ಎರಡೂವರೆ ಗಂಟೆ ಸಿನಿಮಾನ ಒಂದೇ ಟೇಕ್​ನಲ್ಲಿ ಮಾಡಿ ಮುಗಿಸಿದ ‘ಯಂಗ್ ಮ್ಯಾನ್’ ತಂಡ

ದೀರ್ಘ ದೃಶ್ಯವನ್ನು ಒಂದು ಟೇಕ್​ನಲ್ಲಿ ಕಟ್ಟಿಕೊಡಬೇಕು ಎಂದರೆ ಅದು ದೊಡ್ಡ ಸವಾಲು. ಐದು ಅಥವಾ ಹತ್ತು ನಿಮಿಷದ ಒಂದೇ ಟೇಕ್​ನ ದೃಶ್ಯ ಮಾಡಬೇಕು ಎಂದರೆ ಅದಕ್ಕೆ ಸಾಕಷ್ಟು ಸಿದ್ಧತೆ ಬೇಕು. ಹೀಗಿರುವಾಗ 2 ಗಂಟೆ 38 ನಿಮಿಷದ ಚಿತ್ರವನ್ನು ಒಂದೇ ಟೇಕ್​ನಲ್ಲಿ ಮಾಡಿ ಮುಗಿಸೋದು ಎಂದರೆ ಅದು ಸುಲಭದ ವಿಚಾರ ಅಲ್ಲವೇ ಅಲ್ಲ.

ಎರಡೂವರೆ ಗಂಟೆ ಸಿನಿಮಾನ ಒಂದೇ ಟೇಕ್​ನಲ್ಲಿ ಮಾಡಿ ಮುಗಿಸಿದ ‘ಯಂಗ್ ಮ್ಯಾನ್’ ತಂಡ
ಯಂಗ್ ಮ್ಯಾನ್ ತಂಡ
Follow us
ರಾಜೇಶ್ ದುಗ್ಗುಮನೆ
|

Updated on: Sep 17, 2023 | 2:32 PM

ಕನ್ನಡ ಚಿತ್ರರಂಗದಲ್ಲಿ ಹಲವು ದೊಡ್ಡ ಬಜೆಟ್ ಸಿನಿಮಾಗಳು ಸಿದ್ಧಗೊಳ್ಳುತ್ತವೆ. ಅದೇ ರೀತಿ ಅನೇಕ ಪ್ರಯೋಗಗಳು ನಡೆಯುತ್ತವೆ. ಈಗ ಹೊಸ ತಂಡವೊಂದು ಚಾಲೆಂಜಿಂಗ್ ಪ್ರಯತ್ನ ಮಾಡಿದೆ. 2 ಗಂಟೆ 38 ನಿಮಿಷಗಳ ಅವಧಿಯ ‘ಯಂಗ್ ಮ್ಯಾನ್’ ಚಿತ್ರವನ್ನು (Young Man Movie) ಸಿಂಗಲ್ ಟೇಕ್​​ನಲ್ಲಿ ಮಾಡಿ ಮುಗಿಸಲಾಗಿದೆ. ಈ ಸಿನಿಮಾ ಹೇಗಿದೆ ಎಂದು ನೋಡುವ ತವಕ ಸಿನಿಪ್ರಿಯರಲ್ಲಿ ಮೂಡಿದೆ. ಮೊದಲ ಸಿನಿಮಾದಲ್ಲೇ ನಿರ್ದೇಶಕ ಮುತ್ತುರಾಜ್ ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ದೀರ್ಘ ದೃಶ್ಯವನ್ನು ಒಂದು ಟೇಕ್​ನಲ್ಲಿ ಕಟ್ಟಿಕೊಡಬೇಕು ಎಂದರೆ ಅದು ದೊಡ್ಡ ಸವಾಲು. ಐದು ಅಥವಾ ಹತ್ತು ನಿಮಿಷದ ಒಂದೇ ಟೇಕ್​ನ ದೃಶ್ಯ ಸೆರೆ ಹಿಡಿಯಬೇಕು ಎಂದರೆ ಅದಕ್ಕೆ ಸಾಕಷ್ಟು ಸಿದ್ಧತೆ ಬೇಕು. ಹೀಗಿರುವಾಗ 2 ಗಂಟೆ 38 ನಿಮಿಷದ ಚಿತ್ರವನ್ನು ಒಂದೇ ಟೇಕ್​ನಲ್ಲಿ ಮಾಡಿ ಮುಗಿಸೋದು ಎಂದರೆ ಅದು ಸುಲಭದ ವಿಚಾರ ಅಲ್ಲವೇ ಅಲ್ಲ. ‘ಯಂಗ್ ಮ್ಯಾನ್’ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಲು ಇದು ಪ್ರಮುಖ ಕಾರಣ.

ಈ ಮೊದಲು ಹಲವು ನಿರ್ದೇಶಕರ ಬಳಿ ಮುತ್ತುರಾಜ್ ಅವರು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಇದು ಅವರಿಗೆ ಪ್ರಥಮ ಸಿನಿಮಾ. ಮೊದಲ ಸಿನಿಮಾದಲ್ಲಿ ಒಂದು ವಿಶೇಷತೆ ಇರಬೇಕು ಎನ್ನುವ ಕಾರಣಕ್ಕೆ ಒಂದೇ ಟೇಕ್​ನ ಸಿನಿಮಾ ಮಾಡಿ ತೋರಿಸಿದ್ದಾರೆ. ಈ ಮೊದಲು ಶಂಕರ್ ನಾಗ್, ಎಸ್. ನಾರಾಯಣ್ ಮುಂತಾದವರು ಈ ಪ್ರಯತ್ನ ಮಾಡಿದ್ದರು. ಆ ಚಿತ್ರಗಳ  ಸ್ಫೂರ್ತಿಯಿಂದ ಮುತ್ತುರಾಜ್ ಈ ಪ್ರಯತ್ನ ಮಾಡಿದ್ದಾರೆ.

‘ಯಂಗ್ ಮ್ಯಾನ್’ ಚಿತ್ರದ ಶೂಟ್​​ಗೂ ಮೊದಲು ಮೂರು ತಿಂಗಳು ಪೂರ್ವ ತಯಾರಿ ಮಾಡಿಕೊಳ್ಳಲಾಗಿತ್ತು. ಈ ಚಿತ್ರದಲ್ಲಿ ನಟಿಸಿರುವ ಬಹುತೇಕರು ಹೊಸಬರು. ಈ ಕಾರಣಕ್ಕೆ ತರಬೇತಿ ನೀಡಿ ಬಳಿಕ ಶೂಟಿಂಗ್ ಮಾಡಲಾಯಿತು. ಈ ಸಿನಿಮಾ ದೇಶಪ್ರೇಮದ ಕಥೆ ಆಧರಿಸಿದೆ. ‘ಯಾರೂ ಊಹಿಸಲಾಗದ ರೀತಿಯಲ್ಲಿ ಸಿನಿಮಾದ ಕ್ಲೈಮ್ಯಾಕ್ಸ್ ಇದೆ. ನನ್ನ ಕನಸ್ಸನ್ನು ನನಸು ಮಾಡಿದ ಎಲ್ಲರಿಗೂ ಧನ್ಯವಾದ’ ಎಂದರು ಮುತ್ತುರಾಜ್.

ಸಿಂಗಲ್ ಟೇಕ್ ಸಿನಿಮಾ ಮಾಡುವಾಗ ದೊಡ್ಡ ಚಾಲೆಂಜ್ ಇರೋದು ಛಾಯಾಗ್ರಾಹಕನಿಗೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಸೆರಿಹಿಡಿಯಬೇಕಾಗುತ್ತದೆ. ವೀನಸ್ ನಾಗರಾಜ್ ಮೂರ್ತಿ ಅವರು ಈ ಚಿತ್ರದ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಈ ಸಿನಿಮಾ ಲಿಮ್ಕಾ ದಾಖಲೆ ಹಾಗೂ ಕೆಲವು ಚಿತ್ರೋತ್ಸವಗಳಿಗೆ ಕಳುಹಿಸುತ್ತಿರುವುದಾಗಿ ಕ್ರಿಯೇಟಿವ್ ಹೆಡ್ ಮುರಳಿ ತಿಳಿಸಿದ್ದಾರೆ.

ಇದನ್ನೂ ಓದಿ: ಶನಿವಾರ ಬಂಗಾರದ ಬೆಳೆ ತೆಗೆದ ‘ಜವಾನ್’; ಎರಡನೇ ವಾರವೂ ಮುಂದುವರಿದ ಸಿನಿಮಾ ಅಬ್ಬರ

ಈ ಚಿತ್ರವನ್ನು ವಿಜಯಲಕ್ಷ್ಮಿ ರಾಮೇಗೌಡ, ಹರೀಶ್ ಹೆಚ್.ಎಸ್ ನಿರ್ಮಾಣ ಮಾಡಿದ್ದಾರೆ. ನಯನ ಪುಟ್ಟಸ್ವಾಮಿ, ಸುನೀಲ್ ಗೌಡ, ಹರೀಶ್ ಆಚಾರ್ಯ, ರಾಶಿಕ ಪುಟ್ಟಸ್ವಾಮಿ, ಆನಂದ್ ಕೆಂಗೇರಿ, ತನುಜಾ, ಶೃತಿ ಗೌಡ ಮೊದಲಾದವರು ತಾರಾ ಬಳಗದಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ