ಜೂನಿಯರ್ ಎನ್ಟಿಆರ್ ಅವರು ‘ದೇವರ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಸೆಪ್ಟೆಂಬರ್ 27ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಜೂನಿಯರ್ ಎನ್ಟಿಆರ್ ಅವರು ಭಾರತದಲ್ಲಿ ಇರೋದಿಲ್ಲ. ಹೌದು, ಸೆಪ್ಟೆಂಬರ್ 25ರಂದು ಜೂನಿಯರ್ ಎನ್ಟಿಆರ್ ಅವರು ಅಮೆರಿಕದ ಲಾಸ್ ಎಂಜಲೀಸ್ಗೆ ತೆರಳಲಿದ್ದಾರೆ. ಇದಕ್ಕೆ ಒಂದು ಕಾರಣವೂ ಇದೆ.
ಕನ್ನಡದಲ್ಲಿ ಯಾವುದೇ ಸಿನಿಮಾ ರಿಲೀಸ್ ಆದರೂ ಮೊದಲ ದಿನ ಹೀರೋಗಳು ಮುಖ್ಯ ಥಿಯೇಟರ್ಗೆ ತೆರಳಿ ಫ್ಯಾನ್ಸ್ ಜೊತೆ ಸಿನಿಮಾ ನೋಡುವ ಟ್ರೆಂಡ್ ಇದೆ. ಆದರೆ, ತೆಲುಗಿನಲ್ಲಿ ಆ ರೀತಿ ಇಲ್ಲ. ಈ ಕಾರಣಕ್ಕೆ ಜೂನಿಯರ್ ಎನ್ಟಿಆರ್ ಅವರು ಸಿನಿಮಾ ರಿಲೀಸ್ಗೂ ಮೊದಲು ಕ್ಯಾಲಿಫೋರ್ನಿಯಾ ತೆರಳಲಿದ್ದಾರೆ. ಅಲ್ಲಿಂದ ಅವರು ಲಾಸ್ ಏಂಜಲೀಸ್ಗೆ ತೆರಳುತ್ತಾರೆ.
ಬಿಯಾಂಡ್ ಫೆಸ್ಟ್ ಹಿನ್ನೆಲೆಯಲ್ಲಿ ಹಾಲಿವುಡ್ನ ಈಜಿಪ್ಟಿಯನ್ ಥಿಯೇಟರ್ನಲ್ಲಿ ‘ದೇವರ’ ಸಿನಿಮಾದ ಶೋ ಆಯೋಜನೆ ಮಾಡಲಾಗಿದೆ. ಈ ವಿಶೇಷ ಶೋ 26ಕ್ಕೆ ಇದೆ. ಈ ಕಾರಣದಿಂದ ಅವರು ಭಾರತದಿಂದ 25ಕ್ಕೇ ಹೊರಡಲಿದ್ದಾರೆ. ಸ್ಥಳೀಯ ಅಭಿಮಾನಿಗಳ ಜೊತೆ ಅವರು ಸಿನಿಮಾ ನೋಡಲಿದ್ದಾರೆ. ಹಾಲಿವುಡ್ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ.
ಪ್ರಕಾಶ್ ರಾಜ್, ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಶ್ರೀಕಾಂತ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾಗೆ ಇತ್ತೀಚೆಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಈ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ. ಈ ಚಿತ್ರದ ಅವಧಿ ಸುಮಾರು ಮೂರು ಗಂಟೆ ಇದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ: ಜೂನಿಯರ್ ಎನ್ಟಿಆರ್ಗೆ ಆದ ಗಾಯದಿಂದ ‘ವಾರ್ 2’ ಚಿತ್ರಕ್ಕೆ ದೊಡ್ಡ ನಷ್ಟ
‘ದೇವರ’ ಸಿನಿಮಾದ ಟ್ರೇಲರ್ ನೋಡಿದ ಅನೇಕರು ನಕರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರವನ್ನು ಕೆಲವರು ಅಟ್ಟರ್ ಫ್ಲಾಪ್ ಸಿನಿಮಾ ‘ಆಚಾರ್ಯ’ಕ್ಕೆ ಹೋಲಿಕೆ ಮಾಡಿದ್ದಾರೆ. ‘ದೇವರ’ ಮತ್ತೊಂದು ‘ಆಚಾರ್ಯ’ ಆಗಲಿದೆ ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:53 pm, Fri, 13 September 24