AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿವೀಲ್ ಆಯ್ತು ಅಮಿತಾಭ್ ಬಚ್ಚನ್ ಬ್ಯಾಂಕ್ ಬ್ಯಾಲೆನ್ಸ್; ಲೆಕ್ಕ ಮಾಡೋಕೆ ಎರಡು ಕೈ ಬೇಕು

Amitabh Bachchan Net Worth: ಅಮಿತಾಭ್ ಬಚ್ಚನ್ ಬಳಿ 54 ಕೋಟಿ ರೂಪಾಯಿಯ ಜ್ಯುವೆಲರಿ ಇದೆ. ಜಯಾ ಬಚ್ಚನ್ ಅವರ ಬಳಿ 40.97 ಕೋಟಿ ರೂಪಾಯಿ ಜ್ಯುವೆಲರಿ ಇದೆ. ಇಬ್ಬರಿಂದ 849 ಕೋಟಿ ರೂಪಾಯಿ ಚರಾಸ್ತಿ ಇದೆ. ಜಯಾ ಬಚ್ಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 10 ಕೋಟಿ ರೂಪಾಯಿ ಇದೆ.

ರಿವೀಲ್ ಆಯ್ತು ಅಮಿತಾಭ್ ಬಚ್ಚನ್ ಬ್ಯಾಂಕ್ ಬ್ಯಾಲೆನ್ಸ್; ಲೆಕ್ಕ ಮಾಡೋಕೆ ಎರಡು ಕೈ ಬೇಕು
ಅಮಿತಾಭ್-ಜಯಾ
ರಾಜೇಶ್ ದುಗ್ಗುಮನೆ
|

Updated on:Feb 15, 2024 | 9:50 AM

Share

ಬಾಲಿವುಡ್ ಸೆಲೆಬ್ರಿಟಿಗಳ ಆಸ್ತಿಗಳ ಬಗ್ಗೆ ಎಲ್ಲರಿಗೂ ಒಂದು ಕುತೂಹಲ ಇರುತ್ತದೆ. ಯಾರ ಆಸ್ತಿ ಎಷ್ಟಿದೆ ಎಂದು ತಿಳಿದುಕೊಳ್ಳಲು ಫ್ಯಾನ್ಸ್ ಉತ್ಸುಕರಾಗಿರುತ್ತಾರೆ. ಈಗ ಬಾಲಿವುಡ್​ನ ಅಮಿತಾಭ್ ಬಚ್ಚನ್ (Amitabh Bachchan) ಹಾಗೂ ಜಯಾ ಬಚ್ಚನ್ ಅವರ ಆಸ್ತಿ ವಿವರ ಲಭ್ಯವಾಗಿದೆ.  ಜಯಾ ಬಚ್ಚನ್ ನಟನೆಯ ಜೊತೆಗೆ ರಾಜಕೀಯದಲ್ಲೂ ಬ್ಯುಸಿ ಇದ್ದಾರೆ. ಅವರು ಸಮಾಜವಾದಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಸಮಾಜವಾದಿ ಪಾರ್ಟಿಯಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ. ಈ ವೇಳೆ ಅವರು ತಮ್ಮ ಆಸ್ತಿ ವಿವರ ನೀಡಿದ್ದಾರೆ.

ನಾಮನಿರ್ದೇಶನದ ವೇಳೆ ನೀಡಿರುವ ಆಸ್ತಿ ವಿವರ ಪ್ರಕಾರ,  ಬಚ್ಚನ್ ಕುಟುಂಬ 1,578 ಕೋಟಿ ರೂಪಾಯಿ ಸ್ವತ್ತುಗಳನ್ನು ಹೊಂದಿದ್ದಾರೆ. 2022-23ರ ಅವಧಿಯಲ್ಲಿ ವೈಯಕ್ತಿವಾಗಿ ಅವರು 1.63 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಅಮಿತಾಭ್ ಬಚ್ಚನ್ ಅವರ ವೈಯಕ್ತಿಕ ನೆಟ್​ವರ್ತ್​ 273 ಕೋಟಿ ರೂಪಾಯಿ ಇದೆ. ಅವರ ಬಳಿ 54 ಕೋಟಿ ರೂಪಾಯಿಯ ಜ್ಯುವೆಲರಿ ಇದೆ. 16 ವಾಹನಗಳು ಇದ್ದು ಇದರಬೆಲೆ 17.66 ಕೋಟಿ ರೂಪಾಯಿ ಆಗಿದೆ.

ಜಯಾ ಬಚ್ಚನ್ ಅವರ ಬಳಿ 40.97 ಕೋಟಿ ರೂಪಾಯಿ ಜ್ಯುವೆಲರಿ ಇದೆ. ಅವರ ಬಳಿ ವಾಹನಗಳ ಸಂಖ್ಯೆ ಕಡಿಮೆ. ಇಬ್ಬರಿಂದ 849 ಕೋಟಿ ರೂಪಾಯಿ ಚರಾಸ್ತಿ ಇದೆ. ಜಯಾ ಬಚ್ಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 10 ಕೋಟಿ ರೂಪಾಯಿ ಇದೆ. ಅಮಿತಾಭ್ ಬಚ್ಚನ್ ಬಳಿ 120 ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇದೆ! ವಿವರವಾಗಿ ಹೇಳಬೇಕು ಎಂದರೆ ಅವರ ಖಾತೆಯಲ್ಲಿ 120,45,62,083 ರೂಪಾಯಿ ಇದೆ.

ಇದನ್ನೂ ಓದಿ: ಎರಡನೇ ಬಾರಿ ಅಯೋಧ್ಯೆಗೆ ಭೇಟಿ ನೀಡಿದ ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​

ಜಯಾ ಬಚ್ಚನ್ ಅವರಿಗೆ ಬೇರೆ ಬೇರೆ ಮೂಲಗಳಿಂದ ಹಣ ಬರುತ್ತದೆ. ಬ್ರ್ಯಾಂಡ್​ಗಳ ಪ್ರಚಾರ, ಎಂಪಿ ಸ್ಯಾಲರಿ ಹಾಗೂ ಸಿನಿಮಾಗಳಿಂದ ಹಣ ಬರುತ್ತದೆ. ಅಮಿತಾಭ್ ಬಚ್ಚನ್ ಅವರಿಗೆ ಬಡ್ಡಿ, ಬಾಡಿಗೆ, ಡಿವಿಡಂಟ್, ಸೋಲಾರ್ ಪ್ಲ್ಯಾಂಟ್ ಮೊದಲಾದ ಕಡೆಗಳಿಂದ ಹಣ ಬರುತ್ತದೆ ಎಂದು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:44 am, Thu, 15 February 24

ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು
ಜೈಲಲ್ಲಿ ಖಾಕಿ ಕಾರ್ಯಾಚರಣೆಗೆ ಪತರುಗುಟ್ಟಿದ ಕೈದಿಗಳು