‘ಇಂಡಿಯನ್ 2’ ಬಜೆಟ್​ ಮಿತಿಮೀರಲು ಕಾರಣವೇನು? ಕಮಲ್ ಹಾಸನ್ ಕೊಟ್ಟರು ಉತ್ತರ

1996ರ ಮೇ 9ರಂದು ‘ಇಂಡಿಯನ್’ ಸಿನಿಮಾ ರಿಲೀಸ್ ಆಯಿತು. ‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್, ಸಿದ್ದಾರ್ಥ್, ಕಾಜಲ್ ಅಗರ್​ವಾಲ್, ರಕುಲ್ ಪ್ರೀತ್ ಸಿಂಗ್, ಬಾಬಿ ಸಿಂಹ, ಪ್ರಿಯಾ ಭವಾನಿ ಶಂಕರ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾದ ಬಜೆಟ್ ಮೀರಲು ಕಾರಣ ಏನು ಎಂಬುದನ್ನು ಕಮಲ್ ಹಾಸನ್ ನೀಡಿದ್ದಾರೆ.

‘ಇಂಡಿಯನ್ 2’ ಬಜೆಟ್​ ಮಿತಿಮೀರಲು ಕಾರಣವೇನು? ಕಮಲ್ ಹಾಸನ್ ಕೊಟ್ಟರು ಉತ್ತರ
ಕಮಲ್ ಹಾಸನ್
Edited By:

Updated on: Jun 26, 2024 | 7:57 AM

ಕಮಲ್ ಹಾಸನ್ (Kamal Haasan) ಅವರ ನಟನೆಯ ‘ಇಂಡಿಯನ್ 2’ ಸಿನಿಮಾ ರಿಲೀಸ್​ಗೆ ರೆಡಿ ಇದೆ. 1996ರಲ್ಲಿ ‘ಇಂಡಿಯನ್’ ಸಿನಿಮಾ ರಿಲೀಸ್ ಆಗಿತ್ತು. ಇದಾದ 28 ವರ್ಷಗಳ ಬಳಿಕ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗಿದ್ದು, ಜುಲೈ 12ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈ ಚಿತ್ರದ ಬಜೆಟ್ ಮಿತಿಮೀತಿದೆ. ಹೀಗೇಕೆ ಅನ್ನೋ ಪ್ರಶ್ನೆ ಅನೇಕರಲ್ಲಿ ಇದೆ. ಇದಕ್ಕೆ ಸ್ವತಃ ಕಮಲ್ ಹಾಸನ್ ಅವರು ಉತ್ತರ ನೀಡಿದ್ದಾರೆ. ‘ಕೊವಿಡ್ ಹಾಗೂ ಸಿನಿಮಾ ಸೆಟ್​ನಲ್ಲಿ ನಡೆದ ಅವಘಡಗಳಿಂದ ಚಿತ್ರದ ಬಜೆಟ್ ಮೀರಿದೆ’ ಎಂದಿದ್ದಾರೆ ಕಮಲ್ ಹಾಸನ್. ಈ ಚಿತ್ರವನ್ನು ಎಸ್​. ಶಂಕರ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

‘ಸ್ಕ್ರಿಪ್ಟ್ ಹಾಗೂ ನಿರ್ದೇಶಕರು ಮಾತ್ರ ಚಿತ್ರದ ಬಜೆಟ್ ನಿರ್ಧರಿಸುವುದಿಲ್ಲ. ಕೊವಿಡ್ ನಮ್ಮ ಬಜೆಟ್​ನ ನಿರ್ಧರಿಸಿತು. ಸೆಟ್​ನಲ್ಲಿ ನಡೆದ ಅವಘಡಗಳಿಂದ ಬಜೆಟ್ ಗಾತ್ರ ಹೆಚ್ಚಿತು. ಚಿತ್ರ ಹಿಟ್ ಆಗುವ ಮುನ್ನವೇ ನಿರ್ಮಾಪಕ ಮತ್ತು ನಿರ್ದೇಶಕರು ತೋರಿದ ದೃಢತೆಯನ್ನು ಮೆಚ್ಚಲೇಬೇಕು. ನಿಮ್ಮ ಕೈ ನೋಯುತ್ತಿದ್ದರೆ ಅದನ್ನು ನೀವು ಬಿಟ್ಟು ಬಿಡುತ್ತೀರಿ. ಅದು ತುಂಬಾ ಸುಲಭ. ಆದರೆ, ಅವರು ಹಾಗೆ ಮಾಡಿಲ್ಲ. ಈ ಮಗುವನ್ನು ಬಿಡಬಾರದು, ಈ ಮಗುವನ್ನು ಅನಾಥಗೊಳಿಸಬಾರದು ಎಂಬುದು ಲೈಕಾ ಮತ್ತು ಶಂಕರ್ ತೆಗೆದುಕೊಂಡ ನಿರ್ಧಾರ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.

‘ಇಂಡಿಯನ್ 2’ ಅನೌನ್ಸ್ ಆಗಿದ್ದು 2018ರಲ್ಲಿ. 2019ರಲ್ಲಿ ಮೊದಲ ಹಂತದ ಶೂಟಿಂಗ್ ಶುರುವಾಯಿತು. ಆ ಬಳಿಕ ಕೊವಿಡ್ ಕಾಣಿಸಿಕೊಂಡಿತು. ಶೂಟ್ ವೇಳೆ ಕ್ರೇನ್ ಅವಘಡ ಸಂಭವಿಸಿ ಕೆಲವರು ಮೃತಪಟ್ಟರು. ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಯಿತು. ಇದರಿಂದ ಶೂಟಿಂಗ್ ನಿಂತಿತ್ತು. ಎಲ್ಲವೂ ಸರಿ ಆಯಿತು ಎನ್ನುವಾಗ ಲೈಕಾ ಪ್ರೊಡಕ್ಷನ್ ಹಾಗೂ ನಿರ್ದೇಶಕ ಶಂಕರ್ ಮಧ್ಯೆ ಕಿರಿಕ್ ಆಯಿತು. ಕೊನೆಗೂ ಇದೆಲ್ಲ ಸಮಸ್ಯೆ ಪರಿಹರಿಸಿಕೊಂಡು ತಂಡ ಜನರ ಎದುರು ಬರುತ್ತಿದೆ.

ಇದನ್ನೂ ಓದಿ: ಹಲವು ಗೆಟಪ್​ನಲ್ಲಿ ಬಂದ ಕಮಲ್ ಹಾಸನ್; ಗಮನ ಸೆಳೆಯಿತು ‘ಇಂಡಿಯನ್ 2’ ಟ್ರೇಲರ್

‘ಇಂಡಿಯನ್’ ಸಿನಿಮಾ 1996ರ ಮೇ 9ರಂದು ರಿಲೀಸ್ ಆಯಿತು. ‘ಇಂಡಿಯನ್ 2’ ಚಿತ್ರದಲ್ಲಿ ಕಮಲ್ ಹಾಸನ್, ಸಿದ್ದಾರ್ಥ್, ಕಾಜಲ್ ಅಗರ್​ವಾಲ್, ರಕುಲ್ ಪ್ರೀತ್ ಸಿಂಗ್, ಬಾಬಿ ಸಿಂಹ, ಪ್ರಿಯಾ ಭವಾನಿ ಶಂಕರ್ ಮೊದಲಾದವರು ನಟಿಸಿದ್ದಾರೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ನಟನೆಯ ‘ಸರ್ಫಿರಾ’ ಜೊತೆ ಈ ಚಿತ್ರ ಕ್ಲ್ಯಾಶ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us