ಮಾಸ್ ಆಗಿರಲಿದೆ ಕಮಲ್​ ಹಾಸನ್-ಮಣಿರತ್ನಂ ಹೊಸ ಸಿನಿಮಾ ‘ಥಗ್ ಲೈಫ್’; ಇಲ್ಲಿದೆ ಟೀಸರ್  

Thug Life Movie: ದೊಡ್ಡ ಬಯಲು. ಕಣ್ಣು ಹಾಯಿಸದಷ್ಟೂ ಕಾಣುವಷ್ಟು ಖಾಲಿ ಪ್ರದೇಶ. ಅಲ್ಲಿ ರಂಗರಾಯ ಶಕ್ತಿವೇಲ್ ನಾಯಕ (ಕಮಲ್ ಹಾಸನ್) ನಿಂತಿದ್ದಾನೆ. ಅವನ ಎದುರು ವೈರಿಗಳ ಗುಂಪು ನಿಂತಿದೆ. ರಂಗರಾಯ ಶಕ್ತಿವೇಲ್ ನಾಯಕ ತನ್ನ ಜೀವನದ ಕಥೆ ಹೇಳಿಕೊಳ್ಳುತ್ತಾನೆ.

ಮಾಸ್ ಆಗಿರಲಿದೆ ಕಮಲ್​ ಹಾಸನ್-ಮಣಿರತ್ನಂ ಹೊಸ ಸಿನಿಮಾ ‘ಥಗ್ ಲೈಫ್’; ಇಲ್ಲಿದೆ ಟೀಸರ್   
ಕಮಲ್ ಹಾಸನ್

Updated on: Nov 07, 2023 | 7:31 AM

ಕಮಲ್ ಹಾಸನ್ (Kamal Haasan) ನಟನೆಯ, ಮಣಿರತ್ನಂ ನಿರ್ದೇಶನದ ಹೊಸ ಸಿನಿಮಾ ಇತ್ತೀಚೆಗಷ್ಟೇ ಘೋಷಣೆ ಆಗಿತ್ತು. ಚಿತ್ರದ ಟೈಟಲ್ ಈಗ ರಿವೀಲ್ ಆಗಿದೆ. ‘ಥಗ್​ ಲೈಫ್’ (Thug Life Movie) ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಟೈಟಲ್ ಟೀಸರ್ ಮೂಲಕವೇ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಮೂಡಿದೆ. ಕಮಲ್ ಹಾಸನ್ ಅವರನ್ನು ಮತ್ತೆ ಆ್ಯಕ್ಷನ್ ಅವತಾರದಲ್ಲಿ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಟೈಟಲ್ ಟೀಸರ್ ಒಂದೂವರೆ ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ.

ದೊಡ್ಡ ಬಯಲು. ಕಣ್ಣು ಹಾಯಿಸದಷ್ಟೂ ಕಾಣುವಷ್ಟು ಖಾಲಿ ಪ್ರದೇಶ. ಅಲ್ಲಿ ರಂಗರಾಯ ಶಕ್ತಿವೇಲ್ ನಾಯಕ (ಕಮಲ್ ಹಾಸನ್) ನಿಂತಿದ್ದಾನೆ. ಅವನ ಎದುರು ವೈರಿಗಳ ಗುಂಪು ನಿಂತಿದೆ. ರಂಗರಾಯ ಶಕ್ತಿವೇಲ್ ನಾಯಕ ತನ್ನ ಜೀವನದ ಕಥೆ ಹೇಳಿಕೊಳ್ಳುತ್ತಾನೆ. ‘ನಾನು ಸಣ್ಣವನಿದ್ದಾಗಲೇ ನನ್ನ ಭವಿಷ್ಯ ನಿರ್ಧಾರ ಮಾಡಿಬಿಟ್ಟಿದ್ದರು. ಶಕ್ತಿವೇಲ್ ನಾಯಕ ಕ್ರಿಮಿನಲ್, ದರೋಡೆಕೋರ, ಯಾಕೂಜಾ ಆಗುತ್ತಾನೆ ಎಂದಿದ್ದರು. ಯಾಕೂಜಾ ಎಂದರೆ ಜಪಾನ್ ಭಾಷೆಯಲ್ಲಿ ಗ್ಯಾಂಗ್​ಸ್ಟರ್ ಎಂದರ್ಥ’ ಎಂದು ಹೇಳುತ್ತಲೇ ಶಕ್ತಿವೇಲ್ ಆ್ಯಕ್ಷನ್ ಮೆರೆಯುತ್ತಾನೆ.

ಟೀಸರ್ ಉದ್ದಕ್ಕೂ ಬಿಜಿಎಂ ಗಮನ ಸೆಳೆಯುತ್ತದೆ. ಎಆರ್​ ರೆಹಮಾನ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಮಲ್ ಹಾಸನ್ ಜೊತೆ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್ ಹಾಗೂ ಜಯಮ್ ರವಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಸದ್ಯ ಸಿನಿಮಾ ನಿರೀಕ್ಷೆ ಮೂಡಿಸಿದೆ.

ಕಮಲ್ ಹಾಸನ್ ಅಭಿಮಾನಿಗಳಿಗೆ ಒಂದರ ಮೇಲೆ ಒಂದರಂತೆ ಖುಷಿ ಸುದ್ದಿ ಸಿಗುತ್ತಿದೆ. ಕಳೆದ ವರ್ಷ ‘ವಿಕ್ರಮ್’ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಈಗ ‘ಇಂಡಿಯನ್ 2’ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಇದಲ್ಲದೆ, ಇನ್ನೂ ಕೆಲವು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
YouTube video player

ಇದನ್ನೂ ಓದಿ: 36 ವರ್ಷಗಳ ಬಳಿಕ ಒಂದಾದ ಕಮಲ್-ಮಣಿರತ್ನಂ; ಹೇಗಿತ್ತು ನೋಡಿ ಸಂಗಮ

ಮಣಿರತ್ನಂ ನಿರ್ದೇಶನ ಮಾಡುವ ಪ್ರತಿ ಸಿನಿಮಾಗಳಲ್ಲೂ ಒಂದು ವಿಶೇಷತೆ ಇರುತ್ತದೆ. ಅದೇ ರೀತಿ ‘ಥಗ್​ ಲೈಫ್’ ಚಿತ್ರ ಕೂಡ ಸಾಕಷ್ಟು ಭಿನ್ನವಾಗಿರಲಿದೆ ಎನ್ನಲಾಗುತ್ತಿದೆ. ಈ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Tue, 7 November 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us