‘ಪುಷ್ಪಕ ವಿಮಾನ’ ರೀ-ರಿಲೀಸ್; ಮಾಹಿತಿ ಕೊಟ್ಟ ನಟ ಕಮಲ್ ಹಾಸನ್
ಸಿಂಗೀತಂ ಶ್ರೀನಿವಾಸ ರಾವ್ ಅವರು ‘ಪುಷ್ಪಕ ವಿಮಾನ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ರಿಲೀಸ್ ಆಗಿದ್ದು 1987ರಲ್ಲಿ. 35 ಲಕ್ಷ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಕೋಟಿಗಟ್ಟಲೆ ಕಮಾಯಿ ಮಾಡಿತ್ತು. ಈಗ ಸಿನಿಮಾ ರೀ-ರಿಲೀಸ್ ಆಗುತ್ತಿದೆ.
ಕಮಲ್ ಹಾಸನ್ (Kamal Haasan) ಅವರು ತಾವು ಎಂಥ ಅದ್ಭುತ ನಟ ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಅಭಿನಯದ ಮೂಲಕ ತಮ್ಮ ಕೈಚಳಕ ತೋರಿಸಿದ್ದಾರೆ. ‘ಪುಷ್ಪಕ ವಿಮಾನ’ ಮೂಲಕ ಕಮಲ್ ಹಾಸನ್ ಮತ್ತೊಮ್ಮೆ ಇದನ್ನು ಸಾಬೀತು ಮಾಡಿದ್ದರು. ಈ ಮೂಕಿ ಸಿನಿಮಾ ಈಗ ರೀ-ರಿಲೀಸ್ ಆಗುತ್ತಿದೆ. ಈ ಬಗ್ಗೆ ಕಮಲ್ ಹಾಸನ್ ಅವರೇ ಮಾಹಿತಿ ನೀಡಿದ್ದಾರೆ. ಈ ಸಿನಿಮಾನ ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ಕಾದು ಕುಳಿತಿದಿದ್ದಾರೆ. ಹೊಸ ತಂತ್ರಜ್ಞಾನದೊಂದಿಗೆ ಸಿನಿಮಾ ಬರಲಿದೆಯೇ ಎನ್ನುವ ಕುತೂಹಲವೂ ಮೂಡಿದೆ.
ಸಿಂಗೀತಂ ಶ್ರೀನಿವಾಸ ರಾವ್ ಅವರು ‘ಪುಷ್ಪಕ ವಿಮಾನ’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಸಿನಿಮಾ ರಿಲೀಸ್ ಆಗಿದ್ದು 1987ರಲ್ಲಿ. 35 ಲಕ್ಷ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಕೋಟಿಗಟ್ಟಲೆ ಕಮಾಯಿ ಮಾಡಿತ್ತು. ಈಗ ಸಿನಿಮಾ ರೀ-ರಿಲೀಸ್ ಆಗುತ್ತಿರುವ ಬಗ್ಗೆ ಕಮಲ್ ಹಾಸನ್ ನಿರ್ಮಾಣ ಸಂಸ್ಥೆ ಕಡೆಯಿಂದ ಮಾಹಿತಿ ಸಿಕ್ಕಿದೆ.
ಕಮಲ್ ಹಾಸನ್ ಅವರು ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಬ್ಯಾನರ್ ಮೂಲಕ ‘ಪುಷ್ಪಕ ವಿಮಾನ’ ರೀ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಬೇರೆ ಬೇರೆ ಭಾಷೆಯಲ್ಲಿ ಬೇರೆ ಬೇರೆ ಟೈಟಲ್ ನೀಡಲಾಗಿದೆ. ಹಿಂದಿಯಲ್ಲಿ ‘ಪುಷ್ಪಕ್’, ತೆಲುಗಿನಲ್ಲಿ ‘ಪುಷ್ಪಕ ವಿಮಾನಂ’ ಎಂದು ಟೈಟಲ್ ನೀಡಲಾಗಿತ್ತು.
ಇಡೀ ಸಿನಿಮಾದಲ್ಲಿ ಎಲ್ಲಿಯೂ ಸಂಭಾಷಣೆ ಬರುವುದಿಲ್ಲ. ಹೀಗಾಗಿ ಪರಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡಲು ಯಾವುದೇ ಡಬ್ಬಿಂಗ್ ಸಮಸ್ಯೆ ಬಂದಿಲ್ಲ. ಇನ್ನು, ಚಿತ್ರದಲ್ಲಿ ಹಾಸ್ಯ ಇದೆ. ಮಾತಿಲ್ಲದೆ ಹಾಸ್ಯವನ್ನು ತೋರಿಸಲಾಗಿದೆ. ಈ ಕಾರಣದಿಂದ ಸಿನಿಮಾ ಅನೇಕರಿಗೆ ಇಷ್ಟವಾಗಿತ್ತು. ಈಗಲೂ ಈ ಚಿತ್ರವನ್ನು ಇಷ್ಪಡುವವರು ಅನೇಕರಿದ್ದಾರೆ. ಈ ಕಾರಣದಿಂದ ‘ಪುಷ್ಪಕ ವಿಮಾನ’ ರೀ-ರಿಲೀಸ್ಗಾಗಿ ಎಲ್ಲರೂ ಕಾಯುತ್ತಿದ್ದಾರೆ.
#Pushpak #Pesumpadam, a pioneer in silent black comedy and an iconic masterpiece of Indian cinema, will be re-released in theatres soon. #Ulaganayagan #KamalHaasan #SingeethamSrinivasaRao@ikamalhaasan pic.twitter.com/X3LKO1pMnZ
— Raaj Kamal Films International (@RKFI) September 16, 2023
ಇದನ್ನೂ ಓದಿ: 25 ಕೋಟಿ ರೂಪಾಯಿ ಮೋಸ ಹೋದ ಕಮಲ್ ಹಾಸನ್ ಮಾಜಿ ಪಾರ್ಟ್ನರ್ ಗೌತಮಿ
ಕಮಲ್ ಹಾಸನ್ ಜೊತೆ ಸಮೀರ್ ಕಕ್ಕರ್, ಟೀನು ಆನಂದ್, ಕೆಎಸ್ ರಮೇಶ್, ಅಮಲಾ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಶೂಟಿಂಗ್ ಬೆಂಗಳೂರಿನ ಹೈಲ್ಯಾಂಡ್ ಹೋಟೆಲ್ನಲ್ಲಿ ನಡೆದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:44 am, Sun, 17 September 23