ಜೂನಿಯರ್ ಎನ್​ಟಿಆರ್ ಧರಿಸಿದ ಈ ವಾಚ್​ನ ಬೆಲೆ ಎಷ್ಟು ಕೋಟಿ ರೂಪಾಯಿ ಗೊತ್ತಾ?

ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಜೂನಿಯರ್ ಎನ್​ಟಿಆರ್ ಅವರು ಭಾಗಿ ಆಗಿದ್ದರು. ಈ ವೇಳೆ ಅವರು ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆದಿದೆ. ಜೂನಿಯರ್ ಎನ್​ಟಿಆರ್​​ಗೆ ವಾಚ್​​ಗಳ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಅವರ ಬಳಿ ಹಲವು ದುಬಾರಿ ವಾಚ್​ಗಳು ಇವೆ.

ಜೂನಿಯರ್ ಎನ್​ಟಿಆರ್ ಧರಿಸಿದ ಈ ವಾಚ್​ನ ಬೆಲೆ ಎಷ್ಟು ಕೋಟಿ ರೂಪಾಯಿ ಗೊತ್ತಾ?
ಜೂನಿಯರ್ ಎನ್​ಟಿಆರ್
Edited By:

Updated on: Aug 24, 2023 | 8:10 AM

ಟಾಲಿವುಡ್ ನಟ ಜೂನಿಯರ್ ಎನ್​ಟಿಆರ್ (Jr NTR) ಅವರು ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಚಿತ್ರದಿಂದ ಚಿತ್ರಕ್ಕೆ ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ಇನ್ನು ಹಲವು ಉದ್ಯಮಗಳಲ್ಲಿ ಜೂನಿಯರ್ ಎನ್​ಟಿಆರ್ ಹೂಡಿಕೆ ಮಾಡಿದ್ದಾರೆ. ಇದರಿಂದಲೂ ಅವರಿಗೆ ಭರ್ಜರಿ ಆದಾಯ ಬರುತ್ತಿದೆ. ಹೀಗಾಗಿ ಅವರು ಶ್ರೀಮಂತ ನಟರ ಸಾಲಿನಲ್ಲಿದ್ದಾರೆ. ಐಷಾರಾಮಿ ವಸ್ತುಗಳನ್ನು ಅವರು ಖರೀದಿಸುತ್ತಾರೆ. ಜೂನಿಯರ್ ಎನ್​ಟಿಆರ್​ ಅವರಿಗೆ ವಾಚ್​ಗಳ ಮೇಲೆ ವಿಶೇಷ ಆಸಕ್ತಿ ಇದೆ. ಅವರು ಧರಿಸುವ ವಾಚ್​​ನ ಬೆಲೆ ಕೋಟಿ ರೂಪಾಯಿ ಮೇಲಿರುತ್ತದೆ. ಈಗ ಜೂನಿಯರ್ ಎನ್​ಟಿಆರ್ ಧರಿಸಿರೋ ವಾಚ್ ಎಲ್ಲರ ಗಮನ ಸೆಳೆಯುತ್ತಿದೆ.

ಜೂನಿಯರ್ ಎನ್​ಟಿಆರ್ ಕುಟುಂಬಕ್ಕೆ ಚಿತ್ರರಂಗದ ಹಿನ್ನೆಲೆ ಇದೆ. ಅವರ ಕುಟುಂಬದ ಅನೇಕರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಜೂನಿಯರ್ ಎನ್​ಟಿಆರ್ ಅವರು ಸಾಕಷ್ಟು ಉದ್ಯಮದ ಮೇಲೆ ಹೂಡಿಕೆ ಮಾಡಿದ್ದಾರೆ. ಅವರ ಬಳಿ ದುಬಾರಿ ಕಾರುಗಳ ಕಲೆಕ್ಷನ್ ಇದೆ. ಈಗ ಅವರು ಧರಿಸಿರೋ ವಾಚ್ ಬೆಲೆ ಕೇಳಿ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಜೂನಿಯರ್ ಎನ್​ಟಿಆರ್ ಅವರು ಭಾಗಿ ಆಗಿದ್ದರು. ಈ ವೇಳೆ ಅವರು ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆದಿದೆ. ಜೂನಿಯರ್ ಎನ್​ಟಿಆರ್​​ಗೆ ವಾಚ್​​ಗಳ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಅವರ ಬಳಿ ಹಲವು ದುಬಾರಿ ವಾಚ್​ಗಳು ಇವೆ. ವಿಶೇಷ ಕಾರ್ಯಕ್ರಮಗಳಲ್ಲಿ ಅವರು ಇದನ್ನು ಧರಿಸುತ್ತಾರೆ. ಜೂನಿಯರ್ ಎನ್​ಟಿಆರ್ ಕೈಯಲ್ಲಿ ಇರೋದು ಪತೆಕ್ ಫಿಲಿಪ್ ಕಂಪನಿಯ ವಾಚ್. ಇದರ ಬೆಲೆ 2.45 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ. 1839ರಲ್ಲಿ ಈ ಸಂಸ್ಥೆ ಸ್ಥಾಪನೆ ಆಯಿತು. ಸ್ವಿಜರ್​ಲೆಂಡ್​ನಲ್ಲಿ ಈ ಕಂಪನಿಯ ಪ್ರಧಾನ ಕಚೇರಿ ಇದೆ.

ಜೂನಿಯರ್ ಎನ್​ಟಿಆರ್ ಅವರ ಬಳಿ ಹಲವು ಸಿನಿಮಾಗಳಿವೆ. ‘ಆರ್​ಆರ್​​ಆರ್’ ಸಿನಿಮಾ ಬಳಿಕ ಅವರು ಒಂದು ಬ್ರೇಕ್ ಪಡೆದಿದ್ದರು. ಈಗ ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಜೂನಿಯರ್ ಎನ್​ಟಿಆರ್​ಗೆ ಜೊತೆಯಾಗಿ ಜಾನ್ವಿ ಕಪೂರ್ ನಟಿಸಿದ್ದಾರೆ. ಸೈಫ್ ಅಲಿ ಖಾನ್ ವಿಲನ್ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರ ಲುಕ್ ರಿವೀಲ್ ಆಗಿತ್ತು.

ಇದನ್ನೂ ಓದಿ: ‘ಹ್ಯಾಪಿ ಬರ್ತ್​ಡೇ ಸೈಫ್​ ಸರ್​..’: ಸೈಫ್​ ಅಲಿ ಖಾನ್​ಗೆ ಜನ್ಮದಿನದ ಶುಭ ಕೋರಿದ ಜೂನಿಯರ್​ ಎನ್​ಟಿಆರ್​

‘ವಾರ್ 2’ ಚಿತ್ರದಲ್ಲೂ ಜೂನಿಯರ್ ಎನ್​ಟಿಆರ್ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ ಹೃತಿಕ್ ರೋಷನ್ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಯಾರು ನಿರ್ದೇಶನ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇದಲ್ಲದೆ ಪ್ರಶಾಂತ್ ನೀಲ್ ನಿರ್ದೇಶನ ಮಾಡುವ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us