AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ರಾಪ್ತರ ಮೇಲಿನ ದೌರ್ಜನ್ಯದ ವಿರುದ್ಧ ಸಿನಿಮಾ ‘ಚಿಕ್ಕು’: ಸುದೀಪ್ ಹಾರೈಕೆಯೊಂದಿಗೆ ಕನ್ನಡದಲ್ಲಿ ಬಿಡುಗಡೆ

Chikku: ಏತಕಿ ಎಂಟರ್ಟೈನ್ಮೆಂಟ್‍ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ‘ಚಿಕ್ಕು’ ಸಿನಿಮಾದ ವಿತರಣಾ ಹಕ್ಕುಗಳನ್ನು ಕರ್ನಾಟಕದ ಜನಪ್ರಿಯ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ.ಅರ್.ಜಿ. ಸ್ಟುಡಿಯೋಸ್ ಪಡೆದುಕೊಂಡಿದ್ದು, ಈ ಸಿನಿಮಾವನ್ನು ಸೆ. 28ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

ಅಪ್ರಾಪ್ತರ ಮೇಲಿನ ದೌರ್ಜನ್ಯದ ವಿರುದ್ಧ ಸಿನಿಮಾ 'ಚಿಕ್ಕು': ಸುದೀಪ್ ಹಾರೈಕೆಯೊಂದಿಗೆ ಕನ್ನಡದಲ್ಲಿ ಬಿಡುಗಡೆ
ಚಿಕ್ಕು
ಮಂಜುನಾಥ ಸಿ.
|

Updated on: Sep 17, 2023 | 10:29 PM

Share

ಸಿನಿಮಾಗಳು (Cinema) ಸಮಾಜವನ್ನು ಎಚ್ಚರಿಸುವ, ಜಾಗೃತಿ ಮೂಡಿಸುವಂತಿರಬೇಕು, ಆದರೆ ಈಗ ಸಿನಿಮಾಗಳು ಇದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ. ಆದರೆ ಅಲ್ಲೊಂದು ಇಲ್ಲೊಂದು ಸಿನಿಮಾಗಳು ಎಂಗೇಜಿಂಗ್ ಕತೆಯ ಮೂಲಕ ಸೂಕ್ಷ್ಮ ವಿಷಯಗಳನ್ನು ಪ್ರೇಕ್ಷಕರಿಗೆ ದಾಟಿಸಲು, ಜಾಗೃತಿ ಮೂಡಿಸಲು, ಅಭಿಪ್ರಾಯ ಮೂಡಿಸುತ್ತಿವೆ. ಇದೀಗ ಇಂಥಹುದೇ ಒಂದು ಸೂಕ್ಷ್ಮ ವಿಷಯ ಇರಿಸಿಕೊಂಡು ತೆರೆಗೆ ಬಂದಿದೆ ‘ಚಿಕ್ಕು’ ಮೂಲತಃ ತಮಿಳು ಸಿನಿಮಾ ಆಗಿದ್ದರೂ ಸಹ ಕನ್ನಡದಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾಕ್ಕೆ ಸುದೀಪ್ (Sudeep) ಬೆಂಬಲ ವ್ಯಕ್ತಪಡಿಸಿದ್ದಾರೆ.

ಏತಕಿ ಎಂಟರ್ಟೈನ್ಮೆಂಟ್‍ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ‘ಚಿಕ್ಕು’ ಸಿನಿಮಾದ ವಿತರಣಾ ಹಕ್ಕುಗಳನ್ನು ಕರ್ನಾಟಕದ ಜನಪ್ರಿಯ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ.ಅರ್.ಜಿ. ಸ್ಟುಡಿಯೋಸ್ ಪಡೆದುಕೊಂಡಿದ್ದು, ಈ ಸಿನಿಮಾವನ್ನು ಸೆ. 28ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ. ‘ಚಿಕ್ಕು’ಸಿನಿಮಾನಲ್ಲಿ ಜನಪ್ರಿಯ ತ್ರಿಭಾಷಾ ನಟ ಸಿದ್ಧಾರ್ಥ್ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಅವರ ವೃತ್ತಿಜೀವನದಲ್ಲೇ ಇದೊಂದು ವಿಭಿನ್ನ ಪಾತ್ರವಾಗಿದೆ.

ಹೆಣ್ಣು ಮಗುವೊಂದರ ಮೇಲಾಗುವ ದೌರ್ಜನ್ಯದಿಂದ ಅಸಮಾಧಾನಗೊಂಡು ಅದರ ವಿರುದ್ಧ ಹೋರಾಡಿ ನ್ಯಾಯ ಸಿಗದಿದ್ದಾಗ ತಾನೇ ನ್ಯಾಯವನ್ನು ಕೈಗೆತ್ತಿಕೊಳ್ಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದ ಟೀಸರ್ ಸಿನಿಮಾದ ಕತೆಯ ಸುಳಿವನ್ನು ಅಲ್ಲಲ್ಲಿ ಬಿಟ್ಟುಕೊಡುತ್ತಿದೆ.

ಇದನ್ನೂ ಓದಿ:ಒಂದೆಡೆ ಸುದೀಪ್​, ಇನ್ನೊಂದೆಡೆ ಸಲ್ಮಾನ್​; ಒಟ್ಟಿಗೆ ಅನೌನ್ಸ್​ ಆಯ್ತು ಕನ್ನಡ-ಹಿಂದಿ ಬಿಗ್​ ಬಾಸ್​

ಈ ಚಿತ್ರದ ಟೀಸರ್ ಅನ್ನು ಇತ್ತೀಚೆಗಷ್ಟೇ ಅಭಿನಯ ಚಕ್ರವರ್ತಿ ಸುದೀಪ್‍ ಬಿಡುಗಡೆ ಮಾಡಿದ್ದು, ಸಿದ್ಧಾರ್ಥ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸಿದ್ಧಾರ್ಥ್​ ಅನ್ನು ಕರ್ನಾಟಕಕ್ಕೆ ಸ್ವಾಗತಿಸಿದ್ದಾರೆ ಸಹ. ವಿಶೇಷವೆಂದರೆ ಕನ್ನಡ ಬಾರದಿದ್ದರೂ ಕನ್ನಡ ಕಲಿತು ತಾವೇ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದಾರೆ ನಟ ಸಿದ್ಧಾರ್ಥ್.

‘ಚಿಕ್ಕು’ ಸಿನಿಮಾವು ಕನ್ನಡದ ಮಟ್ಟಿಗೆ ವಿನೂತನವಾಗಿದ್ದು, ಒಂದು ವಿಭಿನ್ನ ಕಥೆಯನ್ನು ಹೇಳುತ್ತದೆ. ಚಿತ್ರದಲ್ಲೊಂದು ಅದ್ಭುತವಾದ ಸಂದೇಶವಿದ್ದು, ಈ ವಿಷಯವು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಲಿದೆ ಎಂಬುದು ಚಿತ್ರ ತಂಡದ ನಿರೀಕ್ಷೆ. ಈ ಹಿಂದೆ ತಮಿಳಿನ ‘ಪನ್ನೈಯಾರುಂ ಪದ್ಮಿನಿಯುಂ’ ಅಂಥಹಾ ಭಿನ್ನವಾದ ಸಿನಿಮಾ ನಿರ್ದೇಶನ ಮಾಡಿದ್ದ ಎಸ್‍.ಯು.ಅರುಣ್‍ ಕುಮಾರ್ ‘ಚಿಕ್ಕು’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

‘ಚಿಕ್ಕು’ ಸಿನಿಮಾವು ಒಬ್ಬ ಚಿಕ್ಕಪ್ಪ ಮತ್ತು ಅವನ ಸೋದರ ಸೊಸೆಯ ಕುರಿತ ಕತೆಯನ್ನು ಒಳಗೊಂಡಿದೆ. ಅಪರೂಪದ ಸಂಬಂಧದ ಕುರಿತಾಗಿ ಇದೇ ಮೊದಲ ಬಾರಿಗೆ ಸಿನಿಮಾ ಒಂದು ನಿರ್ಮಾಣವಾಗಿದೆ. ಈಗಾಗಲೇ ಚಿತ್ರದ ಪ್ರಿವ್ಯೂ ಅನ್ನು ಕೆಲವರು ನೋಡಿದ್ದು, ಸಿನಿಮಾ ನೋಡಿದವರೆಲ್ಲರೂ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಸಿದ್ಧಾರ್ಥ್, ಮಲಯಾಳಂ ಚೆಲುವೆ ನಿಮಿಷಾ ಸಜಯನ್‍ ಇನ್ನೂ ಕೆಲವು ಪ್ರಮುಖ ನಟರು ನಟಿಸಿದ್ದಾರೆ. ದಿಬು ನಿನಾನ್‍ ಥಾಮಸ್‍ ಸಂಗೀತ ನಿರ್ದೇಶನ ಮಾಡಿದ್ದು, ಬಾಲಾಜಿ ಸುಬ್ರಹ್ಮಣ್ಯಂ ಕ್ಯಾಮೆರಾ ಕೆಲಸ ನಿರ್ವಹಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ