ಪಾಪ ಜೂನಿಯರ್​ ಎನ್​​ಟಿಆರ್​ಗೆ ಏನಾಯ್ತು? ಲುಕ್ ನೋಡಿ ಫ್ಯಾನ್ಸ್​ಗೆ ಆತಂಕ

ಜೂನಿಯರ್ ಎನ್‌ಟಿಆರ್ ಅವರ ಹೊಸ ತೆಳ್ಳನೆಯ ಲುಕ್ ವೈರಲ್ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಚಿತ್ರಕ್ಕಾಗಿ ಅವರು ತೂಕ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬದಲಾವಣೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ನಾಗಾರ್ಜುನ ಅವರ ಚಿತ್ರದ ಪ್ರಚಾರ ವಿಡಿಯೋದಲ್ಲಿ ಅವರ ಹೊಸ ಅವತಾರ ಕಾಣಿಸಿತು.

ಪಾಪ ಜೂನಿಯರ್​ ಎನ್​​ಟಿಆರ್​ಗೆ ಏನಾಯ್ತು? ಲುಕ್ ನೋಡಿ ಫ್ಯಾನ್ಸ್​ಗೆ ಆತಂಕ
Jr Ntr
Edited By:

Updated on: Nov 05, 2025 | 10:31 AM

ಹೀರೋಗಳು ಯಾವಾಗಲೂ ಫಿಟ್ ಆಗಿರಲು ಬಯಸುತ್ತಾರೆ. ಇದಕ್ಕೆ ತಕ್ಕಂತೆ ಅವರು ಡಯಟ್ ಮಾಡೋದನ್ನು ಕಾಣಬಹುದು. ಈಗ ಜೂನಿಯರ್ ಎನ್​ಟಿಆರ್ ಅವರ ಹೊಸ ಲುಕ್ ವೈರಲ್ ಆಗಿದೆ. ಇದರಲ್ಲಿ ಅವರು ಸಾಕಷ್ಟು ತೆಳ್ಳಗಾಗಿದ್ದಾರೆ. ಅವರ ಮುಖವಂತೂ ಗುರುತೇ ಸಿಗದಷ್ಟು ಬದಲಾಗಿ ಹೋಗಿದ್ದನ್ನು ನೀವು ಕಾಣಬಹುದು. ಈ ಬಗ್ಗೆ ಚರ್ಚೆಗಳು ಶುರುವಾಗಿದೆ. ಈ ಲುಕ್ ಪ್ರಶಾಂತ್ ನೀಲ್ ಚಿತ್ರಕ್ಕಾಗಿ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ಅವರು ತೂಕ ಕಳೆದುಕೊಂಡರು. ಆದರೆ, ಈ ಬದಲಾವಣೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಜೂನಿಯರ್ ಎನ್​ಟಿಆರ್ ಅವರ ಈ ಲುಕ್​ಗೆ ಪ್ರಶಾಂತ್ ನೀಲ್ ಕಾರಣವಂತೆ. ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್​ಟಿಆರ್ ಕಾಂಬಿನೇಷನ್ ಅಲ್ಲಿ ಸಿನಿಮಾ ಬರುತ್ತಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಆದರೆ, ಇದಕ್ಕೆ ‘ಡ್ರ್ಯಾಗನ್’ ಎಂದು ಕರೆಯಲಾಗುತ್ತಿದೆ ಎನ್ನಲಾಗಿದೆ. ಈ ಸಿನಿಮಾದ ಶೂಟಿಂಗ್ ಶುರುವಾಗಿ ಹಲವು ತಿಂಗಳು ಕಳೆದಿವೆ. ಅವರು ‘ಡ್ರ್ಯಾಗನ್’ ಚಿತ್ರದ ಕೆಲಸದಲ್ಲಿಯೇ ಸಂಪೂರ್ಣ ತೊಡಗಿಕೊಂಡಿದ್ದಾರೆ.

ಅಕ್ಕಿನೇನಿ ನಾಗಾರ್ಜುನ ಅವರ 1989ರ ಸೂಪರ್ ಹಿಟ್ ಸಿನಿಮಾ ನವೆಂಬರ್ 24ರಂದು ರೀ-ರಿಲೀಸ್ ಆಗುತ್ತಿದೆ. ಹೊಸ ಅವತಾರದಲ್ಲಿ ಸಿನಿಮಾ ಬರುತ್ತಿದೆ. ಈ ಸಿನಿಮಾಗೆ ವಿಶ್ ಮಾಡಲು ಜೂನಿಯರ್ ಎನ್​ಟಿಆರ್ ಅವರು ಹೊಸ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಅವರು ತುಂಬಾನೇ ತೆಳ್ಳಗೆ ಕಾಣಿಸಿದ್ದಾರೆ. ಅವರ ಮುಖ ತುಂಬಾನೇ ತೆಳ್ಳಗೆ ಆಗಿದೆ. ಅವರಿಗೆ ಏನಾಯಿತು ಎಂಬ ಆತಂಕ ಅಭಿಮಾನಿಗಳನ್ನು ಅತಿಯಾಗಿ ಕಾಡುತ್ತಿದೆ. ಅವರು ಬೇಗ ದಪ್ಪ ಆಗಬೇಕು ಎಂದು ಅನೇಕರು ಕೋರಿದರು.

ಇದನ್ನೂ ಓದಿ: ಸಿಕ್ಕಾಪಟ್ಟೆ ಸ್ಲಿಮ್ ಆದ ಜೂನಿಯರ್ ಎನ್​ಟಿಆರ್; ಇದಕ್ಕೆ ಕಾರಣ ಪ್ರಶಾಂತ್ ನೀಲ್

ಈಗ ಮತ್ತೊಂದು ವಿಚಾರ ಏನೆಂದರೆ ಪ್ರಶಾಂತ್ ನೀಲ್ ಸಿನಿಮಾ ನಿಂತು ಹೋಗಿದೆ ಎಂದು ಹೇಳಲಾಗುತ್ತಾ ಇದೆ. ಕಥೆ ವಿಚಾರದಲ್ಲಿ ಜೂನಿಯರ್ ಎನ್​ಟಿಆರ್​ಗೆ ಅಸಮಾಧಾನ ಇದೆ ಎಂಬ ಸುದ್ದಿ ಹರಿದಾಡಿದೆ. ಹೀಗಾಗಿ, ಸಿನಿಮಾ ನಿಂತಿದೆ ಎಂಬ ಮಾತುಗಳು ಕೇಳಿ ಬಂದವು. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ‘ವಾರ್ 2’ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್ ನಟಿಸಿದ್ದರು. ಬಾಲಿವುಡ್​ನ ಈ ಚಿತ್ರ ಹೀನಾಯವಾಗಿ ಸೋಲು ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.