ ಸ್ಪರ್ಧಿಗಳ ಆಗಮನ ಆಗಿತ್ತು. ಈ ವೇಳೆ ಅವರು ಕನ್ನಡದಲ್ಲೇ ಸಂವಹನ ಮಾಡಿದ್ದರು.

ಸ್ಪರ್ಧಿಗಳಿಬ್ಬರು ಕನ್ನಡದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಮಾತನಾಡಿದ್ದ ಜೂನಿಯರ್ ಎನ್​ಟಿಆರ್ ಅವರು, ‘ನೀವು ಕನ್ನಡದಲ್ಲಿ ಚೆನ್ನಾಗಿ ಮಾತಾಡ್ತಾ ಇದ್ರಿ. ನಿಮ್ಮಲ್ಲಿ ಕನ್ನಡದವರು ಯಾರು’ ಎಂದು ಪ್ರಶ್ನೆ ಮಾಡಿದ್ದರು ಜೂನಿಯರ್ ಎನ್​ಟಿಆರ್​. ‘ನಾವಿಬ್ಬರೂ ಕನ್ನಡವರೇ’ ಎಂದಿದ್ದರು ಸ್ಪರ್ಧಿಗಳು. ‘ನನ್ನ ಅಮ್ಮ ಕೂಡ ಕನ್ನಡವರು, ಕುಂದಾಪುರದವರು’ ಎಂದು ಕನ್ನಡದಲ್ಲೇ ಜೂನಿಯರ್ ಎನ್​ಟಿಆರ್​ ಸಂವಹನ ಮಾಡಿದ್ದರು.

ಇದನ್ನೂ ಓದಿ: ರಾಜಮೌಳಿ-ಜೂ ಎನ್​ಟಿಆರ್ ಹಳೆ ಸಿನಿಮಾ ಮರು ಬಿಡುಗಡೆ, ಪ್ರೀ ರಿಲೀಸ್ ಇವೆಂಟ್​ ಆಯೋಜನೆ

ಜೂನಿಯರ್ ಎನ್​ಟಿಆರ್​ ಅವರಿಗೆ ಪುನೀತ್ ರಾಜ್​ಕುಮಾರ್ ಜೊತೆ ಒಳ್ಳೆಯ ಒಡನಾಟ ಇತ್ತು. ಪುನೀತ್ ನಟನೆಯ ‘ಚಕ್ರವ್ಯೂಹ’ ಸಿನಿಮಾದ ‘ಗೆಳೆಯಾ.. ಗೆಳೆಯಾ..’ ಹಾಡನ್ನು ಜೂನಿಯರ್ ಎನ್​ಟಿಆರ್ ಅವರು ಹಾಡಿದ್ದರು ಅನ್ನೋದು ವಿಶೇಷ. ಅವರು ಕರ್ನಾಟಕಕ್ಕೆ ಸಿನಿಮಾ ಪ್ರಮೋಷನ್​​ಗೆ ಬಂದ ಸಂದರ್ಭದಲ್ಲೂ ಸ್ವಚ್ಛ ಕನ್ನಡದಲ್ಲೇ ಮಾತನಾಡುತ್ತಾರೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ