AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಸೆ ಐಶ್ವರ್ಯಾ ರೈ ಬಗ್ಗೆ ಮಾತನಾಡಿದ ರಾಹುಲ್​ಗೆ ಪರೋಕ್ಷವಾಗಿ ತಿವಿದ ಅಮಿತಾಭ್ ಬಚ್ಚನ್

ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹಲವು ಬಾರಿ ಐಶ್ವರ್ಯಾ ರೈ ಹಾಗೂ ಅಮಿತಾಭ್ ಬಚ್ಚನ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ನಡುವೆ ಅಮಿತಾಭ್ ಬಚ್ಚನ್ ಟ್ವೀಟ್​ ಮಾಡಿದ್ದು, ರಾಹುಲ್ ಹೆಸರು ಹೇಳದೆ ಪರೋಕ್ಷವಾಗಿ ತಿವಿದಿದ್ದಾರೆ. ಎಲ್ಲವನ್ನೂ ಬದಿಗಿಟ್ಟು ಸಂಜೆ ವೇಳೆ ದೈಹಿಕ ಹಾಗೂ ಮಾನಸಿಕ ಆರೋಗ್ಯದತ್ತ ಗಮನಹರಿಸುತ್ತಿದ್ದೇನೆ’ ಎಂದು ಬಿಗ್ ಬಿ ಬರೆದಿದ್ದಾರೆ.

ಸೊಸೆ ಐಶ್ವರ್ಯಾ ರೈ ಬಗ್ಗೆ ಮಾತನಾಡಿದ ರಾಹುಲ್​ಗೆ ಪರೋಕ್ಷವಾಗಿ ತಿವಿದ ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್
ನಯನಾ ರಾಜೀವ್
|

Updated on:Feb 22, 2024 | 1:49 PM

Share

ತಮ್ಮ ಸೊಸೆ ಐಶ್ವರ್ಯಾ ರೈ(Aishwarya Rai) ಬಗ್ಗೆ ಮಾತನಾಡಿದ ರಾಹುಲ್​ ಗಾಂಧಿ(Rahul Gandhi)ಗೆ ಪರೋಕ್ಷವಾಗಿ ಅಮಿತಾಭ್ ಬಚ್ಚನ್(Amitabh Bachchan) ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಹಲವು ಬಾರಿ ಐಶ್ವರ್ಯಾ ರೈ ಹಾಗೂ ಅಮಿತಾಭ್ ಹೆಸರನ್ನು ರಾಹುಲ್ ಪ್ರಸ್ತಾಪಿಸಿದ್ದರು. ಇದರ ಬೆನ್ನಲ್ಲೇ ಬಿಗ್ ಬಿ ಅಮಿತಾಭ್ ಬಚ್ಚನ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದು, ‘ಎಲ್ಲವನ್ನೂ ಬದಿಗಿಟ್ಟು ಸಂಜೆ ವೇಳೆ ದೈಹಿಕ ಹಾಗೂ ಮಾನಸಿಕ ಆರೋಗ್ಯದತ್ತ ಗಮನಹರಿಸುತ್ತಿದ್ದೇನೆ’ ಎಂದು ನುಣುಪಾಗಿ ಬರೆದಿದ್ದಾರೆ.

ಹಿತೈಷಿಗಳ ಒತ್ತಡ ಮತ್ತು ಬೆಂಬಲದಿಂದ ನೀವೆಲ್ಲರೂ ನನ್ನೊಂದಿಗೆ ಇದ್ದೀರಿ, ಸಕಾರಾತ್ಮಕ ಚಿಂತನೆಯೊಂದಿಗೆ ನನ್ನೊಂದಿಗೆ ನಡೆದುಕೊಳ್ಳುತ್ತೀರಿ. ಇದು ಬದುಕಲು ನನಗೆ ಹೊಸ ಭರವಸೆ ಮತ್ತು ಧೈರ್ಯವನ್ನು ನೀಡುತ್ತದೆ. ಈ ಪ್ರಾರ್ಥನೆ ಮತ್ತು ಪ್ರೀತಿ ಯಾವಾಗಲೂ ಇರುತ್ತದೆ  ಎಂದಿದ್ದಾರೆ. ಅಮಿತಾಭ್ ಬಚ್ಚನ್ ತಮ್ಮ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಯಾವುದೇ  ಪ್ರತಿಕ್ರಿಯೆಯನ್ನು ನೀಡಿಲ್ಲ.

ಅಮಿತಾಭ್ ಟ್ವೀಟ್​

ವಿವಾದ ಏನು? ಮಂಗಳವಾರ ಉತ್ತರ ಪ್ರದೇಶದ ಪ್ರಯಾಗ್​ರಾಜ್ ಯಾತ್ರೆ ವೇಳೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡುವ ವೇಳೆ, ನೀವು ರಾಮ ಮಂದಿರ ಪ್ರಾಣ ಪ್ರತಿಷ್ಠೆಯನ್ನು ನೋಡಿದ್ದೀರಾ, ಅಲ್ಲಿ ನೀವು ಒಬಿಸಿ, ಎಸ್​ಸಿ, ಎಸ್ಟಿ ಮುಖವನ್ನು ನೋಡಿದ್ದೀರಾ? ಅಮಿತಾಭ್ ಬಚ್ಚನ್ , ಐಶ್ವರ್ಯ ರೈ ಮತ್ತು ಪ್ರಧಾನಿ ಮೋದಿ ಇದ್ದರು, ಆದರೆ ನಿಜವಾಗಿ ದೇಶವನ್ನು ನಡೆಸುವವರನ್ನು ಅಲ್ಲಿ ನೋಡಿದ್ದೀರಾ ಎಂದು ಪ್ರಶ್ನಿಸಿದ್ದರು. ಜನವರಿ 22ರಂದು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಿತು. ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಆಗಮಿಸಿದ್ದರು.

ದೇಶದಲ್ಲಿ ಶೇಕಡಾ 50 ರಷ್ಟು ಜನರು ಹಿಂದುಳಿದ ವರ್ಗಕ್ಕೆ ಸೇರಿದವರು. ಶೇಕಡಾ 15 ರಷ್ಟು ದಲಿತರು, ಶೇಕಡಾ 8 ರಷ್ಟು ಬುಡಕಟ್ಟು ಹಾಗೂ ಶೇಕಡಾ 15ರಷ್ಟು ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದವರು. ಆದರೆ ನೀವೂ ಎಷ್ಟೇ ಹೋರಾಡಿ, ಕೂಗಾಡಿ ಈ ದೇಶದಲ್ಲಿ ಇವರಿಗೆಲ್ಲ ಉದ್ಯೋಗ ಸಿಗುವುದಿಲ್ಲ, ಪ್ರಧಾನಿ ಮೋದಿಗೆ ಉದ್ಯೋಗ ನೀಡಲು ಇಷ್ಟ ಕೂಡ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿ ಹಂಚಿಕೊಂಡ ವಿಡಿಯೋ

ಐಶ್ವರ್ಯ ರೈಯನ್ನು ರಾಹುಲ್ ಗಾಂಧಿ ನರ್ತಕಿ ಎಂದ ಹಿನ್ನೆಲೆ ಐಶ್ವರ್ಯ ರೈ ಹಾಗೂ ಅಮಿತಾಭ್ ಬಚ್ಚನ್ ಅಭಿಮಾನಿಗಳು ರಾಹುಲ್ ಗಾಂಧಿ ವಿರುದ್ಧತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.ಇನ್ನೂ ಕೆಲವರು ರಾಹುಲ್ ಗಾಂಧಿ ಅವರನ್ನ ಟ್ರೋಲ್ ಕೂಡ ಮಾಡುತ್ತಿದ್ದಾರೆ.

ಇನ್ನೂ ಮಹಿಳೆಯರ ಪರ ಧ್ವನಿ ಎತ್ತುವುದರಲ್ಲಿ ಹೆಸರುವಾಸಿಯಾಗಿರುವ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಈಗ ಮೌನವಹಿಸುರುವುದಕ್ಕೆ ಟೀಕೆ ವ್ಯಕ್ತವಾಗಿದೆ.

ಮತ್ತಷ್ಟು ಓದಿ: ರಿವೀಲ್ ಆಯ್ತು ಅಮಿತಾಭ್ ಬಚ್ಚನ್ ಬ್ಯಾಂಕ್ ಬ್ಯಾಲೆನ್ಸ್; ಲೆಕ್ಕ ಮಾಡೋಕೆ ಎರಡು ಕೈ ಬೇಕು

ಐಶ್ವರ್ಯಾ ರೈ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ಗಾಯಕಿ ಸೋನಾ ಮೋಹಪಾತ್ರ ವಿರೋಧ ಐಶ್ವರ್ಯಾ ರೈ ಹೆಸರನ್ನು ದೇಶದ ರಾಜಕೀಯಕ್ಕೆ ಅನಗತ್ಯವಾಗಿ ಎಳೆದು ತರಲಾಗಿದೆ ಎಂದು ಗಾಯಕಿ ಸೋನಾ ಮೋಹಪಾತ್ರ ಹೇಳಿದ್ದಾರೆ. ಸಮಾಜ, ಮಹಿಳೆಯರು, ಲೈಂಗಿಕತೆ, ರಾಜಕೀಯ ಮತ್ತು ಮನರಂಜನಾ ಉದ್ಯಮದ ಬಗ್ಗೆ ಆಗಾಗ್ಗೆ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಹಂಚಿಕೊಳ್ಳುವ ಸೋನಾ ಮೋಹಪಾತ್ರ ಅವರು ಬುಧವಾರ ಟ್ವೀಟ್ ಮಾಡಿ, ಸೆಕ್ಸಿಸ್ಟ್ ಆಗಿ ಲಾಭ ಪಡೆಯಲುರಾಜಕಾರಣಿಗಳು ತಮ್ಮ ಭಾಷಣಗಳಲ್ಲಿ ಮಹಿಳೆಯರನ್ನು ಕೀಳಾಗಿಸುವುದರಲ್ಲಿ ಏನಿದೆ? ಆತ್ಮೀಯ ರಾಹುಲ್ ಗಾಂಧಿ , ಖಚಿತವಾಗಿ ಯಾರಾದರೂ ನಿಮ್ಮ ಸ್ವಂತ ತಾಯಿ (ಸೋನಿಯಾ ಗಾಂಧಿ), ಸಹೋದರಿ (ಪ್ರಿಯಾಂಕಾ ಗಾಂಧಿ) ಅವರನ್ನು ಈ ಹಿಂದೆಯೂ ಇದೇ ರೀತಿ ಕೀಳಾಗಿ ನೋಡಿರಬಹುದು, ಆಗಲಾದರೂ ನೀವು ಚೆನ್ನಾಗಿ ತಿಳಿದುಕೊಳ್ಳಬೇಕಲ್ಲವೇ? ಅಲ್ಲದೆ, ಐಶ್ವರ್ಯಾ ರೈ ಸುಂದರವಾಗಿ ನೃತ್ಯ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:26 am, Thu, 22 February 24