ಮುನಿಸು ಮರೆತು ಚಿಕ್ಕಪ್ಪನ ಬಗ್ಗೆ ಟ್ವೀಟ್ ಮಾಡಿದ ಜೂ ಎನ್​​ಟಿಆರ್

Nandamuri Balakrishna: ಈಗಲೂ ಸಹ ಆಂಧ್ರ ಪ್ರದೇಶದಲ್ಲಿ ನಂದಮೂರಿ ಕುಟುಂಬ ಸ್ಥಾಪಿಸಿದ ಟಿಡಿಪಿ ಪಕ್ಷದಕ್ಕೇ ಸರ್ಕಾರ ಅಧಿಕಾರದಲ್ಲಿದೆ. ತೆಲುಗು ಚಿತ್ರರಂಗದಲ್ಲಿ ನಂದಮೂರಿ ಕುಟುಂಬದ ಹಲವು ನಟರು ಸ್ಟಾರ್​​ಗಳಾಗಿ ಮೆರೆಯುತ್ತಿದ್ದಾರೆ. ಆದರೆ ಈ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ. ವಿಶೇಷವಾಗಿ ಜೂ ಎನ್​​ಟಿಆರ್ ಮತ್ತು ಚಿಕ್ಕಪ್ಪ ಬಾಲಯ್ಯ ನಡುವೆ ಮುನಿಸು ಮನೆ ಮಾಡಿದೆ. ಆದರೆ ಜೂ ಎನ್​​ಟಿಆರ್ ಆ ಮುನಿಸು ಮರೆತು, ಚಿಕ್ಕಪ್ಪನ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಮುನಿಸು ಮರೆತು ಚಿಕ್ಕಪ್ಪನ ಬಗ್ಗೆ ಟ್ವೀಟ್ ಮಾಡಿದ ಜೂ ಎನ್​​ಟಿಆರ್
Jr Ntr Balayya

Updated on: Jul 21, 2026 | 6:05 PM

ನಂದಮೂರಿ (Nandamuri) ಕುಟುಂಬ ತೆಲುಗು ರಾಜ್ಯಗಳ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಅತ್ಯಂತ ಪ್ರಮುಖ ಕುಟುಂಬ. ಸುಮಾರು 50 ವರ್ಷಗಳಿಂದಲೂ ತೆಲುಗು ರಾಜ್ಯಗಳ ಸಿನಿಮಾ ಮತ್ತು ರಾಜಕೀಯದ ಮೇಲೆ ಹಿಡಿತ ಸಾಧಿಸಿವೆ, ಪ್ರಭಾವ ಬೀರಿವೆ. ಈಗಲೂ ಸಹ ಆಂಧ್ರ ಪ್ರದೇಶದಲ್ಲಿ ನಂದಮೂರಿ ಕುಟುಂಬ ಸ್ಥಾಪಿಸಿದ ಟಿಡಿಪಿ ಪಕ್ಷದಕ್ಕೇ ಸರ್ಕಾರ ಅಧಿಕಾರದಲ್ಲಿದೆ. ತೆಲುಗು ಚಿತ್ರರಂಗದಲ್ಲಿ ನಂದಮೂರಿ ಕುಟುಂಬದ ಹಲವು ನಟರು ಸ್ಟಾರ್​​ಗಳಾಗಿ ಮೆರೆಯುತ್ತಿದ್ದಾರೆ. ಆದರೆ ಈ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ. ವಿಶೇಷವಾಗಿ ಜೂ ಎನ್​​ಟಿಆರ್ ಮತ್ತು ಚಿಕ್ಕಪ್ಪ ಬಾಲಯ್ಯ ನಡುವೆ ಮುನಿಸು ಮನೆ ಮಾಡಿದೆ. ಆದರೆ ಜೂ ಎನ್​​ಟಿಆರ್ ಆ ಮುನಿಸು ಮರೆತು, ಚಿಕ್ಕಪ್ಪನ ಬಗ್ಗೆ ಟ್ವೀಟ್ ಮಾಡಿದ್ದಾರೆ.

ನಂದಮೂರಿ ಬಾಲಕೃಷ್ಣ ಅವರು ತಮ್ಮ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಅವಘಡದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಯ್ಯ ಅವರು ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದು, ಆಕ್ಷನ್ ಸೀನ್ ಶೂಟಿಂಗ್ ವೇಳೆ ಅವರು ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ ಅವರ ಮೊಣಕಾಲಿನ ಮೂಳೆ ಮತ್ತು ಮಾಂಸಖಂಡ ಹರಿದಿದ್ದು ಗಾಯದ ಸ್ವರೂಪ ತುಸು ಗಂಭೀರವಾಗಿದೆ ಎನ್ನಲಾಗಿದೆ. ಸಣ್ಣ ಶಸ್ತ್ರಚಿಕಿತ್ಸೆಗೆ ಸಹ ಅವರು ಒಳಗಾಗಿದ್ದಾರೆ.

ಇದೀಗ ಜೂ ಎನ್​​ಟಿಆರ್ ಅವರು ಚಿಕ್ಕಪ್ಪನ ಆರೋಗ್ಯದ ಕುರಿತು ಕಾಳಜಿ ವ್ಯಕ್ತಪಡಿಸಿದ್ದು, ಬಾಲಯ್ಯ ಬಗ್ಗೆ ಟ್ವೀಟ್ ಮಾಡಿದ್ದಾರೆ, ‘ಬಾಲಯ್ಯ ಚಿಕ್ಕಪ್ಪ, ಬೇಗ ಗುಣಮುಖರಾಗಿ. ನೀವು ಬೇಗನೆ ಚೇತರಿಸಿಕೊಳ್ಳಲಿ ಮತ್ತು ನಿಮಗೆ ಉತ್ತಮ ಆರೋಗ್ಯವನ್ನು ಬಯಸುತ್ತೇವೆ. ನೀವು ಪೂರ್ಣ ಫಾರ್ಮ್‌ನಲ್ಲಿ ಮತ್ತೆ ಘರ್ಜಿಸುವುದನ್ನು ನೋಡಲು ಎದುರು ನೋಡುತ್ತಿದ್ದೇನೆ’ ಎಂದು ಜೂ ಎನ್​​ಟಿಆರ್ ಹೇಳಿದ್ದಾರೆ.

ಇದನ್ನೂ ಓದಿ:‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?

ಅಸಲಿಗೆ ಜೂ ಎನ್​ಟಿಆರ್ ಹಾಗೂ ಬಾಲಯ್ಯ ನಡುವೆ ಕಳೆದ ಕೆಲ ವರ್ಷಗಳಿಂದಲೂ ಭಿನ್ನಾಭಿಪ್ರಾಯವಿದೆ. ಬಾಲಯ್ಯ ಅಂತೂ ಕೆಲವು ಬಾರಿ ಬಹಿರಂಗವಾಗಿಯೂ ಜೂ ಎನ್​​ಟಿಆರ್ ವಿರುದ್ಧ ಮಾತನಾಡಿದ್ದಿದೆ. ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅನ್ನು ರಾಜಕೀಯವಾಗಿ ಬೆಳೆಸುವ ಉದ್ದೇಶದಿಂದ ಜೂ ಎನ್​​ಟಿಆರ್ ಅವರನ್ನು ಪಕ್ಷದಿಂದ, ಕುಟುಂಬದಿಂದ ದೂರ ಇರಿಸಲಾಗಿದೆ ಎನ್ನಲಾಗುತ್ತಿದೆ. ನಾರಾ ಲೋಕೇಶ್, ಬಾಲಯ್ಯ ಅವರ ಅಳಿಯ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us