AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

36 ವರ್ಷಗಳ ಬಳಿಕ ಒಂದಾದ ಕಮಲ್-ಮಣಿರತ್ನಂ; ಹೇಗಿತ್ತು ನೋಡಿ ಸಂಗಮ

ಕಮಲ್ ಹಾಸನ್ ಅವರ 234ನೇ ಸಿನಿಮಾದ ಲಾಂಚ್ ಶುಕ್ರವಾರ (ಅಕ್ಟೋಬರ್ 27) ಚೆನ್ನೈನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮ್ಯೂಸಿಕ್ ಕಂಪೋಸರ್ ಎಆರ್​ ರೆಹಮಾನ್, ಸಂಕಲನಕಾರ ಶ್ರೀಕರ್ ಪ್ರಸಾದ್ ಹಾಗೂ ಛಾಯಾಗ್ರಾಹಕ ರವಿ ಚಂದ್ರನ್ ಮೊದಲಾದವರು ಭಾಗಿ ಆಗಿದ್ದಾರೆ.

36 ವರ್ಷಗಳ ಬಳಿಕ ಒಂದಾದ ಕಮಲ್-ಮಣಿರತ್ನಂ; ಹೇಗಿತ್ತು ನೋಡಿ ಸಂಗಮ
ಕಮಲ್​ ಹಾಸನ್​, ಮಣಿರತ್ನಂ
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 27, 2023 | 5:58 PM

Share

ಕಮಲ್ ಹಾಸನ್ (Kamal Haasan) ಅವರು ತಮಿಳು ಚಿತ್ರರಂಗದ ಸೂಪರ್​ಸ್ಟಾರ್. ರಾಜಕೀಯದಲ್ಲಿ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗದ ಕಾರಣ ಸಿನಿಮಾ ಕೆಲಸಗಳಲ್ಲೇ ಹೆಚ್ಚು ತೊಡಗಿಕೊಂಡಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ‘ವಿಕ್ರಮ್’ ಸಿನಿಮಾ ಹಿಟ್ ಆದ ಬಳಿಕವಂತೂ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ಸದ್ಯ, ಕಮಲ್ ಹಾಸನ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಇಂಡಿಯನ್ 2’ ಸಿನಿಮಾ ಕೆಲಸಗಳು ಬಹುತೇಕ ಪೂರ್ಣಗೊಂಡಿವೆ ಎನ್ನಲಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’, ಎಚ್​. ವಿನೋದ್ ನಿರ್ದೇಶನ ಮಾಡುತ್ತಿರುವ ‘KH233’ ಸಿನಿಮಾಗಳಲ್ಲಿ ಕಮಲ್ ನಟಿಸುತ್ತಿದ್ದಾರೆ. ಇದರ ಜೊತೆ ಮಣಿರತ್ನಂ (Mani Ratnam) ನಿರ್ದೇಶನ ಮಾಡುತ್ತಿರುವ KH234’ ಸಿನಿಮಾ ಕೆಲಸಗಳಲ್ಲೂ ಅವರು ತೊಡಗಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

‘ಇಂಡಿಯನ್ 2’ ಸಿನಿಮಾದ ಶೂಟಿಂಗ್ ಆರಂಭ ಆಗಿ ಕೆಲವು ವರ್ಷ ಕಳೆದಿದೆ. ಕೊವಿಡ್, ಸಿನಿಮಾ ಸೆಟ್​ನಲ್ಲಿ ನಡೆದ ಅವಘಡ ಸೇರಿ ಅನೇಕ ಕಾರಣಗಳಿಂದ ಚಿತ್ರದ ಬಿಡುಗಡೆ ದಿನಾಂಕ ವಿಳಂಬ ಆಗುತ್ತಲೇ ಇತ್ತು. ಈಗ ಸಿನಿಮಾದ ಕೆಲಸ ಭರದಿಂದ ಸಾಗುತ್ತಿದೆ. ‘ಕಲ್ಕಿ 2898 ಎಡಿ’ ಚಿತ್ರಕ್ಕೆ ಅವರು ದೊಡ್ಡ ಕಾಲ್​ಶೀಟ್ ನೀಡಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಬೇಗ ಈ ಸಿನಿಮಾ ಕೆಲಸ ಪೂರ್ಣಗೊಂಡಿದೆ. ಈಗ ಅವರು ಇನ್ನೂ ಶೀರ್ಷಿಕೆ ಇಡದ ತಮ್ಮ ನಟನೆಯ 233 ಹಾಗೂ 234ನೇ ಸಿನಿಮಾ ಕೆಲಸಗಳನ್ನು ಒಟ್ಟಿಗೆ ಆರಂಭಿಸಲಿದ್ದಾರಂತೆ.

ಕಮಲ್ ಹಾಸನ್ ಅವರ 234ನೇ ಸಿನಿಮಾದ ಲಾಂಚ್ ಶುಕ್ರವಾರ (ಅಕ್ಟೋಬರ್ 27) ಚೆನ್ನೈನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮ್ಯೂಸಿಕ್ ಕಂಪೋಸರ್ ಎಆರ್​ ರೆಹಮಾನ್, ಸಂಕಲನಕಾರ ಶ್ರೀಕರ್ ಪ್ರಸಾದ್ ಹಾಗೂ ಛಾಯಾಗ್ರಾಹಕ ರವಿ ಚಂದ್ರನ್ ಮೊದಲಾದವರು ಭಾಗಿ ಆಗಿದ್ದಾರೆ. ‘ವಿಕ್ರಮ್’, ‘ಲಿಯೋ’, ‘ಕೈದಿ’ ಸಿನಿಮಾಗಳ ಸ್ಟಂಟ್ ಕೊರಿಯೋಗ್ರಾಫರ್ ಅಂಬುಮಣಿ ಹಾಗೂ ಅರಿವುಮಣಿ ಕೂಡ ಸಮಾರಂಭದಲ್ಲಿ ಭಾಗಿ ಆಗಿದ್ದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ:  ‘ಪುಷ್ಪಕ ವಿಮಾನ’ ರೀ-ರಿಲೀಸ್; ಮಾಹಿತಿ ಕೊಟ್ಟ ನಟ ಕಮಲ್ ಹಾಸನ್

1987ರಲ್ಲಿ ‘ನಾಯಕನ್’ ಸಿನಿಮಾ ರಿಲೀಸ್ ಆಯಿತು. ಕಮಲ್ ಹಾಸನ್ ನಟನೆಯ ಈ ಚಿತ್ರಕ್ಕೆ ಮಣಿರತ್ನಂ ಅವರ ನಿರ್ದೇಶನ ಇತ್ತು. ಇದಾದ ಬಳಿಕ ಇವರು ಒಟ್ಟಾಗಿ ಕೆಲಸ ಮಾಡಿಲ್ಲ. ಈಗ 36 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ಒಂದಾಗಿದೆ. ಕಮಲ್ ಹಾಸನ್, ಮಣಿರತ್ನಂ ಮೊದಲಾದವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದಳಪತಿ ವಿಜಯ್ ನಟನೆಯ, ಲೋಕೇಶ್ ಕನಗರಾಜ್ ನಿರ್ದೇಶನದ ‘ಲಿಯೋ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈ ಸಿನಿಮಾ ಲೋಕೇಶ್ ಕನಗರಾಜ್ ಯೂನಿವರ್ಸ್​​ ಅಡಿಯಲ್ಲಿ ಮೂಡಿಬಂದಿದೆ. ಈ ಚಿತ್ರದಲ್ಲಿ ಕಮಲ್ ಹಾಸನ್ ಅವರ ಎಂಟ್ರಿ ಇರಲಿದೆ ಎನ್ನಲಾಗಿತ್ತು. ಆದರೆ, ಅವರ ಧ್ವನಿ ಮಾತ್ರ ಕೇಳಿಸಿದೆ. ‘ವಿಕ್ರಮ್’ ಚಿತ್ರದ ಸೀಕ್ವೆಲ್​ನಲ್ಲಿಯೂ ಕಮಲ್ ಹಾಸನ್ ನಟಿಸಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್