
ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಈ ಚಿತ್ರದ ಮೇಲೆ ಇರುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡುವ ರೀತಿಯ ಪೋಸ್ಟರ್ ಒಂದನ್ನು ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್ನಲ್ಲಿ ಪ್ರಭಾಸ್ ಲುಕ್ ಗಮನ ಸೆಳೆದಿದೆ. ಅಷ್ಟೇ ಅಲ್ಲ ಪ್ರಭಾಸ್ ಅವರ ಪಾತ್ರದ ಹೆಸರು ಕೂಡ ರಿವೀಲ್ ಆಗಿದೆ. ಪ್ರಭಾಸ್ ಅವರು ಭೈರವನಾಗಿ ಮಿಂಚಲಿದ್ದಾರೆ. ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಮಾರ್ಚ್ 8 ಮಹಾಶಿವರಾತ್ರಿ. ಎಲ್ಲರೂ ಶಿವನ ಆರಾಧನೆ ಮಾಡಿದ್ದಾರೆ. ಈ ವಿಶೇಷ ದಿನದಂದು ಹಲವು ಸಿನಿಮಾಗಳ ಪೋಸ್ಟರ್ ರಿವೀಲ್ ಆಗಿದೆ. ಅದೇ ರೀತಿ ಪ್ರಭಾಸ್ ಅವರ ಲುಕ್ ರಿವೀಲ್ ಮಾಡಲಾಗಿದೆ. ಈ ಪೋಸ್ಟರ್ನಲ್ಲಿ ಪ್ರಭಾಸ್ ಅವರ ಮುಖ ರಿವೀಲ್ ಆಗಿಲ್ಲ. ಈ ಪೋಸ್ಟರ್ಗೆ ‘ಅವನ ಹೆಸರು ಭೈರವ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ 10 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.
ಇದನ್ನೂ ಓದಿ: ರಿವೀಲ್ ಆಯ್ತು ಅಮಿತಾಭ್ ಬಚ್ಚನ್ ಬ್ಯಾಂಕ್ ಬ್ಯಾಲೆನ್ಸ್; ಲೆಕ್ಕ ಮಾಡೋಕೆ ಎರಡು ಕೈ ಬೇಕು
ಈಗಾಗಲೇ ‘ಕಲ್ಕಿ 2898 ಎಡಿ’ ಸಿನಿಮಾ ಕಥೆಯ ಬಗ್ಗೆ ನಾಗ್ ಅಶ್ವಿನ್ ಅವರು ಹಿಂಟ್ ನೀಡಿದ್ದಾರೆ. ಸಿನಿಮಾದ ಟೈಮ್ಲೈನ್ ಮಹಾಭಾರತದ ಜೊತೆ ಕನೆಕ್ಟ್ ಆಗಿರಲಿದೆ ಎಂದು ಅವರು ಹೇಳಿದ್ದಾರೆ. ‘ಈ ಚಿತ್ರದ ಕಥೆ ಮಹಾಭಾರತದ ಜೊತೆ ಆರಂಭ ಆಗಲಿದೆ ಹಾಗೂ ಕಲ್ಕಿ 2898 ಎಡಿಯಲ್ಲಿ ಕೊನೆಗೊಳ್ಳಲಿದೆ. ಸಿನಿಮಾದ ಕಥೆ ಆರು ಸಾವಿರ ವರ್ಷ ಸಾಗಲಿದೆ. ಕೃಷ್ಣನ ಅವತಾರವೂ ಇರಲಿದೆ’ ಎಂದಿದ್ದಾರೆ ಅವರು.
‘ಕಲ್ಕಿ 2898 ಎಡಿ’ ಸಿನಿಮಾ ದೊಡ್ಡ ಬಜೆಟ್ನಲ್ಲಿ ಮೂಡಿ ಬರುತ್ತಿದೆ. ಹಲವು ವರ್ಷಗಳಿಂದ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬಂದಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ