
ಕಮಲ್ ಹಾಸನ್ (Kamal Haasan) ಅವರಿಗೆ ಇಂದು (ನವೆಂಬರ್ 7) ಜನ್ಮದಿನ. ಅವರಿಗೆ ಈಗ 71 ವರ್ಷ. ತಮಿಳು ನಾಡಿನಲ್ಲಿ ಹೆಚ್ಚು ಫೇಮಸ್ ಆದ ಅವರು ಕನ್ನಡದಲ್ಲೂ ಸಿನಿಮಾ ಮಾಡಿದ್ದಾರೆ. ತಮಿಳಿನ ಐಯ್ಯಂಗಾರ್ ಕುಟುಂಬದಲ್ಲಿ ಜನಿಸಿದ ಅವರು ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಕಲಾಧುರ ಕಣ್ಣಮ್ಮ’ (1960) ಅವರು ನಟಿಸಿದ ಮೊದಲ ಚಿತ್ರ. ಆಗ ಅವರಿಗೆ 6 ವರ್ಷ ವಯಸ್ಸು. ನಂತರ ಕಮಲ್ ಹಾಸನ್ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದರು.
ಕಮಲ್ ಹಾಸನ್ ಅವರು, ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ಬೆಂಗಾಲಿ ಭಾಷೆಗಳಲ್ಲಿ ನಟಿಸಿದ್ದಾರೆ. ಅವರು ಎಲ್ಲಾ ಭಾಷೆಗಳಲ್ಲೂ ಕಾಣಿಸಿಕೊಂಡಿದ್ದಾರೆ. ದೇಶಾದ್ಯಂತ ಅವರು ಜನಪ್ರಿಯತೆ ಪಡೆದಿದ್ದಾರೆ. ಅವರು ನಟ ಮಾತ್ರ ಅಲ್ಲ. ನಿರ್ದೇಶಕರ, ಚಿತ್ರಕಥೆ ಬರಹಗಾರ, ಗಾಯಕನೂ ಹೌದು.
ಕಮಲ್ ಹಾಸನ್ ಅವರು ಅತಿ ಹೆಚ್ಚು ಸಂಭಾವನೆ ಪಡೆಯೋ ನಟರಲ್ಲಿ ಒಬ್ಬರು. ಅವರು ಪ್ರತಿ ಸಿನಿಮಾಗೆ 100 ಕೋಟಿ ರೂಪಾಯಿ ಪಡೆಯುತ್ತಾರಂತೆ. ಅವರ ಆಸ್ತಿ 70 ಮಿಲಿಯನ್ ಡಾಲರ್. ಅಂದರೆ ಸುಮಾರು 450 ಕೋಟಿ ರೂಪಾಯಿ ಆಸ್ತಿ ಅವರನ್ನು ಹೊಂದಿದ್ದಾರೆ. ‘ಇಂಡಿಯನ್ 2’ ಚಿತ್ರಕ್ಕೆ ಅವರು 150 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು ಎನ್ನಲಾಗಿದೆ.
ಕಮಲ್ ಹಾಸನ್ ಅವರು ಲಕ್ಷುರಿ ಜೀವನ ನಡೆಸುತ್ತಿದ್ದಾರೆ. ಅವರು ಚೆನ್ನೈನಲ್ಲಿ ಮ್ಯಾನ್ಷನ್ ಹೊಂದಿದ್ದಾರೆ. ಇದರ ಬೆಲೆ 131 ಕೋಟಿ ರೂಪಾಯಿ. ಇವರ ಬಳಿ ಬಿಎಂಡಬ್ಲ್ಯೂ 730, ಲೆಕ್ಸಸ್ ಎಲ್ಎಕ್ಸ್ 570 ಸೇರಿದಂತೆ ಅನೇಕ ಕಾರುಗಳು ಇವೆ.
ಇದನ್ನೂ ಓದಿ: ‘ರ‍್ಯಾಲಿಗೆ ಬಂದವರೆಲ್ಲ ನಿಮಗೆ ವೋಟ್ ಮಾಡಲ್ಲ’; ದಳಪತಿ ವಿಜಯ್ಗೆ ಕಮಲ್ ಹಾಸನ್ ಕಿವಿಮಾತು
ಕಳೆದ ವರ್ಷ ರಿಲೀಸ್ ಆದ ‘ಥಗ್ ಲೈಫ್’ ಸಿನಿಮಾ ಸಂದರ್ಭದಲ್ಲಿ ಕಮಲ್ ಹಾಸನ್ ವಿವಾದ ಮಾಡಿಕೊಂಡಿದ್ದರು. ಕಮಲ್ ಹಾಸನ್ ಅವರು ‘ಕನ್ನಡ ಹುಟ್ಟಿದ್ದು ತಮಿಳಿನಿಂದ’ ಎಂದು ಹೇಳಿದ್ದರು. ಈ ವಿವಾದ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಆ ಬಳಿಕ ಅವರನ್ನು ಸಾಕಷ್ಟು ಟೀಕೆ ಮಾಡಿದ್ದರು. ಕರ್ನಾಟಕದಲ್ಲಿ ಅವರ ಸಿನಿಮಾ ಬ್ಯಾನ್ ಕೂಡ ಆಯಿತು. ಈ ಚಿತ್ರ ಮಾಡಿ ಸಾಕಷ್ಟು ನಷ್ಟ ಅನುಭವಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:49 am, Fri, 7 November 25