ಜೂನಿಯರ್ ಎನ್ಟಿಆರ್ಗೆ ಆದ ಗಾಯದಿಂದ ‘ವಾರ್ 2’ ಚಿತ್ರಕ್ಕೆ ದೊಡ್ಡ ನಷ್ಟ
ಫೈಟ್ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ಜೂ ಎನ್ಟಿಆರ್ ಬಿದ್ದು ಗಾಯಗೊಂಡಿದ್ದಾರೆ, ಅವರನ್ನು ಆಸ್ಪತ್ರೆಗೆ ದಾಖಲಸಲಾಗಿದೆ ಎಂಬ ಸುದ್ದಿ ಹರಿದಾಡಲು ಆರಂಭಿಸಿತ್ತು. ಹೀಗಾಗಿ, ‘ವಾರ್ 2’ ಸಿನಿಮಾ ಶೂಟಿಂಗ್ ಎರಡು ತಿಂಗಳು ಮುಂದಕ್ಕೆ ಹೋಗಿದೆ.
ಈ ವರ್ಷ ಆಗಸ್ಟ್ 15ರಂದು ‘ಸ್ತ್ರೀ 2’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಮುಂದಿನ ವರ್ಷ ಇದೇ ಸಂದರ್ಭದಲ್ಲಿ ‘ವಾರ್ 2’ ಸಿನಿಮಾ ರಿಲೀಸ್ ಆಗಲಿದೆ ಎನ್ನುವ ಘೋಷಣೆ ಆಗಿದೆ. ಆದರೆ, ಅಂದುಕೊಂಡ ದಿನಾಂಕದಂದು ಸಿನಿಮಾ ಶೂಟ್ ಪೂರ್ಣಗೊಳ್ಳುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿರೋದು ಜೂನಿಯರ್ ಎನ್ಟಿಆರ್ ಅವರಿಗೆ ಆದ ಗಾಯ. ಸೆಟ್ನಲ್ಲಿ ಅವರಿಗೆ ಇಂಜೂರಿ ಆಗಿದೆ. ಹೀಗಾಗಿ, ಶೂಟಿಂಗ್ ಎರಡು ತಿಂಗಳು ಮುಂದಕ್ಕೆ ಹೋಗಿದೆ.
‘ವಾರ್ 2’ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಇದ್ದ ಜೂನಿಯರ್ ಎನ್ಟಿಆರ್ ಅವರು ಪ್ರಮುಖ ಆ್ಯಕ್ಷನ್ ದೃಶ್ಯವನ್ನು ಮಾಡುತ್ತಿದ್ದರು. ಆಗ ಅವರ ಕೈಗೆ ಗಾಯ ಆಗಿತ್ತು. ಅವರಿಗೆ ಎರಡು ತಿಂಗಳು ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ, ಮುಂಬೈನಲ್ಲಿ ನಡೆಯಬೇಕಿದ್ದ ‘ವಾರ್ 2’ ಶೂಟಿಂಗ್ ಎರಡು ತಿಂಗಳು ಮುಂದಕ್ಕೆ ಹೋಗಿದೆ. ಇದರಿಂದ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಗೆ ನಷ್ಟ ಉಂಟಾಗಿದೆ.
‘ವಾರ್ 2’ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಅವರಿಗೆ ಭರ್ಜರಿ ಎಂಟ್ರಿ ಇರಲಿದೆ. ಇದನ್ನು ಈಗ ಶೂಟ್ ಮಾಡಲು ತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ, ಅಕ್ಟೋಬರ್ನಲ್ಲಿ ಇದನ್ನು ಶೂಟ್ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ‘ದೇವರ’ ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 27ರಂದು ರಿಲೀಸ್ ಆಗಲಿದೆ. ಇದಾದ ಬಳಿಕವೇ ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ ಶೂಟ್ನಲ್ಲಿ ತೊಡಗಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಜೂ ಎನ್ಟಿಆರ್ಗೆ ಗಾಯ, ಅಧಿಕೃತ ಹೇಳಿಕೆ ಬಿಡುಗಡೆ
‘ದೇವರ’ ಸಿನಿಮಾದ ಪ್ರಚಾರದಲ್ಲಿ ಜೂನಿಯರ್ ಎನ್ಟಿಆರ್ ಭಾಗಿ ಆಗಲಿದ್ದಾರೆ. ಈ ಚಿತ್ರದ ಪ್ರಮೋಷನ್ಗಾಗಿ ನಾನಾ ಕಡೆಗಳಿಗೆ ಅವರು ಭೇಟಿ ಮಾಡಿ ಸಿನಿಮಾ ನೋಡುವಂತೆ ಕೋರಿಕೊಳ್ಳಲಿದ್ದಾರೆ. ಸದ್ಯ ಹೃತಿಕ್ ರೋಷನ್ ಹಾಗೂ ಕಿಯಾರಾ ಅಡ್ವಾಣಿ ಅವರ ದೃಶ್ಯಗಳನ್ನು ಶೂಟ್ ಮಾಡಲು ತಂಡ ಮುಂದಾಗಿದೆ. ಸೆಪ್ಟೆಂಬರ್ನಲ್ಲಿ ತಂಡ ಯುರೋಪ್ಗೆ ತೆರಳಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.